Advertisement
ಸುದ್ದಿಗಳು

ಅ.30 : ಕ್ಯಾಂಪ್ಕೋ ಚಾಕೋಲೇಟ್‌ ನೂತನ ಉತ್ಪನ್ನ ಬಿಡುಗಡೆ

Share

ಕ್ಯಾಂಪ್ಕೋ ವತಿಯಿಂದ ಮತ್ತೊಂದು ಚಾಕೋಲೇಟ್‌ ಉತ್ಪನ್ನ ಹಾಗೂ ಚಾಕೋಲೇಟ್‌ ಪೇಯ ವಿನ್ನರ್‌ ನ ಇನ್ನೊಂದು ಉತ್ಪನ್ನ ಅ.30  ರಂದು ಪುತ್ತೂರಿನಲ್ಲಿ  ಬಿಡುಗಡೆಯಾಗಲಿದೆ. ದಿ ಡೈರಿ ಡ್ರೀಮ್ &ನಟ್ (The Dairy Dream Fruit & Nut) ಹಾಗೂ ವಿನ್ನರ್‌ ಪೇಯ ವಿನ್ನರ್‌ ವಿದ್‌ ಜಾಗ್ರೀ (Winner-with Jaggery) ಬಿಡುಗಡೆಯಾಗುವ ನೂತನ ಉತ್ಪನ್ನ.

ಪುತ್ತೂರಿನ  ಕ್ಯಾಂಪ್ಕೋ ಚಾಕೋಲೇಟ್‌ ಪ್ಯಾಕ್ಟರಿ ಆವರಣದಲ್ಲಿ  ನಡೆಯುವ ಈ ಬಿಡುಗಡೆ ಸಮಾರಂಭದಲ್ಲಿ  ವಿವೇಕಾನಂದ  ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಕೆ.ಪ್ರಭಾಕರ ಭಟ್ ಕಲ್ಲಡ್ಕ ಅವರು ಬಿಡುಗಡೆಗೊಳಿಸುವರು.  ಶಾಸಕ ಸಂಜೀವ ಮಟಂದೂರು ಅವರು ಭಾಗವಹಿಸುವರು.

ದೇಸೀ ಚಾಕೋಲೇಟ್‌, ರೈತರ ಬೆನ್ನೆಲುಬಾದ ಕ್ಯಾಂಪ್ಕೋ ನೂತನವಾಗಿ ಬಿಡುಗಡೆ ಮಾಡುವ ಈ ಚಾಕೋಲೇಟ್‌ ಉತ್ಪನ್ನವು ಶುದ್ಧ ಹಾಲಿನ ಪುಡಿ, ಕೋಕೋ, ಬಾದಾಮಿ ಮತ್ತುಒಣದ್ರಾಕ್ಷಿಗಳಮಿಶ್ರಣದೊಂದಿಗೆ ತಯಾರಿಸಲಾಗಿದೆ. ಈ ಉತ್ಪನ್ನವು 40 ಗ್ರಾಂ ಸ್ಲಾಬ್‌ ನಲ್ಲಿ  40  ರೂಪಾಯಿ ಗರಿಷ್ಟ ಮಾರಾಟ ಬೆಲೆಗೆ ಲಭ್ಯವಿದೆ.

ಚಾಕೊಲೇಟ್ ಹಾಗೂ ಬೆಲ್ಲದೊಂದಿಗೆ ಕೂಡಿದ ವಿಶೇಷ ಪೇಯ ಮಿಶ್ರಣ ವಿನ್ನರ್‌ ವಿದ್‌ ಜಾಗ್ರಿ  ಉತ್ಪನ್ನವು  ಬೆಲ್ಲದ ನೈಸರ್ಗಿಕ ಪೋಷಕಾಂಶಗಳೊಂದಿಗೆ ಸಮೃದ್ಧವಾಗಿದೆ. ಈ ಉತ್ಪನ್ನವು, ಸರ್ವಋತುಗಳಿಗೆ ಹಾಗೂ ಎಲ್ಲಾ ವಯೋಮಾನದವರಿಗೆ ಬಿಸಿ ಅಥವಾ ತಂಪುರೂಪದಲ್ಲಿ ಸೇವಿಸಬಹುದು. ಇದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇದನ್ನು 300 ಗ್ರಾಂ ಪ್ಯಾಕ್ ಗೆ  ರೂ.180 ನಲ್ಲಿ ಪರಿಚಯಿಸಲಾಗುತ್ತಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

11 hours ago

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…

1 day ago

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

2 days ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

2 days ago