ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ರೈತರ ಹಾಗೂ ಕೃಷಿ ಬೆಳವಣಿಗೆ ಕಡೆಗೂ ಗಮನಹರಿಸಿದ್ದಾರೆ. ರೈತರ ಉತ್ಪನ್ನಗಳನ್ನು ಒಟ್ಟುಗೂಡಿಸಲು ಹೋಮ್ ಡೆಲಿವರಿ ಸ್ಪಾರ್ಟ್ಅಪ್‌ಗಳಿಗೆ ಪ್ರೋತ್ಸಾಹ ಮತ್ತು ರಾಷ್ಟ್ರೀಯ ಉಗ್ರಾಣ ಜಾಲವನ್ನು ಒಳಗೊಂಡಂತೆ ಭಾರತದ ದೀರ್ಘಕಾಲದ ಕೃಷಿ ಸಂಕಷ್ಟವನ್ನು ಎದುರಿಸಲು ವಿವಿಧ ಯೋಜನೆಯನ್ನು ಘೋಷಿಸಿದ್ದಾರೆ.
ರೈತರಿಂದ ನೇರ ಮಾರುಕಟ್ಟೆಗಾಗಿ ಮೊಬೈಲ್ ಅಪ್ಲಿಕೇಶನ್ ಆಧಾರಿತ ವ್ಯವಸ್ಥೆ, ಮೀನು ಮತ್ತು ಜಲಚರ ಸಾಕಣೆಗೆ ವಿಶಿಷ್ಟ ನಿಧಿ, ಕೃಷಿ ಉತ್ಪನ್ನದ ಗ್ರಾಮ ಸಂಗ್ರಹ ಯೋಜನೆ ಮತ್ತು ಸೌರ ಕೃಷಿಗೆ ಆದ್ಯತೆ, ಕೃಷಿ ಮಾಡದ ಗ್ರಾಮೀಣ ಭೂಮಿಯನ್ನು ಅಭಿವೃದ್ಧಿ ಪಡಿಸಲು ಯೋಜನೆ ಒಳಗೊಂಡಿದೆ. ಕೃಷಿ-ಉಪಕರಣಗಳ ಪೂರೈಕೆದಾರರಿಗೆ ಬಾಡಿಗೆ ಮತ್ತು ಕಸ್ಟಮ್ ನೇಮಕಾತಿ ಆಧಾರದ ಮೇಲೆ ಬಳಸುವ ವಿಶೇಷ ಮೊಬೈಲ್ ಅಪ್ಲಿಕೇಶನ್ ಆಧಾರಿತ ವ್ಯವಸ್ಥೆ ಜಾರಿಯಾಗಲಿದೆ. ಈ ವ್ಯವಸ್ಥೆಯು ವಿವಿಧ ಕೃಷಿ ಉತ್ಪನ್ನಗಳ ಹವಾಮಾನ ಮತ್ತು ಮಾರುಕಟ್ಟೆ ಬೆಲೆಗಳ ಮಾಹಿತಿಯನ್ನು ನೀಡುತ್ತದೆ.
ರಸಗೊಬ್ಬರಗಳ ವಿವೇಕಯುತ ಬಳಕೆಯನ್ನು ಉತ್ತೇಜಿಸಲು “ಫಲೀಕರಣ” ಯೋಜನೆ ಬರಲಿದೆ. ಫಲೀಕರಣವು ಹನಿ ಅಥವಾ ತುಂತುರು ನೀರಾವರಿ ವ್ಯವಸ್ಥೆಯಲ್ಲಿ ರಸಗೊಬ್ಬರವನ್ನು ಕರಗಿಸಿ ನೀರಿನೊಂದಿಗೆ ವಿತರಿಸುವ ಪ್ರಕ್ರಿಯೆಯಾಗಿದೆ.
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸಿಯಮ್-4 ಮಿಷನ್ನ ನಾಲ್ವರು ಗಗನಯಾತ್ರಿಗಳನ್ನು ಒಳಗೊಂಡ…
ರಾಜ್ಯದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ…
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು…
ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಘಾಲಯಕ್ಕೆ ಭೇಟಿ ನೀಡಿದ ಸಂದರ್ಭ ಹಲಸಿನ…
ವ್ಯಾಪಾರದ ಯಶಸ್ಸು ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ…