ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರಿನ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ರಿಕ್ರಿಯೇಷನ್ ಸೆಂಟರಿನ ವಸತಿ ನಿಲಯದಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯೋಗ ಶಿಕ್ಷಕಿ ,ಬಿಜೆಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಶರಾವತಿ ರವಿ ನಾರಾಯಣ ಮಾತನಾಡಿ, ಸ್ವಾಸ್ಥ್ಯ ಎಂದರೆ ಆರೋಗ್ಯ, ವಿಶ್ವ ಸಂಸ್ಥೆಯ ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ ಸ್ವಾಸ್ಥ್ಯ ಎಂದರೆ ದೈಹಿಕ, ಮಾನಸಿಕ, ಸಾಮಾಜಿಕ, ಆರ್ಥಿಕ ಮತ್ತು ಆಧ್ಯಾತ್ಮಿಕತೆ ಇದು ಎಲ್ಲಾ ರೀತಿಯಲ್ಲಿ ಚೆನ್ನಾಗಿದ್ದರೆ ಅದು ಸ್ವಾಸ್ಥ್ಯ ಎಂದು ಹೇಳುತ್ತದೆ. ಹೀಗಾಗಿ ಮಹಿಳಾ ಸ್ವಾಸ್ಥ್ಯಕ್ಕೆ ಆದ್ಯತೆ ಇರಲಿ ಎಂದರು.
ಮುಖ್ಯ ಅತಿಥಿಗಳಾಗಿ ಎಸ್. ಡಿ. ಪಿ ರೆಮೆಡಿಸ್ ಮತ್ತು ರಿಸರ್ಚ್ ಸೆಂಟರಿನ ವ್ಯವಸ್ಥಾನಾ ಪಾಲುದಾರರೂ, ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಘದ ಜತೆ ಕಾರ್ಯದರ್ಶಿ ರೂಪಲೇಖಾ ಪಾಣಾಜೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಕ್ರಿಯೇಷನ್ ಸೆಂಟರಿನ ಉಪಾಧ್ಯಕ್ಷರಾದ ಸುಲತಾ ಸತೀಶ್ ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸುಲತಾ ಸತೀಶ್ ಮಾತನಾಡಿ ಸಿದ್ಧ ಉಡುಪು ಕಾರ್ಖಾನೆ ಒಂದರಲ್ಲಿ ಮಹಿಳೆಯರು, ಗಂಡಸರು ದುಡಿಯುತ್ತಿದ್ದ ಷ್ಟು ಸಮಯ ದುಡಿಯುತ್ತಿದ್ದರೂ,ಗಂಡಸರಿಗೆ ಸಿಗುವಷ್ಟು ವೇತನ ಮಹಿಳೆಯರಿಗೆ ಸಿಗುತ್ತಿರಲಿಲ್ಲ.ಇದಕ್ಕಾಗಿ ಮಹಿಳೆಯರು ಪ್ರತಿಭಟನೆಯನ್ನು ಮಾಡಿದರು ಜಗ್ಗದ ಆಡಳಿತ ಮಂಡಳಿ ಹಿಂಸೆಯನ್ನು ನೀಡಿತು, ಆದರೆ ಹೋರಾಟ ನಿಲ್ಲಲಿಲ್ಲ ಇದೆಲ್ಲದರ ಪರಿಣಾಮದಿಂದಾಗಿ 1975 ರ ಮಾರ್ಚ್ 8 ರಂದು ವಿಶ್ವಸಂಸ್ಥೆ ವಿಶ್ವ ಮಹಿಳಾ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿತು ಎಂದರು.
ವಾಣಿ ಪ್ರಶಾಂತ್ ಭಟ್ ಮತ್ತು ಬಿಂದು ಪ್ರಶಾಂತ್ ಡಿ. ಎಸ್ ಪ್ರಾರ್ಥನೆಯನ್ನು ಹಾಡಿದರು. ಅತಿಥಿಗಳ ಪರಿಚಯವನ್ನು ಬಿಂದು ಪ್ರಶಾಂತ್ ಡಿ. ಎಸ್ ಮತ್ತು ಕವಿತಾ ತೀರ್ಥರಾಮ್ ಮಾಡಿದರು. ವಾಣಿ ಪ್ರಶಾಂತ್ ಭಟ್ ಧನ್ಯವಾದ ಸಮರ್ಪಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಉಷಾ ಕಿರಣ್ ನೆರವೇರಿಸಿದರು.
ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗೆ ಬೇಲ್ ಪುರಿ ತಯಾರಿ ಮತ್ತು ಪ್ರಸ್ತುತಿಯನ್ನು ಹಾಗೂ ಒನ್ ಮಿನಿಟ್ ಸ್ಪರ್ಧೆಯನ್ನು ಏರ್ಪಡಿಸಲಾಯಿತು.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯನ್ನು ಶರಾವತಿ ರವಿ ನಾರಾಯಣ್ ಮತ್ತು ರೂಪಲೇಖಾ ಪಾಣಾಜೆ ಯವರು ಮಾಡಿದರು. ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಉದ್ಯೋಗಿಗಳ ಕುಟುಂಬಸ್ಥರು ಮತ್ತು ರಿಕ್ರಿಯೇಷನ್ ಸೆಂಟರಿನ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…
ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…