ಜ.10 ರಿಂದ ಕ್ಯಾಂಪ್ಕೋ ವತಿಯಿಂದ ದೋಟಿ ಕೊಯ್ಲು ತರಬೇತಿ | ಸೊಸೈಟಿಗಳ ಸಹಕಾರಕ್ಕೆ ವಿನಂತಿ

December 14, 2021
10:18 PM

ಕ್ಯಾಂಪ್ಕೋ ವತಿಯಿಂದ ಜ.10 ರಿಂದ ಮೂರು ದಿನದ ದೋಟಿ ಕೊಯ್ಲು ಹಾಗೂ ಸಿಂಪಡಣೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಸಾಕಷ್ಟು ಅರ್ಜಿಗಳು ಬಂದಿದ್ದು ಪ್ರಾಥಮಿಕ ಸಹಕಾರಿ ಸಂಘಗಳಿಂದಲೂ ಕೂಡಾ ಈ ದಿಸೆಯಲ್ಲಿ ಸಹಕಾರ ಬೇಕಾಗಿದೆ ಎಂದು ಕ್ಯಾಂಪ್ಕೋ ಮನವಿ ಮಾಡಿದೆ.

ಈ ತರಬೇತಿ ದಕ ಮತ್ತು ಕಾಸರಗೋಡು ಜಿಲ್ಲೆಗಳಿಗೆ ಸದ್ಯ ಮೀಸಲು. ಈತರಬೇತಿಯ ನಂತರ ಜಾಬ್ ವರ್ಕ್‌ ಮಾಡುವವರಿಗೆ ಮೊದಲ ಆದ್ಯತೆ ನೀಡಲಾಗಿದೆ. ಇನ್ನೂ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಹಾಗೂ ಕೌಶಲ್ಯ ಹೆಚ್ಚಿಸಲು ನೆಲೆಯಲ್ಲೂ ಈ ಯೋಜನೆಯನ್ನು ಗ್ರಾಮೀಣ ಭಾಗಗಳಿಗೂ ತಲುಪುವ ಉದ್ದೇಶದಿಂದ ಸಹಕಾರಿ ಸಂಘಗಳ ಸಹಕಾರ ಅಗತ್ಯವಾಗಿದ್ದು ಸಹಕಾರಿ ಸಂಘಗಳ ಮೂಲಕ ಅರ್ಜಿ ಹಾಕಿಸಬಹುದಾಗಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ದಶಂಬರ 20.  ಅರ್ಜಿಫಾರಂಗಳು  ದಕ ಹಾಗೂ ಕಾಸರಗೋಡು ಜಿಲ್ಲೆಗಳ ಎಲ್ಲಾ ಕ್ಯಾಂಪ್ಕೋ ಶಾಖೆಗಳಲ್ಲಿ ಲಭ್ಯವಿವೆ.  ಅರ್ಹ ಅಭ್ಯರ್ಥಿಗಳು ಹೆಚ್ಚಿದ್ದರೆ ಮುಂದೆ ಸೊಸೈಟಿ ಮಟ್ಟದಲ್ಲೇ ಚಿಕ್ಕಚಿಕ್ಕ ತರಬೇತಿ ಶಿಬಿರ ಏರ್ಪಡಿಸಬಹುದು.

ದೋಟಿ ಮೂಲಕ ಮಾಡುವ ಕೊಯ್ಲಿನಲ್ಲಿ ಅಪಾಯ ಸಾಧ್ಯತೆ ಕಡಿಮೆ. ಇದರಿಂದಾಗಿ ಕುಮಟಾ ತಾಲೂಕಿನ ಮೂರೂರು – ಕಲ್ಲಬ್ಬೆಗಳಲ್ಲಿ 50ಕ್ಕೂ ಹೆಚ್ಚು ಜಾಬ್‌ ವರ್ಕ್‌ ಮಾಡಲು ತಯಾರಾಗಿದ್ದಾರೆ. ಇವರು ತಿಂಗಳಿಗೆ 25,000 ರೂ.ಯಷ್ಟು ಆದಾಯ ಗಳಿಸುತ್ತಿದ್ದಾರೆ. ಅಡಿಕೆ ಪ್ರದೇಶದಲ್ಲಿಈ ಥರದ ಜಾಬ್‌ ವರ್ಕ್‌ ಗೆ ಹೆಚ್ಚುಒಲವು ಪಡೆಯುತ್ತಿದೆ.

ಪರಿಸ್ಥಿತಿ ಮನಗಂಡ ತೀರ್ಥಹಳ್ಳಿಯ ಕೃಷಿಕ ಸಂಘಟನೆಗಳು ಮತ್ತು ಉತ್ತರಕನ್ನಡದ ಹಲವು ಪ್ರಾಥಮಿಕ ಸೊಸೈಟಿಗಳೂ ದೋಟಿ ಮೂಲಕ ಕೊಯ್ಲಿನ ತರಬೇತಿ ನೀಡಲು ಮುಂದಾಗಿವೆ.

ಅಡಿಕೆಪತ್ರಿಕೆ, ಸಿಪಿಸಿಆರ್‌ಐ, ಮತ್ತು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘಗಳು ಕ್ಯಾಂಪ್ಕೋ ತರಬೇತಿಗೆ ಸಹಯೋಗ ಕೊಡುತ್ತಿವೆ. ಕೋವಿಡ್ ಕಾರಣದಿಂದ  ನಗರಗಳಿಂದ ಹಳ್ಳಿಗೆ ಮರಳಿದ ಯುವಕರು ಮತ್ತು ಕಳೆಕತ್ತರಿಸುವ ಜಾಬ್ ವರ್ಕ್‌ ಮಾಡುವವರಿಗೆ  ಈ ತರಬೇತಿ ಉತ್ತಮ ಅವಕಾಶ ತೆರೆದುಕೊಡಬಲ್ಲುದು. ತರಬೇತಿಯ ಬಗ್ಗೆ ತಿಳಿಸಿಕೊಟ್ಟು, ವಿವಿಧ ಊರುಗಳ ಅರ್ಹ ಅಭ್ಯರ್ಥಿಗಳನ್ನು ಮುಂದೆ ತರಲು ಪ್ರಾಥಮಿಕ ಸಹಕಾರಿ ಸಂಘಗಳ ಸಹಕಾರವನ್ನು ಕೋರಲಾಗಿದೆ ಎಂದು ಕ್ಯಾಂಪ್ಕೋ ಪ್ರಕಟಣೆ ತಿಳಿಸಿದೆ. ಹೆಚ್ಚಿನವಿವರಗಳಿಗೆ ಶಂ. ನಾ. ಖಂಡಿಗೆ( ಶಿಬಿರಾಧಿಕಾರಿ) : 99464 06321, ಈಶ್ವರನಾಯ್ಕ : 94493 32906 ಇವರನ್ನುಸಂಪರ್ಕಿಸಬಹುದು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ
August 13, 2026
6:59 AM
by: ದ ರೂರಲ್ ಮಿರರ್.ಕಾಂ
ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ
August 12, 2026
8:24 PM
by: ದ ರೂರಲ್ ಮಿರರ್.ಕಾಂ
ತೋಟಗಾರಿಕಾ ಬೆಳೆಗಾರರ ಪರ ಲೋಕಸಭೆಯಲ್ಲಿ ಧ್ವನಿ – ಹವಾಮಾನ ಆಧಾರಿತ ಬೆಳೆ ವಿಮೆ ಮರುಪರಿಷ್ಕರಣೆಗೆ ಕ್ಯಾ. ಚೌಟ ಒತ್ತಾಯ
August 12, 2026
6:58 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಅಕ್ರಮ ಆಮದು ಕಡಿವಾಣ – ರೋಸ್ಟೆಡ್ ಅಡಿಕೆಗೆ ₹351 ಕನಿಷ್ಠ ದರ – ಕಸ್ಟಮ್ಸ್‌ ನಿಗಾ ಎಂದ ಕೇಂದ್ರ
August 11, 2026
10:31 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror