ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರಿಂದ ಬಜೆಟ್‌ ವಿಶ್ಲೇಷಣೆ |

February 1, 2025
7:07 PM
‌ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರು ಈ ಬಾರಿಯ ಬಜೆಟ್‌ ಬಗ್ಗೆ ಮಾಡಿರುವ ವಿಶ್ಲೇಷಣೆ ಇಲ್ಲಿದೆ.

ತೀರಾ ಸರಳವಾಗಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ್ದಾರೆ. ಯಾವುದೇ ನಾಟಕೀಯ ಘೋಷಣೆಗಳನ್ನು ಮಾಡದಿರೋದು ವಿಶೇಷ. ಬಜೆಟ್ ಹಿನ್ನಲೆಯನ್ನು ಗಮನಿಸಿದರೆ ಸರಕಾರ ಯಾಕೆ ಸೈಲೆಂಟಾದ ಬಜೆಟ್ ಮಂಡಿಸಿದೆ ಅಂತಾ ಅರಿವಾಗಬಹುದು. ನಿನ್ನೆಯ ಎಕನಾಮಿಕ್ ಸರ್ವೇಯಲ್ಲಿ ಆರ್ಥಿಕ ಸಲಹಾಗಾರ ನಾಗೇಶ್ವರನ್ ಅವರು ಬಹಳ ಸೂಕ್ಷ್ಮವಾಗಿ ಅಂದರೆ ಹೆಚ್ಚಿನವರಿಗೂ ಅರಿವಿಗೆ ಬಾರದ ರೀತಿಯಲ್ಲಿ ಜಿಡಿಪಿ ಬೆಳವಣಿಗೆಯಲ್ಲಿ ನಿಧಾನ ಆಗಿರುವುದನ್ನು ಉಲ್ಲೇಕ ಮಾಡಿದ್ದಾರೆ. ಅಲ್ಲದೇ ಅದಕ್ಕೆ ಆರ್ಥಿಕತೆಯಲ್ಲಿರುವ ಆಂತರಿಕ ಸವಾಲುಗಳು (structural problems) ಕಾರಣ ಅಂತಾ ಗುರುತು ಮಾಡಿದ್ದಾರೆ. 1% GDP ಬೆಳವಣಿಗೆ ಕಡಿತ ಅಂದರೆ ಕೆಲವು ಲಕ್ಷ ಕೋಟಿಗಳ ಕಡಿತ ಆಗುವ ಕಾರಣಕ್ಕಾಗಿ ಸರಕಾರದ ಆಧಾಯ ನಿರೀಕ್ಷಿತವಾಗಿಯೇ ಬಹಳ ಕಡಿಮೆ ಆಗುವುದು. ಆವಾಗ ಹೊಸ ಯೋಜನೆಗಳನ್ನ ಘೋಷಣೆ ಮಾಡುವುದು ಅಸಾಧ್ಯವೇ. ಆದರೂ ಕೆಲವು ಅಂಶಗಳನ್ನು ಹೀಗೆ ಗುರುತು ಮಾಡಬಹುದು ಅಂತಾ ಅನಿಸಿದೆ.…..ಮುಂದೆ ಓದಿ….

  1.  ವಿತ್ತೀಯ ಕೊರತೆಯನ್ನು 4.8% ದಿಂದ 4.2% ಕ್ಕೆ ಇಳಿಸಲಾಗಿದೆ. ಅಂದರೆ ಅಂದಾಜು 2.5 ರಿಂದ 3 ಲಕ್ಷ ಕೋಟಿ ಸಾಲ ಮಾಡುವುದನ್ನು ಕೈಬಿಡಲಾಗಿದೆ. ಇದರ ಹಿಂದೆ ಅಂತರಾಷ್ಟ್ರೀಯ(IMF ಸಹಿತ) ಏಜೆನ್ಸಿಗಳ ಒತ್ತಡವೂ ಇರುತ್ತೆ. ಇಲ್ಲಾಂದ್ರೆ ಅವರು ನಮ್ಮ ರೇಟಿಂಗ್ಸ್ ಗಳನ್ನು ಇಳಿಸ್ತಾರೆ. ಆವಾಗ ವಿದೇಶಿ ಹೂಡಕೆಗೆ ಹೊಡೆತ ಆಗುವುದು.
  2. ಆದಾಯ ತೆರಿಗೆ 12 ಲಕ್ಷದ ವರೇಗೆ ಮನ್ನಾ ಆಗುವುದು ನಿರೀಕ್ಷಿತ ಹಾಗೂ ಸ್ವಾಗತಾರ್ಹ. ವಾಸ್ತವದಲ್ಲಿ ಅದರಲ್ಲಿ ಯಾವುದೇ ಕಂಡೀಶನ್ ಇಲ್ಲದೇ ನೇರವಾಗಿ ಘೋಷಣೆ ಮಾಡಿದ್ರೆ ಇನ್ನೂ ಚೆನ್ನಾಗಿತ್ತು. ಕಾರಣ ಇಂದಿನ ದಿನದಲ್ಲಿ ಅದು ದೊಡ್ಡ ಮೊತ್ತ ಅಂತಾ ಎನಿಸವಂತದ್ದಲ್ಲ.
  3. ಉದ್ಯೋಗ ಸೃಷ್ಟಿಯಲ್ಲಿ ದೇಶ ನಿರೀಕ್ಷಿತ ಸಾಧನೆ ಮಾಡಲು ಆಗಿರದ ಕಾರಣ ಕಿರು ಉದ್ಯೋಗಗಳ (MSME) ಮಾನದಂಡವನ್ನು ಡಬಲ್ ಮಾಡಲಾಗಿದೆ. ಅಂದರೆ ಮೈಕ್ರೋ ಉದ್ದಿಮೆಗೆ 1 ಕೋಟಿ ಅಂತಾ ಇದ್ದುದನ್ನು ಈವಾಗ 2.5 ಕೋಟಿಗೆ ಏರಿಸಲಾಗಿದೆ. ಆ ಕ್ಷೇತ್ರ ಒಂದಷ್ಟು ಚಿಗುರಲೂ ಬಹುದು.
  4. ಸ್ಟಾರ್ಟ್ ಅಪ್ ಉದ್ದಿಮೆಗಳಿಗೆ ಹೆಚ್ಚುವರಿ ಸಹಾಯ ಘೋಷಣೆ ಆಗಿದೆ. ಆದರೆ ಅಂಕಿಅಂಶಗಳಂತೆ ಇದುವರೆಗಿನ startup ಗಳಲ್ಲಿ ಯಶಸ್ಸಿನ ರೇಟ್ 10% ದ ಒಳಗೆ ಮಾತ್ರ ಇದೆ. ಅದು ಮೇಲೇರ ಬೇಕಾದರೆ ಸಾಕಷ್ಟು ಸಿಸ್ಟಮಿಕ್ ಬದಲವಾಣೆಗಳನ್ನು ಸರಕಾರ ಮಾಡಬೇಕಾದೀತು.
  5.  ರಾಜ್ಯಗಳಿಗೆ 50 ವರ್ಷಕ್ಕೆ ಬಡ್ಡಿ ರಹಿತ ಸಾಲವನ್ನು ಸರಕಾರ ಬಂಡವಾಳ ಹೂಡಿಕೆಗೆ ನೀಡಲಿದೆ. ಕಳೆದ ವರ್ಷ ಇದೇ ಯೋಜನೆ ಶುರು ಆಗಿತ್ತು. ಆದರೆ ಮಾನದಂಡಗಳು ಬಹಳ ಜಟಿಲ ಇದ್ದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಅದು ಹಂಚೋಣ ಆಗಿಲ್ಲ.
  6. ಮೂಲಭೂತ ಸೌಕರ್ಯಗಳಿಗೆ ಕಳೆದ ವರ್ಷ 11 ಲಕ್ಷ ಕೋಟಿ ಇಡಲಾಗಿತ್ತು. ಅದು ಈ ವರ್ಷ ಹೆಚ್ಚಾದಂತಿಲ್ಲ. ಆದರೆ ಕಳೆದ ವರ್ಷದ ಅಲಾಕೇಶನ್ ಪೂರ್ತಿಯಾಗಿ ಖರ್ಚೇ ಆಗಿಲ್ಲ. ಹಾಗಾಗಿ ಮೇಲು ನೋಟಕ್ಕೆ ಸಣ್ಣ ಏರಿಕೆ ಕಾಣಿಸ್ತಿದೆ. ಮೂಲಭೂತ ಸೌಕರ್ಯ ಕೊಟ್ಟರೆ ಎಲ್ಲವೂ ಆಗ್ತದೆ ಅನ್ನುವ ಒಂದು ಭ್ರಮೆ ಎಲ್ಲರ ಮನಸ್ಸಿನಲ್ಲಿತ್ತು. ಆದರೆ ಕಳೆದ ಮೂರು ವರ್ಷದಲ್ಲಿ ಹೆಚ್ಚುವರಿ ಹಣ ಇಟ್ಟರೂ ಪಲಿತಾಂಶ ನಿರಾಸೆ ಹುಟ್ಟಿಸಿದೆ.. ಹಾಗಾಗಿ ಸರಕಾರ ಮತ್ತೆ ಕೃಷಿ, ಶಿಕ್ಷಣ ಆರೋಗ್ಯದ ಕಡೆ ಮುಖ ಹಾಕುವ ಅನಿವಾರ್ಯತೆ ಇದೆ.
  7. ಬಂದರು ಹಾಗೂ ಹಡಗು ಕ್ಷೇತ್ರದಲ್ಲಿ ಸರಕಾರ ವಿಶೇಷ ಆಸಕ್ತಿ ತೋರಿದೆ.ಅದಕ್ಕಾಗಿ 25,000 ಕೋಟಿ ಹಣ ಮೀಸಲಿಡಲಾಗಿದೆ. ಅಂದರೆ ಯೋಜನೆಯಲ್ಲಿ ಸರಕಾರದ ಪಾಲು 49% ಅಂತಾರೆ. ಅಂದರೆ ಖಾಸಗಿ ಸಹಭಾಗಿತ್ವದಲ್ಲಿ ಇದು ಅನುಷ್ಟಾನ ಆಗಬೇಕಿದೆ. ವಿವರಗಳು ಮುಂದೆ ಲಭ್ಯ ಆಗಬೇಕಷ್ಟೆ. ಇದು greenfield ಯೋಜನೆ ಆದ ಕಾರಣ ನಮ್ಮ ಸಂಸದರು ಈ ಬಗ್ಗೆ ಆಸಕ್ತಿ ತೋರಿ ಕರಾವಳಿಗೆ ಹೊಸ ಯೋಜನೆ ತರಬಹದು ಅಂತಾ ಅನ್ಸುತ್ತೆ.
  8. ಅಣು ಶಕ್ತಿ ಹಾಗೂ ರೀಸರ್ಚ್ ಬಗ್ಗೆ ಸರಕಾರದ ಒಲವು ಸ್ವಾಗಾತರ್ಹ. ದೀರ್ಘಕಾಲಿಕ ಲಾಭ ಕೊಡಬಲ್ಲುದು.

ಒಟ್ಟಿನಲ್ಲಿ ಸಿನೆಮಾ ತಾರೆಯರು ಮೇಕಪ್ ಇಲ್ಲದಿರುವಾಗ ನೋಡಿದರೆ ಹೇಗೆ ಕಾಣ್ತಾರೋ ಅದೇ ರೀತಿಯಲ್ಲಿ ಬಜೆಟ್ ಇದೆ ಅಂತ ಅನ್ಸುತ್ತೆ.

ಬರಹ :
ವಿಶ್ವೇಶ್ವರ ಭಟ್‌ ಬಂಗಾರಡ್ಕ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ
ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ
September 12, 2026
7:30 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?
September 12, 2026
7:08 AM
by: ದ ರೂರಲ್ ಮಿರರ್.ಕಾಂ
ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?
September 11, 2026
8:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror