Advertisement
Opinion

ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರಿಂದ ಬಜೆಟ್‌ ವಿಶ್ಲೇಷಣೆ |

Share

ತೀರಾ ಸರಳವಾಗಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ್ದಾರೆ. ಯಾವುದೇ ನಾಟಕೀಯ ಘೋಷಣೆಗಳನ್ನು ಮಾಡದಿರೋದು ವಿಶೇಷ. ಬಜೆಟ್ ಹಿನ್ನಲೆಯನ್ನು ಗಮನಿಸಿದರೆ ಸರಕಾರ ಯಾಕೆ ಸೈಲೆಂಟಾದ ಬಜೆಟ್ ಮಂಡಿಸಿದೆ ಅಂತಾ ಅರಿವಾಗಬಹುದು. ನಿನ್ನೆಯ ಎಕನಾಮಿಕ್ ಸರ್ವೇಯಲ್ಲಿ ಆರ್ಥಿಕ ಸಲಹಾಗಾರ ನಾಗೇಶ್ವರನ್ ಅವರು ಬಹಳ ಸೂಕ್ಷ್ಮವಾಗಿ ಅಂದರೆ ಹೆಚ್ಚಿನವರಿಗೂ ಅರಿವಿಗೆ ಬಾರದ ರೀತಿಯಲ್ಲಿ ಜಿಡಿಪಿ ಬೆಳವಣಿಗೆಯಲ್ಲಿ ನಿಧಾನ ಆಗಿರುವುದನ್ನು ಉಲ್ಲೇಕ ಮಾಡಿದ್ದಾರೆ. ಅಲ್ಲದೇ ಅದಕ್ಕೆ ಆರ್ಥಿಕತೆಯಲ್ಲಿರುವ ಆಂತರಿಕ ಸವಾಲುಗಳು (structural problems) ಕಾರಣ ಅಂತಾ ಗುರುತು ಮಾಡಿದ್ದಾರೆ. 1% GDP ಬೆಳವಣಿಗೆ ಕಡಿತ ಅಂದರೆ ಕೆಲವು ಲಕ್ಷ ಕೋಟಿಗಳ ಕಡಿತ ಆಗುವ ಕಾರಣಕ್ಕಾಗಿ ಸರಕಾರದ ಆಧಾಯ ನಿರೀಕ್ಷಿತವಾಗಿಯೇ ಬಹಳ ಕಡಿಮೆ ಆಗುವುದು. ಆವಾಗ ಹೊಸ ಯೋಜನೆಗಳನ್ನ ಘೋಷಣೆ ಮಾಡುವುದು ಅಸಾಧ್ಯವೇ. ಆದರೂ ಕೆಲವು ಅಂಶಗಳನ್ನು ಹೀಗೆ ಗುರುತು ಮಾಡಬಹುದು ಅಂತಾ ಅನಿಸಿದೆ.…..ಮುಂದೆ ಓದಿ….

  1. ವಿತ್ತೀಯ ಕೊರತೆಯನ್ನು 4.8% ದಿಂದ 4.2% ಕ್ಕೆ ಇಳಿಸಲಾಗಿದೆ. ಅಂದರೆ ಅಂದಾಜು 2.5 ರಿಂದ 3 ಲಕ್ಷ ಕೋಟಿ ಸಾಲ ಮಾಡುವುದನ್ನು ಕೈಬಿಡಲಾಗಿದೆ. ಇದರ ಹಿಂದೆ ಅಂತರಾಷ್ಟ್ರೀಯ(IMF ಸಹಿತ) ಏಜೆನ್ಸಿಗಳ ಒತ್ತಡವೂ ಇರುತ್ತೆ. ಇಲ್ಲಾಂದ್ರೆ ಅವರು ನಮ್ಮ ರೇಟಿಂಗ್ಸ್ ಗಳನ್ನು ಇಳಿಸ್ತಾರೆ. ಆವಾಗ ವಿದೇಶಿ ಹೂಡಕೆಗೆ ಹೊಡೆತ ಆಗುವುದು.
  2. ಆದಾಯ ತೆರಿಗೆ 12 ಲಕ್ಷದ ವರೇಗೆ ಮನ್ನಾ ಆಗುವುದು ನಿರೀಕ್ಷಿತ ಹಾಗೂ ಸ್ವಾಗತಾರ್ಹ. ವಾಸ್ತವದಲ್ಲಿ ಅದರಲ್ಲಿ ಯಾವುದೇ ಕಂಡೀಶನ್ ಇಲ್ಲದೇ ನೇರವಾಗಿ ಘೋಷಣೆ ಮಾಡಿದ್ರೆ ಇನ್ನೂ ಚೆನ್ನಾಗಿತ್ತು. ಕಾರಣ ಇಂದಿನ ದಿನದಲ್ಲಿ ಅದು ದೊಡ್ಡ ಮೊತ್ತ ಅಂತಾ ಎನಿಸವಂತದ್ದಲ್ಲ.
  3. ಉದ್ಯೋಗ ಸೃಷ್ಟಿಯಲ್ಲಿ ದೇಶ ನಿರೀಕ್ಷಿತ ಸಾಧನೆ ಮಾಡಲು ಆಗಿರದ ಕಾರಣ ಕಿರು ಉದ್ಯೋಗಗಳ (MSME) ಮಾನದಂಡವನ್ನು ಡಬಲ್ ಮಾಡಲಾಗಿದೆ. ಅಂದರೆ ಮೈಕ್ರೋ ಉದ್ದಿಮೆಗೆ 1 ಕೋಟಿ ಅಂತಾ ಇದ್ದುದನ್ನು ಈವಾಗ 2.5 ಕೋಟಿಗೆ ಏರಿಸಲಾಗಿದೆ. ಆ ಕ್ಷೇತ್ರ ಒಂದಷ್ಟು ಚಿಗುರಲೂ ಬಹುದು.
  4. ಸ್ಟಾರ್ಟ್ ಅಪ್ ಉದ್ದಿಮೆಗಳಿಗೆ ಹೆಚ್ಚುವರಿ ಸಹಾಯ ಘೋಷಣೆ ಆಗಿದೆ. ಆದರೆ ಅಂಕಿಅಂಶಗಳಂತೆ ಇದುವರೆಗಿನ startup ಗಳಲ್ಲಿ ಯಶಸ್ಸಿನ ರೇಟ್ 10% ದ ಒಳಗೆ ಮಾತ್ರ ಇದೆ. ಅದು ಮೇಲೇರ ಬೇಕಾದರೆ ಸಾಕಷ್ಟು ಸಿಸ್ಟಮಿಕ್ ಬದಲವಾಣೆಗಳನ್ನು ಸರಕಾರ ಮಾಡಬೇಕಾದೀತು.
  5. ರಾಜ್ಯಗಳಿಗೆ 50 ವರ್ಷಕ್ಕೆ ಬಡ್ಡಿ ರಹಿತ ಸಾಲವನ್ನು ಸರಕಾರ ಬಂಡವಾಳ ಹೂಡಿಕೆಗೆ ನೀಡಲಿದೆ. ಕಳೆದ ವರ್ಷ ಇದೇ ಯೋಜನೆ ಶುರು ಆಗಿತ್ತು. ಆದರೆ ಮಾನದಂಡಗಳು ಬಹಳ ಜಟಿಲ ಇದ್ದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಅದು ಹಂಚೋಣ ಆಗಿಲ್ಲ.
  6. ಮೂಲಭೂತ ಸೌಕರ್ಯಗಳಿಗೆ ಕಳೆದ ವರ್ಷ 11 ಲಕ್ಷ ಕೋಟಿ ಇಡಲಾಗಿತ್ತು. ಅದು ಈ ವರ್ಷ ಹೆಚ್ಚಾದಂತಿಲ್ಲ. ಆದರೆ ಕಳೆದ ವರ್ಷದ ಅಲಾಕೇಶನ್ ಪೂರ್ತಿಯಾಗಿ ಖರ್ಚೇ ಆಗಿಲ್ಲ. ಹಾಗಾಗಿ ಮೇಲು ನೋಟಕ್ಕೆ ಸಣ್ಣ ಏರಿಕೆ ಕಾಣಿಸ್ತಿದೆ. ಮೂಲಭೂತ ಸೌಕರ್ಯ ಕೊಟ್ಟರೆ ಎಲ್ಲವೂ ಆಗ್ತದೆ ಅನ್ನುವ ಒಂದು ಭ್ರಮೆ ಎಲ್ಲರ ಮನಸ್ಸಿನಲ್ಲಿತ್ತು. ಆದರೆ ಕಳೆದ ಮೂರು ವರ್ಷದಲ್ಲಿ ಹೆಚ್ಚುವರಿ ಹಣ ಇಟ್ಟರೂ ಪಲಿತಾಂಶ ನಿರಾಸೆ ಹುಟ್ಟಿಸಿದೆ.. ಹಾಗಾಗಿ ಸರಕಾರ ಮತ್ತೆ ಕೃಷಿ, ಶಿಕ್ಷಣ ಆರೋಗ್ಯದ ಕಡೆ ಮುಖ ಹಾಕುವ ಅನಿವಾರ್ಯತೆ ಇದೆ.
  7. ಬಂದರು ಹಾಗೂ ಹಡಗು ಕ್ಷೇತ್ರದಲ್ಲಿ ಸರಕಾರ ವಿಶೇಷ ಆಸಕ್ತಿ ತೋರಿದೆ.ಅದಕ್ಕಾಗಿ 25,000 ಕೋಟಿ ಹಣ ಮೀಸಲಿಡಲಾಗಿದೆ. ಅಂದರೆ ಯೋಜನೆಯಲ್ಲಿ ಸರಕಾರದ ಪಾಲು 49% ಅಂತಾರೆ. ಅಂದರೆ ಖಾಸಗಿ ಸಹಭಾಗಿತ್ವದಲ್ಲಿ ಇದು ಅನುಷ್ಟಾನ ಆಗಬೇಕಿದೆ. ವಿವರಗಳು ಮುಂದೆ ಲಭ್ಯ ಆಗಬೇಕಷ್ಟೆ. ಇದು greenfield ಯೋಜನೆ ಆದ ಕಾರಣ ನಮ್ಮ ಸಂಸದರು ಈ ಬಗ್ಗೆ ಆಸಕ್ತಿ ತೋರಿ ಕರಾವಳಿಗೆ ಹೊಸ ಯೋಜನೆ ತರಬಹದು ಅಂತಾ ಅನ್ಸುತ್ತೆ.
  8. ಅಣು ಶಕ್ತಿ ಹಾಗೂ ರೀಸರ್ಚ್ ಬಗ್ಗೆ ಸರಕಾರದ ಒಲವು ಸ್ವಾಗಾತರ್ಹ. ದೀರ್ಘಕಾಲಿಕ ಲಾಭ ಕೊಡಬಲ್ಲುದು.

ಒಟ್ಟಿನಲ್ಲಿ ಸಿನೆಮಾ ತಾರೆಯರು ಮೇಕಪ್ ಇಲ್ಲದಿರುವಾಗ ನೋಡಿದರೆ ಹೇಗೆ ಕಾಣ್ತಾರೋ ಅದೇ ರೀತಿಯಲ್ಲಿ ಬಜೆಟ್ ಇದೆ ಅಂತ ಅನ್ಸುತ್ತೆ.

ಬರಹ :
ವಿಶ್ವೇಶ್ವರ ಭಟ್‌ ಬಂಗಾರಡ್ಕ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ಸಿಂಗಾರ ಒಣಗುತ್ತಿದೆಯೇ..? ನಿಮ್ಮ ತೋಟದ ಶತ್ರು ನೀವು ಬಳಸುವ ಬೇವಿನ ಎಣ್ಣೆಯೇ ಇರಬಹುದು…!

ಅಡಿಕೆ ತೋಟಗಳಲ್ಲಿ ಹೂಗೊಂಚಲುಗಳು ಅರಳಿದರೂ ಕಾಯಿ ಕಟ್ಟದಿರುವುದಕ್ಕೆ ರೈತರು ಬಳಸುವ ಬೇವಿನ ಎಣ್ಣೆಯೇ…

3 hours ago

ಕಳಪೆ ಅಡಿಕೆ ಪತ್ತೆ | 15.5 ಲಕ್ಷ ದಂಡ ವಿಧಿಸಿದ ನ್ಯಾಯಾಲಯ

ಕಳಪೆ ಗುಣಮಟ್ಟದ ಅಡಿಕೆ ಸಾಗಣೆ ಪ್ರಕರಣ ಪತ್ತೆಯಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ…

3 hours ago

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ

ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್‌ Z ಗಾಗಿ…

12 hours ago

ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ

ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…

12 hours ago

ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?

ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…

12 hours ago

ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್‌ ಸಿಂಗ್‌ ಚೌಹಾನ್‌ ಅವರು…

13 hours ago