Advertisement
MIRROR FOCUS

ಸೆ.13 ರಂದು ಕ್ಯಾಂಪ್ಕೊ ಮಹಾಸಭೆ | 39 ಕೋಟಿ ರೂಪಾಯಿ ನಿವ್ವಳ ಲಾಭದಲ್ಲಿ ಕ್ಯಾಂಪ್ಕೊ |

Share

ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ಮಹಾಸಭೆಯು ಸೆ.13 ರಂದು ಅಡ್ಯಾರ್‌ ಗಾರ್ಡನ್‌ನಲ್ಲಿ ನಡೆಯಲಿದೆ. ಸಂಸ್ಥೆಯು 2024-25 ನೇ ಸಾಲಿನಲ್ಲಿ 3632 ಕೋಟಿ ರೂಪಾಯಿ ವ್ಯವಹಾರ ನಡೆಸುವುದರೊಂದಿಗೆ 39.87 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು ಶೇ. 8 ಡಿವಿಡೆಂಡ್‌ ನೀಡಲು ನಿರ್ಧರಿಸಿದೆ. ಅಷ್ಟೇ ಅಲ್ಲದೆ 2014-25 ನೇ ಸಾಲಿನಲ್ಲಿ ಅಡಿಕೆ  ಹಾಗೂ ಕೊಕ್ಕೋ ಮಾರಾಟದ ಮೇಲೆ ರೈತರಿಗೆ ಪ್ರೋತ್ಸಾಹ ಧನ ನೀಡಲು ಕೂಡಾ ನಿರ್ಧರಿಸಿದೆ. …… ಮುಂದೆ ಓದಿ……

ಸೆ.13 ರಂದು ಸಂಸ್ಥೆಯ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಅವರ ಅಧ್ಯಕ್ಷತೆಯನ್ನು ಸದಸ್ಯರ ಮಹಾಸಭೆ ನಡೆಯಲಿದೆ. ಈ ಬಾರಿ ಸಂಸ್ಥೆಯು 65,675 ಮೆಟ್ರಿಕ್‌ ಟನ್‌ ಅಡಿಕೆ ಖರೀದಿ ಮಾಡಿದ್ದು 64,681 ಮೆಟ್ರಿಕ್‌ ಟನ್‌ ಅಡಿಕೆ ಮಾರಾಟ ಮಾಡಿದೆ. 1900 ಮೆಟ್ರಕ್‌ ಟನ್‌  ಹಸಿ ಕೊಕ್ಕೋ ಹಾಗೂ 5236 ಮೆಟ್ರಿಕ್‌ ಟನ್‌ ಒಣ ಕೊಕ್ಕೋ ಬೀಜ ಖರೀದಿ ಮಾಡಿದ್ದು ಚಾಕೋಲೇಟ್‌ ಕಾರ್ಖಾನೆಯಲ್ಲಿ 5047 ಮೆಟ್ರಿಕ್‌ ಟನ್‌  ಕೊಕೋ ಒಣ ಬೀಜವನ್ನು ಬಳಸಿಕೊಳ್ಳಲಾಗಿದೆ.

ಈ ಬಾರಿ ಕ್ಯಾಂಪ್ಕೊ 11512 ಮೆಟ್ರಿಕ್‌ ಟನ್‌ ಚಾಕೋಲೇಟ್‌ ಉತ್ಪಾದನೆ ಮಾಡಿದ್ದು ಇದರಲ್ಲಿ 10877 ಮೆಟ್ರಿಕ್‌ ಟನ್‌ ಕ್ಯಾಂಪ್ಕೊ ಬ್ರಾಂಡ್‌ ಹಾಗೂ ಉಳಿದವು ಇತರ ಬ್ರಾಂಡ್‌ಗಳ ಉತ್ಪಾದನೆಯಾಗಿದೆ. ಈ ಬಾರಿ 62.3 ಮೆಟ್ರಿಕ್‌ ಟನ್‌ ತೆಂಗಿನ ಎಣ್ಣೆ ಉತ್ಪಾದನೆಯನ್ನು ಕ್ಯಾಂಪ್ಕೊ ಮಾಡಿದೆ.  1393 ಮೆಟ್ರಿಕ್‌ ಟನ್‌ ರಬ್ಬರ್‌ ಖರೀದಿ ಮಾಡಿರುವ ಕ್ಯಾಂಪ್ಕೊ 1356 ಮೆಟ್ರಿಕ್‌ ಟನ್‌ ರಬ್ಬರ್‌ ಮಾರಾಟ ಮಾಡಿದೆ. 1388 ಮೆಟ್ರಿಕ್‌ ಟನ್‌ ಕಾಳುಮೆಣಸು ಖರೀದಿ ಮಾಡಿ 1100 ಮೆಟ್ರಿಕ್‌ ಟನ್‌ ಕಾಳುಮೆಣಸು ಮಾರಾಟ ಮಾಡಿದೆ.  ಇದರ ಜೊತೆಗೆ ಮೈಲುತುತ್ತು , ಸಾವಯವ ಗೊಬ್ಬರ, ಲಘುಪೋಷಕಾಂಶಗಳನ್ನು ರೈತರಿಗೆ ಸ್ಫರ್ಧಾತ್ಮಕ ದರದಲ್ಲಿ ಮಾರಾಟ ಮಾಡಿದೆ.

ಅಡಿಕೆ , ಕಾಳುಮೆಣಸು ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಂಪ್ಕೊ ಖರೀದಿ ಮಾಡಿದೆ. ರಬ್ಬರ್‌ ಖರೀದಿಯಲ್ಲಿ ಕ್ಯಾಂಪ್ಕೊ ಅಥವಾ ಮಾರಾಟದಲ್ಲಿ ಬೆಳೆಗಾರರು ಅಷ್ಟೊಂದು ಆಸಕ್ತಿ ತೋರಿಸಲಿಲ್ಲ. ಅಡಿಕೆ ಧಾರಣೆಯ ಏರುಪೇರು ಲಾಭಾಂಶದಲ್ಲಿ ಕಾಣುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಖರೀದಿಯಾಗಿದ್ದರೂ, ಅಡಿಕೆ ಧಾರಣೆ ಈ ಬಾರಿ ಅಸ್ಥಿರವಾಗಿರುವುದು ಗಮನಾರ್ಹವಾಗಿ ಕಂಡುಬಂದಿದೆ. ಸದ್ಯ ಅಡಿಕೆ ಧಾರಣೆ ಸ್ಥಿರತೆಗೆ ಕ್ಯಾಂಪ್ಕೊ ಆದ್ಯತೆ ನೀಡಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ ಸೇರಿಕೊಳ್ಳಿ…. 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕಿರಾಣಿ ಅಂಗಡಿಯಿಂದ ದಾಳಿಂಬೆ ಕೃಷಿಯತ್ತ ಯಶಸ್ವಿ ಜಿಗಿತ

ಕೊಪ್ಪಳ ಜಿಲ್ಲೆಯ ತುಂಬರಗುದ್ದಿ ಗ್ರಾಮದ ಮಂಜುನಾಥ್ ರಾಮಪ್ಪ ಇಳಿಗೆರ್ ಅವರು ಕಿರಾಣಿ ಅಂಗಡಿಯಿಂದ…

34 minutes ago

ಕಾಡಿನ ನಡಿಗೆ – ಮನಸ್ಸಿಗೆ ನೆಮ್ಮದಿ, ದೇಹಕ್ಕೆ ಚೈತನ್ಯ..!

ಕಾಡಿನಲ್ಲಿ ಸಮಯ ಕಳೆಯುವುದು ಮಾನಸಿಕ ಒತ್ತಡ ಕಡಿಮೆ ಮಾಡಲು ಮತ್ತು ದೇಹದ ರೋಗನಿರೋಧಕ…

3 hours ago

ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ – ಕರ್ನಾಟಕದಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ

ಉತ್ತರ ಭಾರತದಿಂದ ಶುಷ್ಕ ಗಾಳಿ ಬೀಸುವ ಸಾಧ್ಯತೆ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾಗಬಹುದಾದ ವಾಯುಮಂಡಲದ…

4 hours ago

ಜಲಾಶಯಗಳಲ್ಲಿ ನೀರಿನ ಕೊರತೆ – ಐದು ಜಿಲ್ಲೆಗಳ ಹಿಂಗಾರು ಬೆಳೆಗಳಿಗೆ ಕಾಲುವೆ ನೀರು ಇಲ್ಲ

ಮುಂಗಾರು ಮಳೆಯ ಕೊರತೆಯಿಂದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿರುವ…

4 hours ago

ಡೀಪ್‌ಟೆಕ್ ನಾವೀನ್ಯತೆಗೆ ಕರ್ನಾಟಕದ ಬಲ : ಆರ್ಟ್ ಪಾರ್ಕ್‌ಗೆ ₹62 ಕೋಟಿಗೂ ಅಧಿಕ ನೆರವು

ಕರ್ನಾಟಕ ಸರ್ಕಾರವು ಆರ್ಟ್ ಪಾರ್ಕ್‌ಗೆ ಈವರೆಗೆ ₹62 ಕೋಟಿಗೂ ಅಧಿಕ ನೆರವು ನೀಡಿದ್ದು,…

4 hours ago

ಪಡಿತರ ಚೀಟಿ ಇ-ಕೆವೈಸಿ ಗಡುವು ನವೆಂಬರ್ 10 ರವರೆಗೆ ವಿಸ್ತರಣೆ

ಪಡಿತರ ಚೀಟಿ ಫಲಾನುಭವಿಗಳ ಇ-ಕೆವೈಸಿ ಪೂರ್ಣಗೊಳಿಸುವ ಗಡುವನ್ನು ನವೆಂಬರ್ 10ರವರೆಗೆ ವಿಸ್ತರಿಸಲಾಗಿದೆ. ‘ಅನ್ನ…

1 day ago