Advertisement
ಸುದ್ದಿಗಳು

ನಾ. ಕಾರಂತ ಪೆರಾಜೆಯವರ ಲೇಖನಗಳು ಬೆಂಗಳೂರು ವಿವಿ ಪಠ್ಯಕ್ಕೆ ಸೇರ್ಪಡೆ

Share

ಕೃಷಿ ಮಾಸಿಕ ಅಡಿಕೆ ಪತ್ರಿಕೆಯ ಸಹ ಸಂಪಾದಕ, ಅಂಕಣಗಾರ, ನಾ. ಕಾರಂತ ಪೆರಾಜೆಯವರ ಎರಡು ಕೃಷಿ ಸಂಬಂಧಿ ಲೇಖನಗಳು ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯದಲ್ಲಿ ಸೇರ್ಪಡೆಗೊಂಡಿದೆ. ಈ ಲೇಖನಗಳು ಉದಯವಾಣಿಯ ‘ನೆಲದ ನಾಡಿ’ ಅಂಕಣ ಹಾಗೂ ‘ತರಂಗ’ದಲ್ಲಿ ಪ್ರಕಟವಾದಂತಹುಗಳು.

Advertisement
Advertisement
ಬಿ.ಎಚ್.ಎಂ.ಪ್ರಥಮ ಸೆಮಿಸ್ಟರ್ – ಭಾಷಾ ಕನ್ನಡ ಪಠ್ಯದಲ್ಲಿ ‘ಆಹಾರ ಸಂರಕ್ಷಣೆಯಿಂದ ಬದುಕಿಗೆ ಭದ್ರತೆ’ (ಉದಯವಾಣಿ) ಎನ್ನುವ ಲೇಖನ. ನಮ್ಮ ಹಿರಿಯರ ಆಹಾರ ಸಂರಕ್ಷಣಾ ವಿಧಾನದ ಸುತ್ತ ಹೆಣೆದ ಬರಹವಿದು. ಹಲಸು, ಮಾವು, ಬಾಳೆಹಣ್ಣು, ಭತ್ತ.. ಮೊದಲಾದವುಗಳ ಸಂರಕ್ಷಣೆ, ಅವುಗಳ ಮೌಲ್ಯವರ್ಧನೆಗಳು ಹಳ್ಳಿ ಬದುಕಿನಲ್ಲಿ ಸಹಜವಾಗಿ ಹಾಸುಹೊಕ್ಕಾದ ಕಾಲಘಟ್ಟವನ್ನು ಕಾರಂತರು ಲೇಖನದಲ್ಲಿ ವಿವರಿಸಿದ್ದರು. ಒಂದು ಕಾಲಘಟ್ಟದಲ್ಲಿ ಬದುಕನ್ನು ಆಧರಿಸಿದ ಹಲಸು, ಹಲಸಿನ ಹಣ್ಣು, ಹಲಸಿನ ಕಾಯಿಯ ಉಪ್ಪುಸೊಳೆ, ಪಲ್ಯ, ವಿವಿಧ ಖಾದ್ಯಗಳ ಪರಿಚಯ; ಕಾಡುಮಾವಿನ ಮಾಂಬಳ ತಯಾರಿ, ಹಲಸಿನ ಹಣ್ಣಿನ ಬೆರಟ್ಟಿ, ಹಸಿಮೆಣಸಿನ ಮಜ್ಜಿಗೆ ಮೆಣಸು, ಬಾಳೆಹಣ್ಣಿನ ಸುಕೇಳಿ, ಪುನರ್ಪುಳಿ ಮಂದಸಾರ ಹಾಗೂ ಸಿಪ್ಪೆಯ ಬಳಕೆ, ಅಕ್ಕಿ ಮುಡಿಯ ಬಳಕೆ.. ಇವೆಲ್ಲಾ ಅಲಿಖಿತ ಹಳ್ಳಿ ತಂತ್ರಜ್ಞಾನದಲ್ಲಿ ಕಾಪಾಡಲ್ಪಟ್ಟವುಗಳು. ಯಾವುದೇ ಕೃತಕ ಸಂರಕ್ಷಕಗಳನ್ನು ಬಳಸದ ಹಳ್ಳಿ ಜ್ಞಾನ.
Advertisement

ಬಿ.ಬಿ.ಎ ಪ್ರಥಮ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯದಲ್ಲಿ ‘ಹತ್ತು ಪೈಸೆಗೆ ಒಂದು ಲೀಟರ್ ನೀರು’ (ತರಂಗ) ಲೇಖನ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಶುದ್ಧ ಗಂಗಾ’ ಯೋಜನೆಯಡಿ ರೂಪುಗೊಂಡ ಅಭಿಯಾನ. ಹಳ್ಳಿ ಜನರಿಗೆ ಕುಡಿಯಲು ಶುದ್ಧ ನೀರನ್ನು ಒದಗಿಸುವ ಈ ಯೋಜನೆಯು ಯಶಸ್ಸಾಗಿದೆ. ಇದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಕನಸು. ಮುಖ್ಯವಾಗಿ ಹೆಚ್ಚು ನೀರಿನ ಸಮಸ್ಯೆಯಿರುವ ಉತ್ತರ ಕರ್ನಾಟಕ ಭಾಗದಲ್ಲಿ ತುಂಬು ಜನಸ್ವೀಕೃತಿಗೊಂಡ ಯೋಜನೆ. ನೀರಿನ ಹಂಚಿಕೆಗೆ ಕ್ರಮಬದ್ಧವಾದ ಆಡಳಿತ ವ್ಯವಸ್ಥೆಯನ್ನೂ ಮಾಡಿದ್ದಾರೆ. ಆರೋಗ್ಯ ಕಾಳಜಿಯ ಗ್ರಾಮೀಣರಿಗೆ ‘ಶುದ್ಧ ಗಂಗಾ’ ವರದಾನವಾಗಿದೆ.
Advertisement

ನಾ. ಕಾರಂತ ಪೆರಾಜೆಯವರು ಈ ಹಿಂದೆ ಬರೆದಿದ್ದ ಪದ್ಮಶ್ರೀ ಹರೇಕಳ ಹಾಜಬ್ಬರ ಬಗೆಗಿನ ‘ಅಕ್ಷರ ಯೋಗಿಯ ನೋಡಲ್ಲಿ’ ಲೇಖನವು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯಗಳ ವಾಣಿಜ್ಯ ವಿಭಾಗದ ನಾಲ್ಕನೇ ಸೆಮಿಸ್ಟರ್‍ನ ಕನ್ನಡ ಪಠ್ಯದಲ್ಲಿ ಸೇರಿತ್ತು.
Advertisement
ಮೇಲಿನ ಲೇಖನಗಳು ‘ನೆಲದ ನಾಡಿ’ ಪುಸ್ತಕದಲ್ಲಿ ಪ್ರಕಟವಾಗಿದ್ದುವು. ಬೆಂಗಳೂರು ವಿವಿಯವರು ಪುಸ್ತಕದಿಂದ ಲೇಖನಗಳನ್ನು ಆಯ್ದುಕೊಂಡಿದ್ದಾರೆ. ನಾ. ಕಾರಂತರು ಕೃಷಿ, ಯಕ್ಷಗಾನದ ಕುರಿತಾದ ಪುಸ್ತಕ ರಚಯಿತರು. ಉದಯವಾಣಿ, ಹೊಸದಿಗಂತ, ಪ್ರಜಾವಾಣಿ ಹಾಗೂ ಸುದ್ದಿ ಬಿಡುಗಡೆಗಳಲ್ಲಿ ಅಂಕಣಕಾರರಾಗಿದ್ದರು.’ಪುತ್ತೂರು ತಾಲೂಕು ಹದಿನೇಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕೋವಿಡ್ ಕಾಲಘಟ್ಟದ ಧನಾತ್ಮಕ ಯಶೋಗಾಥೆಗಳ ಸಂಕಲನ ‘ಮುಸ್ಸಂಜೆಯ ಹೊಂಗಿರಣ’ ಹಾಗೂ ಹಲಸಿನ ಜಗದಗಲದ ಹಿನ್ನೋಟ ‘ಅನ್ನದ ಮರ’ ಅವರ ಈಚೆಗಿನ ಪ್ರಕಟಣೆಗಳು.

 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ನಿಮಗಿದು ಗೊತ್ತೇ? : ಆರೋಗ್ಯಕ್ಕಾಗಿ ಭೂ ವಿದ್ಯುತ್ ಆಯಸ್ಕಾಂತದ ಮಹತ್ವ… : ಅರ್ಥಿಂಗ್/ಗ್ರೌಂಡಿಂಗ್ ಹಾಗೂ ಆರೋಗ್ಯ!

ಪರಿಸರ ಔಷಧ ಶಾಸ್ತ್ರವು(Environmental Medicine) ಸಾಮಾನ್ಯವಾಗಿ ಮಾನವನ ಆರೋಗ್ಯದ(Human health) ಮೇಲೆ ನಕಾರಾತ್ಮಕ…

2 hours ago

ಎರಡನೇ ಹಂತದ ಮತದಾನಕ್ಕೆ ರಾಜ್ಯದಲ್ಲಿ ಭರ್ಜರಿ ತಯಾರಿ : ಭಾರತ ವಿಶ್ವದ ಟಾಪ್ 3 ಸ್ಥಾನಕ್ಕೇರಿಸುವ ಶಕ್ತಿ ನಿಮ್ಮ ಮತಕ್ಕಿದೆ : ಮೋದಿ

ಕರ್ನಾಟಕದಲ್ಲಿ(Karnakta) ಮೊದಲ ಹಂತದ ಚುನಾವಣೆ(Election) ಮುಗಿದಿದ್ದು, ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ(Campaign)…

2 hours ago

ರೈತರ ಪಾಲಿಗೆ ನೆರವಾದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ : 17ನೇ ಕಂತಿನ ಹಣ ರೈತರ ಖಾತೆಗೆ ಯಾವಗ ಬರುತ್ತೆ..?

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌(PM Kisan) ಯೋಜನೆ ಆರಂಭವಾದಗಿಂದಲೂ ರೈತರ(Farmer) ಖಾತೆಗೆ ನೇರವಾಗಿ…

3 hours ago

ಇವರು ಎಲ್ಲಾ ಕುಂದುಕೊರತೆಗಳ ನಡುವೆಯೂ ಮತದಾನ ಮಾಡ್ತಾರೆ…! | ಅವರು ಎಲ್ಲಾ ಸೌಕರ್ಯ ಇದ್ದರೂ ಮತದಾನ ಮಾಡಲಾರರು..!

ನಗರದಲ್ಲಿ ಮತದಾನ ಕಡಿಮೆಯಾಗಿರುವ ಬಗ್ಗೆ ಹಾಗೂ ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ಪ್ರಬಂಧ…

3 hours ago

Karnataka Weather | 29-04-2024 | ರಾಜ್ಯದ ಹಲವು ಕಡೆ ಅಧಿಕ ತಾಪಮಾನ | ಮಲೆನಾಡು ಭಾಗದ ಕೆಲವು ಕಡೆ ಮಳೆ ನಿರೀಕ್ಷೆ |

ಈಗಿನಂತೆ ಅಧಿಕ ತಾಪಮಾನದ ವಾತಾವರಣದ ಇನ್ನೂ 3 ರಿಂದ 4 ದಿನಗಳ ಕಾಲ…

4 hours ago

ಮೈಸೂರು – ಚಾಮರಾಜನಗರ ಭಾಗದ ಪ್ರಭಾವಿ ನಾಯಕ | ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಇನ್ನಿಲ್ಲ

ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ, ಮೈಸೂರು – ಚಾಮರಾಜನಗರ ಭಾಗದ ಪ್ರಭಾವಿ ದಲಿತ…

5 hours ago