ಬಿಎಸ್‌ಎನ್ ಎಲ್ ಸೇವೆಯು ತನ್ನ ಸೇವೆಯ ವ್ಯಾಪ್ತಿಯನ್ನು ವಿಸ್ತಾರಗೊಳಿಸುತ್ತಿದೆ. ದೇಶದ ಗ್ರಾಮೀಣ ಭಾಗದವರೆಗೂ ನೆಟ್ವರ್ಕ್ ಹೊಂದಿರುವ ಬಿಎಸ್‌ಎನ್‌ಎಲ್ ಇಂದಿಗೂ ಇನ್ನಷ್ಟು ಗ್ರಾಮೀಣ ಭಾಗದವರೆಗೂ ತಪುಪಿಲ್ಲ. ಇದೀಗ ಭಾರತದ ಮೊದಲ ಡೈರೆಕ್ಟ್-ಟು-ಡಿವೈಸ್ ಉಪಗ್ರಹ ಸಂಪರ್ಕ ಸೇವೆಯನ್ನು ಪ್ರಾರಂಭಿಸುತ್ತಿದೆ. ಗ್ರಾಮೀಣ ಭಾಗದ ಬಳಕೆದಾರರಿಗೆ ತಡೆರಹಿತ ಸಂವಹನವನ್ನು ನೀಡುತ್ತದೆ, ಇದನ್ನು ಯುಸ್ ಮೂಲದ ಕಂಪನಿ Viasat ಜೊತೆ ಸೇರಿ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ.
ಭಾರತೀಯ ದೂರಸಂಪರ್ಕ ಇಲಾಖೆ (BSNL) ಭಾರತದ ಮೊದಲ ಉಪಗ್ರಹದಿಂದ ಸಂಪರ್ಕ ಸಾಧನದ ಸೇವೆಯನ್ನು ನೀಡಲು ಸಿದ್ಧವಾಗಿದೆ. ಯಾವುದೇ ಸ್ಥಳಗಳಲ್ಲಿ ಅಡೆತಡೆಯಿಲ್ಲದ ಸಂವಹನವನ್ನು ಒದಗಿಸುವ ಸಾಮರ್ಥ್ಯವನ್ನು ನೀಡಲು ಇಲ್ಲಿ ಸಾಧ್ಯವಿದೆ. ಕ್ಯಾಲಿಫೋರ್ನಿಯಾ ಮೂಲದ Viasat ಸಹಯೋಗದೊಂದಿಗೆ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಭೌಗೋಳಿಕ ಸವಾಲುಗಳನ್ನು ಲೆಕ್ಕಿಸದೆ ಬಳಕೆದಾರರಿಗೆ ಸಂಪರ್ಕ ಒದಗಿಸಲು ಈ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲಾಗಿದೆ.
ಈ ಉಪಗ್ರಹ ಸಂಪರ್ಕ ಸೇವೆಯು ಕಣಿವೆಯ ಪ್ರದೇಶ, ಹಳ್ಳಿಗಳ ಪ್ರದೇಶದಂತಹ ಕಡೆಗಳಲ್ಲಿ ಯಾವುದೇ ನೆಟ್ವರ್ಕ್ ಇಲ್ಲದ ಕಡೆಗಳಲ್ಲಿ ಇರುವ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಉಪಗ್ರಹ ಸಂಪರ್ಕವು ತುರ್ತು ಮತ್ತು ಮಿಲಿಟರಿ ಬಳಕೆಗೆ ಮಾತ್ರಾ ಲಭ್ಯವಿದ್ದರೂ, ಈ ಸೇವೆಯು ಮೊದಲ ಬಾರಿಗೆ ಜನಸಾಮಾನ್ಯರಿಗೂ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ, ಸೆಲ್ಯುಲಾರ್ ಅಥವಾ ವೈ-ಫೈ ನೆಟ್‌ವರ್ಕ್‌ಗಳು ಲಭ್ಯವಿಲ್ಲದ ಸಂದರ್ಭಗಳಲ್ಲಿ ಬಳಕೆದಾರರು ಸಂಪರ್ಕ ಸಾಧಿಸಲು ಇನ್ನು ಸಾಧ್ಯವಾಗುತ್ತದೆ. ಈ ಸೇವೆಯು ತುರ್ತು ಕರೆ, SoS ಸಂದೇಶ ಕಳುಹಿಸುವಿಕೆ ಮತ್ತು ಇತರ ನೆಟ್‌ವರ್ಕ್‌ಗಳು ತಲುಪದಿರುವಾಗ UPI ಪಾವತಿಗಳನ್ನು ಕೂಡಾ ಮಾಡಲು ಸಾದ್ಯವಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.
Viasat ಸಹಯೋಗದೊಂದಿಗೆ,ಬಿಎಸ್‌ಎನ್‌ಎಲ್ ದ್ವಿಮುಖ ಉಪಗ್ರಹ ಸಂವಹನವನ್ನು ಸಕ್ರಿಯಗೊಳಿಸಿದೆ, 36,000 ಕಿಮೀ ದೂರದಲ್ಲಿರುವ Viasat ನ ಎಲ್-ಬ್ಯಾಂಡ್ ಉಪಗ್ರಹಗಳಿಗೆ ಸಂಪರ್ಕಿಸುತ್ತದೆ. ಆದರೆ ಈ ಉಪಗ್ರಹ ಸಂಪರ್ಕ ಸೇವೆಯನ್ನು ಬಳಕೆದಾರರು ಹೇಗೆ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿ ಬಿಎಸ್‌ಎನ್‌ಎಲ್ ಉಲ್ಲೇಖಿಸಲಿಲ್ಲ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…