ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026 ರ ಬಜೆಟ್ ಮಂಡನೆಗೆ ಸಿದ್ಧರಾಗುತ್ತಿದ್ದಂತೆ, ಭಾರತೀಯ ಕೃಷಿಯಲ್ಲಿ ಕೆಲವು ನಿರ್ಣಾಯಕ ಬದಲಾವಣೆಯ ಹಂತದಲ್ಲಿದೆ. ಹೀಗಾಗಿ ಹಣಕಾಸು ಸಚಿವರು ಹಾಗೂ ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕಾದ ಹಲವು ಅಂಶಗಳು ಇವೆ. ಇದರಲ್ಲಿ ಸಬ್ಸಿಡಿಗಳಿಂದ ಹಿಡಿದು ಫಲಿತಾಂಶ ಆಧಾರಿತ, ಹವಾಮಾನ ಆಧಾರಿತ, ಸ್ಮಾರ್ಟ್ ಕೃಷಿಯವರೆಗೆ ಭಾರತದ ಕೃಷಿ-ಆರ್ಥಿಕತೆಯನ್ನು ಗಮನದಲ್ಲಿರಿಸಿಕೊಳ್ಳಬೇಕಿದೆ.
ವಿಕಸಿತ ಭಾರತದ ದೃಷ್ಟಿಕೋನದಿಂದಲೂ ಬಜೆಟ್ ಗಮನಿಸಿದರೆ, ರಚನಾತ್ಮಕ ಸುಧಾರಣೆಯ ಕಡೆಗೆ ಗಮನಹರಿಸಬೇಕಾದ ಅಗತ್ಯ ಇದೆ. ಸಬ್ಸೀಡಿ ಹಂಚಿಕೆಯಲ್ಲೇ ಕಾಲ ಕಳೆಯುವುದರ ಜೊತೆಗೇ ಕೃಷಿಯಲ್ಲಿ ಹೆಚ್ಚಿನ ಉತ್ಪಾದಕತೆ, ಹವಾಮಾನ ವೈಪರೀತ್ಯದಿಂದ ರಕ್ಷಣೆ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಬೆಳವಣಿಗೆಯ ಕಡೆಗೆ ಕೃಷಿಯನ್ನು ಪರಿವರ್ತಿಸಲು ನೆರವು, ಮಾರುಕಟ್ಟೆಗಳು ಮತ್ತು ಆಧುನಿಕ ವಿಜ್ಞಾನವನ್ನು ಜೋಡಿಸುವುದು ಅಗತ್ಯ ಇದೆ. ಕೃಷಿ ನೀತಿ, ಶೈಕ್ಷಣಿಕ ಮತ್ತು ಕೃಷಿ ಉದ್ಯಮದ ಕಡೆಗೆ ಗಮನಹರಿಸಬೇಕಾಗಿದೆ. ಸಬ್ಸೀಡಿಗಳನ್ನು ನೀಡಿಯೂ ಕೃಷಿ ಉತ್ಪಾದಕತೆಯಲ್ಲಿ ಹೆಚ್ಚಳವಾಗಿಲ್ಲ, ಹವಾಮಾನ ವಿಪರೀತವಾಗಿ ಸಮಸ್ಯೆ ತಂದಿದೆ. ಫಲಿತಾಂಶ ಆಧಾರಿತವಾಗಿ ಕೃಷಿ ಬೆಳೆಯುತ್ತಿಲ್ಲ . ಈಗ ಡಿಜಿಟಲ್ ಆಗಿಯೂ ಕೃಷಿ ಬೆಳೆವಣಿಗೆಯನ್ನು ಪರಿಶೀಲಿಸಬಹುದಾದ ಅಗತ್ಯ ಇದೆ. ರೈತರ ಜೀವನ, ಮಣ್ಣಿನ ದೃಷ್ಟಿಯಿಂದಲೂ ಗಮನಿಸಿದಾಗ ಮಣ್ಣು ಮತ್ತು ನೀರಿನ ಆರೋಗ್ಯದ ರಕ್ಷಣೆಗೆ ಆದ್ಯತೆ ಅಗತ್ಯ ಇದೆ.
ಈ ಎಲ್ಲಾ ಕಾರಣದಿಂದ ಈ ಬಾರಿ ಹವಾಮಾನದ ನಿಖರತೆಗೆ ಎಐ, ನಿಖರ ಪೋಷಣೆ, ಡಿಜಿಟಲ್ ಭೂ ದಾಖಲೆಗಳು, ಮೌಲ್ಯವರ್ಧಿತ ರಫ್ತುಗಳನ್ನು ಸಂಯೋಜಿಸುವ ಮಿಷನ್, ಪೋಷಕಾಂಶ ದಕ್ಷತೆಯ ಸೂಚ್ಯಂಕಗಳಿಂದ ಕೃಷಿ ಡ್ರೋನ್‌ಗಳು, ಡಿಜಿಟಲ್ ಫಾರ್ಮ್ ಐಡಿಗಳು, ನೀರಾವರಿ ಮತ್ತು ತ್ಯಾಜ್ಯ-ಮುಕ್ತ ಮಾರುಕಟ್ಟೆ ವ್ಯವಸ್ಥೆ, ಉತ್ಪಾದಕತೆ, ಸುಸ್ಥಿರತೆ ಮತ್ತು ಆದಾಯದ ಫಲಿತಾಂಶಗಳು ಸೇರಿದಂತೆ ಭಾರತೀಯ ಕೃಷಿ ಬೆಳವಣಿಗೆಗೆ ಹೆಚ್ಚಿನ ತಾಂತ್ರಿಕ ಅಗತ್ಯಗಳೂ ಇವೆ. ಬಜೆಟ್ ರೂಪಿಸುವ ವೇಳೆ ಇಂತಹ ಆದ್ಯತೆಗಳ ಕಡೆಗೂ ಗಮನ ಅಗತ್ಯವಿದೆ.
ಮೂಲ : ಎಗ್ರೋ ಸ್ಪೆಕ್ಟ್ರಂ
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…