Advertisement
ಸುದ್ದಿಗಳು

ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರಿನಲ್ಲಿ ಮಹಿಳಾ ದಿನಾಚರಣೆ | ಸ್ವಾಸ್ಥ್ಯ ಎಂದರೆ ಆರೋಗ್ಯ – ಮಹಿಳಾ ಸ್ವಾಸ್ಥ್ಯಕ್ಕೆ ಆದ್ಯತೆ ಇರಲಿ |

Share

ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರಿನ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ರಿಕ್ರಿಯೇಷನ್ ಸೆಂಟರಿನ ವಸತಿ ನಿಲಯದಲ್ಲಿ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯೋಗ ಶಿಕ್ಷಕಿ ,ಬಿಜೆಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಶರಾವತಿ ರವಿ ನಾರಾಯಣ ಮಾತನಾಡಿ, ಸ್ವಾಸ್ಥ್ಯ ಎಂದರೆ ಆರೋಗ್ಯ, ವಿಶ್ವ ಸಂಸ್ಥೆಯ ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ ಸ್ವಾಸ್ಥ್ಯ ಎಂದರೆ ದೈಹಿಕ, ಮಾನಸಿಕ, ಸಾಮಾಜಿಕ, ಆರ್ಥಿಕ ಮತ್ತು ಆಧ್ಯಾತ್ಮಿಕತೆ ಇದು ಎಲ್ಲಾ ರೀತಿಯಲ್ಲಿ ಚೆನ್ನಾಗಿದ್ದರೆ ಅದು ಸ್ವಾಸ್ಥ್ಯ ಎಂದು ಹೇಳುತ್ತದೆ. ಹೀಗಾಗಿ ಮಹಿಳಾ ಸ್ವಾಸ್ಥ್ಯಕ್ಕೆ ಆದ್ಯತೆ ಇರಲಿ ಎಂದರು.

ಮುಖ್ಯ ಅತಿಥಿಗಳಾಗಿ ಎಸ್. ಡಿ. ಪಿ ರೆಮೆಡಿಸ್ ಮತ್ತು ರಿಸರ್ಚ್ ಸೆಂಟರಿನ ವ್ಯವಸ್ಥಾನಾ ಪಾಲುದಾರರೂ, ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಘದ ಜತೆ ಕಾರ್ಯದರ್ಶಿ ರೂಪಲೇಖಾ ಪಾಣಾಜೆ ಉಪಸ್ಥಿತರಿದ್ದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಕ್ರಿಯೇಷನ್ ಸೆಂಟರಿನ ಉಪಾಧ್ಯಕ್ಷರಾದ ಸುಲತಾ ಸತೀಶ್ ವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸುಲತಾ ಸತೀಶ್ ಮಾತನಾಡಿ ಸಿದ್ಧ ಉಡುಪು ಕಾರ್ಖಾನೆ ಒಂದರಲ್ಲಿ ಮಹಿಳೆಯರು, ಗಂಡಸರು ದುಡಿಯುತ್ತಿದ್ದ ಷ್ಟು ಸಮಯ ದುಡಿಯುತ್ತಿದ್ದರೂ,ಗಂಡಸರಿಗೆ ಸಿಗುವಷ್ಟು ವೇತನ ಮಹಿಳೆಯರಿಗೆ ಸಿಗುತ್ತಿರಲಿಲ್ಲ.ಇದಕ್ಕಾಗಿ ಮಹಿಳೆಯರು ಪ್ರತಿಭಟನೆಯನ್ನು ಮಾಡಿದರು ಜಗ್ಗದ ಆಡಳಿತ ಮಂಡಳಿ ಹಿಂಸೆಯನ್ನು ನೀಡಿತು, ಆದರೆ ಹೋರಾಟ ನಿಲ್ಲಲಿಲ್ಲ ಇದೆಲ್ಲದರ ಪರಿಣಾಮದಿಂದಾಗಿ 1975 ರ ಮಾರ್ಚ್ 8 ರಂದು ವಿಶ್ವಸಂಸ್ಥೆ ವಿಶ್ವ ಮಹಿಳಾ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿತು ಎಂದರು.

ವಾಣಿ ಪ್ರಶಾಂತ್ ಭಟ್ ಮತ್ತು ಬಿಂದು ಪ್ರಶಾಂತ್ ಡಿ. ಎಸ್ ಪ್ರಾರ್ಥನೆಯನ್ನು ಹಾಡಿದರು. ಅತಿಥಿಗಳ ಪರಿಚಯವನ್ನು ಬಿಂದು ಪ್ರಶಾಂತ್ ಡಿ. ಎಸ್ ಮತ್ತು ಕವಿತಾ ತೀರ್ಥರಾಮ್ ಮಾಡಿದರು. ವಾಣಿ ಪ್ರಶಾಂತ್ ಭಟ್ ಧನ್ಯವಾದ ಸಮರ್ಪಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಉಷಾ ಕಿರಣ್ ನೆರವೇರಿಸಿದರು.

ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗೆ ಬೇಲ್ ಪುರಿ ತಯಾರಿ ಮತ್ತು ಪ್ರಸ್ತುತಿಯನ್ನು ಹಾಗೂ ಒನ್ ಮಿನಿಟ್ ಸ್ಪರ್ಧೆಯನ್ನು ಏರ್ಪಡಿಸಲಾಯಿತು.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯನ್ನು ಶರಾವತಿ ರವಿ ನಾರಾಯಣ್ ಮತ್ತು ರೂಪಲೇಖಾ ಪಾಣಾಜೆ ಯವರು ಮಾಡಿದರು. ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಉದ್ಯೋಗಿಗಳ ಕುಟುಂಬಸ್ಥರು ಮತ್ತು ರಿಕ್ರಿಯೇಷನ್ ಸೆಂಟರಿನ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

6 hours ago

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…

1 day ago

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

2 days ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

2 days ago