ಇತ್ತೀಚಿನ ದಿನಗಳಲ್ಲಿ ವಿದೇಶಿ ಅಡಿಕೆ ಅಕ್ರಮವಾಗಿ ದೇಶದೊಳಕ್ಕೆ ಬರುತ್ತಿದ್ದು ದೇಶೀ ಅಡಿಕೆಯ ಮಾರುಕಟ್ಟೆಗೆ ತೀವ್ರ ಹೊಡೆತನೀಡುತ್ತಿದೆ ಮತ್ತು ವಶಪಡಿಸಿಕೊಂಡ ಅಕ್ರಮ ಆಮದು ಅಡಿಕೆಯು ಕಡಿಮೆ ದರದಲ್ಲಿ ಹರಾಜು ಮೂಲಕ ಮಾರುಕಟ್ಟೆಗೆ ಬಿಡುಗಡೆಯಾಗಿ ದೇಶದ ಅಡಿಕೆ ಮಾರುಕಟ್ಟೆಯನ್ನು ನಾಶಗೊಳಿಸುತ್ತಿರುವ ಬಗ್ಗೆ ಕ್ಯಾಂಪ್ಕೋ ತೀವ್ರ ಕಳವಳ ವ್ಯಕ್ತಪಡಿಸಿದೆ.
ಕ್ಯಾಂಪ್ಕೋ ನಿರಂತರ ಪ್ರಯತ್ನದಿಂದ ಕೇಂದ್ರ ಸರಕಾರ ಇತ್ತೀಚಿಗೆ ಕನಿಷ್ಠ ಆಮದು ಬೆಲೆಯನ್ನು ಕಿಲೋ ಗೇ 351 ರೂಪಾಯಿ ನಿಗದಿಪಡಿಸಿತ್ತು. ಆದರೆ ಅಕ್ರಮ ಅಮದು ಅಡಿಕೆಯನ್ನು ವಶಪಡಿಸಿಕೊಂಡ ಕಷ್ಟಮ್ಸ್, DRI ಅಥವಾ ಸಂಬಂಧ ಪಟ್ಟ ಇತರ ಇಲಾಖೆಯ ಅಧಿಕಾರಿಗಳು ನಡೆಸುವ ಹರಾಜಿನಲ್ಲಿ ಕನಿಷ್ಠ ಆಮದು ಬೆಲೆಗಿಂತ ಕಡಿಮೆ ಬೆಲೆಯಲ್ಲಿ ವರ್ತಕರು ಖರೀದಿ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದರಿಂದ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ.
ಇಂಡೋನೇಷ್ಯಾ, ಬರ್ಮಾ ಮುಂತಾದ ದೇಶಗಳಿಂದ ಆಮದು ಆಗುವ ಅಡಿಕೆಯ ಗುಣಮಟ್ಟ ತುಂಬಾ ಕಳಪೆ. ಇವು FSSAI ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುವುದಿಲ್ಲ ಮತ್ತು ಮನುಷ್ಯನ ಉಪಯೋಗಕ್ಕೆ ಯೋಗ್ಯವಾಗಿರುವುದಿಲ್ಲ. ಆದುದರಿಂದ ವಶಪಡಿಸಿಕೊಂಡ ಅಡಿಕೆಯ ಗುಣಮಟ್ಟದ ಪರೀಕ್ಷೆಯನ್ನು ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಕಟ್ಟುನಿಟ್ಟಾಗಿ ನಡೆಸಬೇಕೆಂದು ಕ್ಯಾಂಪ್ಕೊ ಪ್ರಧಾನಮಂತ್ರಿಯವರನ್ನು ಆಗ್ರಹಿಸಿದೆ.
ಅಕ್ರಮ ಆಮದು ಅಡಿಕೆ ದೇಶೀ ಮಾರುಕಟ್ಟೆಗೆ ತೀವ್ರರೀತಿಯಲ್ಲಿ ಕೆಟ್ಟಪರಿಣಾಮ ನೀಡುವುದರ ಬಗ್ಗೆ ಕ್ಯಾಂಪ್ಕೊ ಅಧ್ಯಕ್ಷರು ಪ್ರಧಾನಮಂತ್ರಿಯವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.ಕರ್ನಾಟಕದ 31 ಜಿಲ್ಲೆಗಳ ಪೈಕಿ 17 ಜಿಲ್ಲೆಗಳ ರೈತರು ಜೀವನಾಧರವಾಗಿ ಅಡಿಕೆಯನ್ನೇ ಅವಲಂಭಿಸಿದೆ. ವಿದೇಶಿ ಅಡಿಕೆಯ ಒಳಹರಿವು ಈ ಭಾಗದ ರೈತರ ಜೀವನವನ್ನೇ ನರಕ ಸದೃಶಗೊಳಿಸಿದೆ.
ಪ್ರಧಾನ ಮಂತ್ರಿಯವರ ಮಧ್ಯಪ್ರವೇಶ ರೈತರ ಜೀವನವನ್ನು ಹಸನಾಗಿಸುವುದಲ್ಲದೇ, ನೆಲಕಚ್ಚಿರುವ ಮಾರುಕಟ್ಟೆಯನ್ನು ಚೇತರಿಸಲು ಸಾಧ್ಯ ಎಂಬ ಆಶಾಭಾವನೆಯನ್ನು ಕ್ಯಾಂಪ್ಕೋ ವ್ಯಕ್ತಪಡಿಸಿದೆ.
Campco requested to the Prime Minister to intervene to stop the import of Arecanut. It expressed hope that the Prime Minister’s intervention would not only improve the lives of farmers but also revive the battered market.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ೨…
ಹಲಸಿನ ಕಾಯಿ ಪೂರಿಗೆ ಬೇಕಾಗುವ ಸಾಮಗ್ರಿಗಳು: ಹಲಸಿನ ಕಾಯಿ 1/2 ಕಪ್, ಗೋಧಿ ಹುಡಿ.1…
ಸರಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು…
ನೈಸರ್ಗಿಕ ರಬ್ಬರ್ ಮತ್ತು ಅದರ ಉತ್ಪನ್ನಗಳು ಅರಣ್ಯನಾಶ ಮುಕ್ತ ನಿಯಮಗಳಿಗಾಗಿ ಯುರೋಪಿಯನ್ ಒಕ್ಕೂಟ…
ಮುನ್ಸೂಚನೆಯಂತೆ ಮೇ 1 ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಆರಂಭವಾಗುವ ಸಾಧ್ಯತೆಗಳಿವೆ.
ಖಾಸಗಿಯವರಿಂದ ಒತ್ತುವರಿಯಾಗಿರುವ ಪ್ರದೇಶವನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ…