ಬರಡು ಹಾಗೂ ಅರೆ–ಬರಡು ಪ್ರದೇಶಗಳಲ್ಲಿ ಅಸಮತೋಲನ ಮಳೆ, ಹೆಚ್ಚುತ್ತಿರುವ ತಾಪಮಾನ ಮತ್ತು ಮಣ್ಣಿನ ತೇವಾಂಶದ ಕೊರತೆಯಿಂದ ಕೃಷಿ ಉತ್ಪಾದನೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಡುವೆ, ಪಶುಸಂಗೋಪನೆಯಿಂದ ಉಂಟಾಗುವ ಮೂತ್ರದಂತಹ ದ್ರವ ತ್ಯಾಜ್ಯಗಳು ಬಹುತೇಕ ಬಳಕೆಯಾಗದೆ ಪರಿಸರ ಸಮಸ್ಯೆಗೂ ಕಾರಣವಾಗುತ್ತಿವೆ. ಈ ಎರಡೂ ಸಮಸ್ಯೆಗಳಿಗೆ ಒಟ್ಟಿಗೆ ಪರಿಹಾರ ನೀಡುವಂತೆ, ICAR–National Research Centre on Camel ಮಹತ್ವದ ಸಂಶೋಧನೆ ನಡೆಸಿದ್ದು, ಒಂಟೆ ಮೂತ್ರವನ್ನು ಕಡಿಮೆ ವೆಚ್ಚದ ಹಾಗೂ ಪರಿಸರ ಸ್ನೇಹಿ ಬೀಜ ಸಂಸ್ಕರಣಾ ವಿಧಾನವಾಗಿ ಬಳಸಬಹುದು ಎಂಬುದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿದೆ.
ಯಾವ ಬೆಳೆಗಳ ಮೇಲೆ ಅಧ್ಯಯನ? : ಅಧ್ಯಯನವು ಬರ ಪ್ರದೇಶಗಳ ಪ್ರಮುಖ ಬೆಳೆಗಳಾದ ಗುಯಾರ್ (ಕ್ಲಸ್ಟರ್ ಬೀನ್), ಮತ್ ಬೀನ್, ಪಿಯರ್ಲ್ ಮಿಲ್ಲೆಟ್ (ಸಜ್ಜೆ) ಮೇಲೆ ನಡೆಸಲಾಗಿದೆ. ಇವು ಆಹಾರ ಮತ್ತು ಮೇವು ಎರಡಕ್ಕೂ ಅತ್ಯಂತ ಅಗತ್ಯವಾದ ಬೆಳೆಗಳಾಗಿವೆ.
ಸಂಶೋಧನೆಯ ಪ್ರಮುಖ ಫಲಿತಾಂಶ: ಬೀಜಗಳನ್ನು ಎರಡು ಗಂಟೆಗಳ ಕಾಲ ಅಶುದ್ಧಗೊಳಿಸದ ಒಂಟೆ ಮೂತ್ರದಲ್ಲಿ ಸಂಸ್ಕರಿಸಿದಾಗ, ಬೀಜ ಮೊಳಕೆಯ ಪ್ರಮಾಣ ಹೆಚ್ಚಳ, ಮೊಳೆಯ ಶಕ್ತಿ ಮತ್ತು ಆರಂಭಿಕ ಬೆಳವಣಿಗೆ ಉತ್ತಮ, ಬರ ಮತ್ತು ಉಷ್ಣತೆಗೆ ತಾಳ್ಮೆ ಹೆಚ್ಚಳ ಎಂಬ ಸ್ಪಷ್ಟ ಫಲಿತಾಂಶಗಳು ಕಂಡುಬಂದಿವೆ.
ವೈಜ್ಞಾನಿಕ ಪರೀಕ್ಷೆಗಳು ಒಂಟೆ ಮೂತ್ರ ಬೀಜ ಸಂಸ್ಕರಣೆಯಿಂದ, ಸಸ್ಯದ ನೀರು ಹಿಡಿದಿಡುವ ಸಾಮರ್ಥ್ಯ, ಕೋಶ ಸ್ಥಿರತೆ, ಆಂಟಿ–ಆಕ್ಸಿಡೆಂಟ್ ಕ್ರಿಯಾಶೀಲತೆ, ನೈಟ್ರೋಜನ್ ಶೋಷಣೆ, ಕ್ಲೋರೋಫಿಲ್ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತದೆ ಎಂಬುದನ್ನು ತೋರಿಸಿವೆ.
ಉತ್ಪಾದನೆಗೂ ನೇರ ಲಾಭ: ಈ ಲಾಭಗಳು ನೇರವಾಗಿ ಕೃಷಿ ಫಲಿತಾಂಶದಲ್ಲೂ ಪ್ರತಿಫಲಿಸಿದ್ದು, ಹೆಚ್ಚು ಬೀಜ ಇಳುವರಿ, ಉತ್ತಮ ನೀರು ಬಳಕೆ ದಕ್ಷತೆ, ಗುಯಾರ್‌ನಲ್ಲಿ ಹೆಚ್ಚಿನ ಗುಮ್ ಪ್ರಮಾಣ, ಮೇವು ಗುಣಮಟ್ಟದಲ್ಲಿ ಸುಧಾರಣೆ ಸಾಧ್ಯವಾಗಿದೆ.
ರಾಸಾಯನಿಕಗಳಿಗೆ ಪರ್ಯಾಯ : ಸಂಶೋಧನೆಯ ಮತ್ತೊಂದು ಪ್ರಮುಖ ಅಂಶವೆಂದರೆ, ಒಂಟೆ ಮೂತ್ರ ಆಧಾರಿತ ಬೀಜ ಸಂಸ್ಕರಣೆ ಪೊಟ್ಯಾಸಿಯಂ ನೈಟ್ರೇಟ್, ಪೊಟ್ಯಾಸಿಯಂ ಸಲ್ಫೇಟ್‌ಗಳಂತಹ ರಾಸಾಯನಿಕ ವಿಧಾನಗಳಿಗೆ ಸಮಾನ ಅಥವಾ ಕೆಲ ಸಂದರ್ಭಗಳಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಕಂಡುಬಂದಿರುವುದು.
ರೈತರಿಗೆ ಏನು ಲಾಭ?: ಈ ತಂತ್ರಜ್ಞಾನದಿಂದ ಕಡಿಮೆ ವೆಚ್ಚದಲ್ಲಿ ಬೀಜ ಸಂಸ್ಕರಣೆ, ರಾಸಾಯನಿಕ ಅವಲಂಬನೆ ಕಡಿತ, ಪಶು–ಕೃಷಿ ಏಕೀಕರಣ ಬಲಪಡಿಕೆ, ಪಶು ತ್ಯಾಜ್ಯಗಳ ವೈಜ್ಞಾನಿಕ ಮರುಬಳಕೆ, ಪರಿಸರ ಮಾಲಿನ್ಯ ನಿಯಂತ್ರಣ ಸಾಧ್ಯವಾಗುತ್ತದೆ.
ಪರಿಣಾಮದ ಒಟ್ಟಾರೆ ಸಾರಾಂಶ : ಬರ ಪ್ರದೇಶಗಳಿಗೆ ಸೂಕ್ತವಾದ ದೇಶೀ, ಕಡಿಮೆ ವೆಚ್ಚದ ತಂತ್ರಜ್ಞಾನ, ಒಂಟೆ ಮೂತ್ರದ ಸುರಕ್ಷಿತ ಮತ್ತು ಉತ್ಪಾದಕ ಬಳಕೆ, ನೀರಿನ ಕೊರತೆಯಲ್ಲೂ ಬೆಳೆ ಉತ್ಪಾದನೆ ಹೆಚ್ಚಳ, ರೈತರ ಒಟ್ಟು ಕೃಷಿ ವೆಚ್ಚದಲ್ಲಿ ಇಳಿಕೆಯಾಗುತ್ತದೆ. ಒಟ್ಟಾರೆ, ಒಂಟೆ ಮೂತ್ರ ಆಧಾರಿತ ಬೀಜ ಸಂಸ್ಕರಣೆ ಬರ ಮತ್ತು ಅರೆ–ಬರಡು ಪ್ರದೇಶಗಳ ಕೃಷಿಗೆ ಪ್ರಾಯೋಗಿಕ, ವಿಸ್ತರಿಸಬಹುದಾದ ಮತ್ತು ಹವಾಮಾನ ಸ್ನೇಹಿ ಪರಿಹಾರವಾಗಿ ಹೊರಹೊಮ್ಮಿದೆ.
12.01.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ರಾಜಸ್ಥಾನದ ಹನುಮಂಗಢ ಜಿಲ್ಲೆಯಲ್ಲಿ ಇಬ್ಬರು ಗ್ರಾಮೀಣ ಉದ್ಯಮಿಗಳು ಆರಂಭಿಸಿದ ಗ್ರೀನ್ ವಿಷನ್ ವರ್ಮಿಕಾಂಪೋಸ್ಟ್…
ಚೀನಾದ Chinese Academy of Tropical Agricultural Sciences (CATAS) ವಿಜ್ಞಾನಿಗಳು Electron…
ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…
ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…
ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭವಾಗಿದ್ದು 2026 ಮಾರ್ಚ್ ವರೆಗೆ ಅವಕಾಶ ಕರ್ನಾಟಕ…