ಕಾಳುಮೆಣಸು ಧಾರಣೆ ಏರಿಕೆಯ ಹಾದಿಯಲ್ಲಿ ಸಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಕಾಳುಮೆಣಸು ಧಾರಣೆ ಏರಿಕೆಯಾಗುತ್ತಿದೆ. ಕೊಕೋ ಬಳಿಕ ಇದೀಗ ಕಾಳುಮೆಣಸು ಕೂಡಾ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಕಾರಣ, ಇಳುವರಿ ಕೊರತೆ, ಹವಾಮಾನ ಪರಿಸ್ಥಿತಿಗಳಿಂದಾಗಿ ಉತ್ಪಾದನೆಯೂ ಕುಸಿತ ಕಂಡಿದೆ. ಹೀಗಾಗಿ ಈಗ ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದೆ ಧಾರಣೆ ಏರಿಕೆಯಾಗುತ್ತಿದೆ. ಭಾರತದಲ್ಲಿ 590-600 ರೂಪಾಯಿ ಆಸುಪಾಸಿನಲ್ಲಿ ಸದ್ಯದ ಧಾರಣೆ ಇತ್ತು, ಈಗ 615 ರೂಪಾಯಿ ಸದ್ಯದ ಧಾರಣೆಯಾಗಿದೆ.…….ಮುಂದೆ ಓದಿ…..
ಕೊಕ್ಕೋ ಬಳಿಕ ಇದೀಗ ಕಾಳುಮೆಣಸು ಧಾರಣೆ ಏರಿಕೆ ಕಂಡಿದೆ. ಕೊಕ್ಕೋ ಮಾದರಿಯಲ್ಲಿಯೇ ಇಳುವರಿ ಕೊರತೆಯ ಕಾರಣದಿಂದ ಧಾರಣೆ ಏರಿಕೆ ಕಾಣುತ್ತಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ, ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಧಾರಣೆ ಏರಿಕೆಯಾಗುತ್ತಿದೆ. ಸದ್ಯ 615 ರೂಪಾಯಿಗೆ ಕಾಳುಮೆಣಸು ಖರೀದಿ ನಡೆಯುತ್ತಿದೆ.
ವಿಯೆಟ್ನಾಂನಲ್ಲಿ ಸಾರ್ವಕಾಲಿಕ ದಾಖಲೆಯ ಧಾರಣೆ ತಲಪಿದೆ.ಕಳೆದ ವಾರಕ್ಕಿಂತ ಈ ವಾರದ ಧಾರಣೆ ಶೇ.40 ರಷ್ಟು ಏರಿಕೆಯಾಗಿದೆ. ಯೂರೋಪ್, ಯುಎಸ್ ಮತ್ತು ಚೀನಾದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಪೂರೈಕೆ ಕೊರತೆ ಮತ್ತು ಹೆಚ್ಚಿದ ಬೇಡಿಕೆಯ ಕಾರಣದಿಂದ ಕಾಳುಮೆಣಸು ಬೆಲೆ ಏರಿಕೆಗೆ ತಜ್ಞರು ಕಾರಣವೆಂದು ಹೇಳುತ್ತಾರೆ.
ಈಗ ಭಾರತದಲ್ಲೂ ಕಾಳುಮೆಣಸು ಬೇಡಿಕೆ ಕಂಡುಬಂದಿದ್ದು, ಧಾರಣೆ ಹೆಚ್ಚಾಗುತ್ತಿದೆ. ವಿಯೆಟ್ನಾಂನಲ್ಲಿ ಕಾಳುಮೆಣಸು ಕೊರತೆಯ ಕಾರಣದಿಂದ ಈಗಾಗಲೇ ಬ್ರೆಜಿಲ್, ಇಂಡೋನೇಷ್ಯಾ ಮತ್ತು ಕಾಂಬೋಡಿಯಾದಿಂದ ಕಾಳುಮೆಣಸು ಆಮದು ಮಾಡಿಕೊಳ್ಳಲು ಪ್ರಾರಂಭಿಸಲಾಗಿದೆ.
ಪ್ರಮುಖವಾಗಿ ಕಾಳುಮೆಣಸು ಉತ್ಪಾದಕ ದೇಶಗಳಲ್ಲಿ ಹವಾಮಾನ ಪರಿಸ್ಥಿತಿಗಳಿಂದಾಗಿ ಕಾಳುಮೆಣಸು ಬೆಳೆ ಕೈಕೊಟ್ಟಿದೆ. ಅದರ ಜೊತೆಗೆ ಈ ಹಿಂದೆ ಕಾಳುಮೆಣಸು ಧಾರಣೆ ಕಡಿಮೆ ಇದ್ದ ಕಾರಣದಿಂದ ರೈತರು ಇತರ ಬೆಳೆಗಳಿಗೆ ಅದರಲ್ಲೂಹಣ್ಣಿನ ಬೆಳೆಗಳತ್ತ ತಮ್ಮ ಕೃಷಿಯನ್ನು ಬದಲಾಯಿಸಿದ್ದಾರೆ.ಈಗಿನ ಪರಿಸ್ಥಿತಿಯಲ್ಲಿ ವಿಯೆಟ್ನಾಂಗೆ ಮುಂದಿನ 2-3 ವರ್ಷಗಳ ಕಾಲ ಕಾಳುಮೆಣಸು ಕೊರತೆ ಕಾಡಬಹುದು, ಅದರ ಜೊತೆಗೆ ಇತರ ಕಾಳುಮೆಣಸು ಬೆಳೆಯುವ ದೇಶದಲ್ಲೂ ಹವಾಮಾನ ಪರಿಸ್ಥಿತಿ ಕೈಕೊಟ್ಟಿದೆ.
ವಿಯೆಟ್ನಾಂನ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಕಾರ, ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಕರಿಮೆಣಸು ರಫ್ತು 84,000 ಟನ್‌ಗಳಷ್ಟಿತ್ತು, ಇದು ಕಳೆದ ವರ್ಷದಿಂದ ವರ್ಷಕ್ಕೆ 18.3 ಶೇಕಡಾ ರಷ್ಟು ಕಡಿಮೆಯಾಗಿದೆ, ಆದರೆ 11.5 ರಷ್ಟು ಧಾರಣೆಯಲ್ಲಿ ಏರಿಕೆಯಾಗಿದೆ. ನಿಧಾನವಾಗಿ ಬೇಡಿಕೆ ಹೆಚ್ಚಾಗುತ್ತಿದ್ದು, ಧಾರಣೆ ಇನ್ನಷ್ಟು ಏರಿಕೆ ನಿಶ್ಚಿತವಾಗಿದೆ. ಭಾರತದಲ್ಲೂ ಈಗ ಧಾರಣೆ ಏರಿಕೆಯ ಸರದಿ ಶುರುವಾಗಿದೆ.
ಅಕ್ರಮವಾಗಿ ಸುಮಾರು 68 ಟನ್ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…
ಬದುಕಿನ ಒಂದೊಂದು ಅಂಗವೂ ‘ಕಲಾತ್ಮಕ’. ಒದಗುವ ಸುಭಗತನವು ಅನುಭವವೇದ್ಯ. ಅಡುಗೆ ಮನೆಯು ಬರೇ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಸುಡುಬಿಸಿಲಿಗೆ ಕಂಗಾಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ…
ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಏಕೀಕೃತ ಪಾವತಿ ಇಂಟರ್ ಫೇಸ್ - ಯುಪಿಐ ಸೇವೆಯ…