ಅಡಿಕೆ ಕ್ಯಾನ್ಸರ್‌ಕಾರಕ | ತಿರುಚಿದ ವರದಿ ಪ್ರಕಟಿಸಿದ WHO | ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ಕ್ಯಾಂಪ್ಕೊ ಒತ್ತಾಯ |

November 26, 2024
7:05 PM

ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್‌ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ ಪ್ರಕಟಿಸಿರುವುದಕ್ಕೆ ಕ್ಯಾಂಪ್ಕೊ ಅಧ್ಯಕ್ಷರಾದ ಕಿಶೋರ್ ಕುಮಾರ್‌ ಕೊಡ್ಗಿ ಅವರು  ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ರೀತಿಯ ವರದಿಗಳನ್ನು ತಿರುಚಿರುವ ವಿಶ್ವಆರೋಗ್ಯ ಸಂಸ್ಥೆ ಮತ್ತು IARC  ವಿರುದ್ಧ ತುರ್ತು ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ  ಜೆ.ಪಿ.ನಡ್ಡಾ ಅವರನ್ನು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಒತ್ತಾಯಿಸಿದ್ದಾರೆ.…..ಮುಂದೆ ಓದಿ….

Advertisement

ಮೂಲ ಸಂಶೋಧನಾ ವರದಿಗಳಲ್ಲಿ ತಂಬಾಕು ಸೇವನೆಯ ಪರಿಣಾಮದ ಕುರಿತು ಕೇಂದ್ರೀಕರಿಸಿ ಸಂಶೋಧನೆ ನಡೆಸಲಾಗಿತ್ತು. ಹಾಗಿದ್ದರೂ ಅಡಿಕೆ ಕ್ಯಾನ್ಸರ್‌ ಕಾರಕವೆಂದು ಬಿಂಬಿಸುವಸಲುವಾಗಿ ಮಾದರಿ ಸಂಖ್ಯೆ ಮತ್ತು ಶೀರ್ಷಿಕೆಯನ್ನು ತಿರುಚಿ ವರದಿ ಪ್ರಕಟಿಸಿರುವ WHI ಮತ್ತು IARC ಕ್ರಮ ಅಕ್ಷಮ್ಯ. ಇದು ಅಡಿಕೆ ಕೃಷಿಯನ್ನೆ ಜೀವನಾಧಾರವಾಗಿ ನಂಬಿರುವ ರೈತರ ಬದುಕಿಗೆ ಬಲವಾದ ಪೆಟ್ಟು ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಅಡಿಕೆಯನ್ನು ವರ್ಗೀಕರಿಸುವುದರ ಕುರಿತು ನ್ಯಾಯೋಚಿತ ವಿಮರ್ಶೆ ನಡೆಸಿ ರೈತರಿಗೆ ನ್ಯಾಯ ದೊರಕಿಸಿಕೊಡುವಂತೆ ಕೇಂದ್ರ ಸಚಿವರಲ್ಲಿ ವಿನಂತಿ ಮಾಡಲಾಗಿದೆ.

ಲಕ್ಷಾಂತರ ಜನರಿಗೆ ಜೀವನ ಕಟ್ಟಿಕೊಟ್ಟಿರುವ ಅಡಿಕೆಯ ತಪ್ಪುವರ್ಗೀಕರಣವನ್ನು ಸರಿಪಡಿಸಿ ರೈತರ ಬದುಕಿನ ದಾರಿದೀಪವಾಗುವಂತೆ ಮಾಡಲು ಕೇಂದ್ರ ಸರಕಾರ ಕ್ರಮ ತೆಗೆದುಕೊಳ್ಳುವಂತೆ ಸರಕಾರಕ್ಕೆ ಕ್ಯಾಂಪ್ಕೊ ವಿನಂತಿ ಮಾಡುತ್ತಿದೆ ಎಂದು ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿದ್ದಾರೆ.

The Central Arecanut & Cocoa Marketing & Processing Cooperative Ltd. (CAMPCO), representing lakhs of Arecanut Farmers, has formally appealed to the Hon’ble Union Minister for Health & Family Welfare, Sri.Jagat Prakash Nadda, seeking urgent action against the alleged data manipulation by the World Health Organization (WHO) and the International Agency for Research on Cancer (IARC).

CAMPCO highlighted that the WHO/IARC misrepresented research findings to wrongly implicate Arecanut as Carcinogenic. Original studies primarily focused on tobacco, yet Arecanut was unjustifiably included with manipulated sample sizes and misleading titles. These distortions have severely impacted the livelihoods of lakhs of Arecanut Farmers who depend on the crop for sustenance.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 26-04-2026 | ಸದ್ಯ ಸೆಖೆಯ ಉಗ್ರ ರೂಪ…! ಏಪ್ರಿಲ್ 28 ರಿಂದ ರಾಜ್ಯಾದ್ಯಂತ ಮಳೆ ಸಾಧ್ಯತೆ
April 26, 2026
1:54 PM
by: ಸಾಯಿಶೇಖರ್ ಕರಿಕಳ
ಅಡಿಕೆ ಎಲೆಚುಕ್ಕೆರೋಗ – ಸಿಪಿಸಿಆರ್‌ಐ ನೇತೃತ್ವದಲ್ಲಿ ಸುಳ್ಯದ ಗುತ್ತಿಗಾರಿನಲ್ಲಿ ಸಂವಾದ
April 26, 2026
7:33 AM
by: ದ ರೂರಲ್ ಮಿರರ್.ಕಾಂ
2026 ಎಲ್ ನಿನೊ ಎಚ್ಚರಿಕೆ..! ಭಾರತ ಸೇರಿ ಏಷ್ಯಾದಲ್ಲಿ ಬರ-ಬಿಸಿಲಿನ ಡಬಲ್ ಶಾಕ್
April 25, 2026
9:16 PM
by: ದ ರೂರಲ್ ಮಿರರ್.ಕಾಂ
ಭಾರೀ ಬಿಸಿ ಹೊಡೆತ..! ಜಗತ್ತಿನ 1 ಬಿಲಿಯನ್ ಜನರ ಬದುಕಿಗೆ ಬಿಸಿ ಹೊಡೆತ
April 25, 2026
9:04 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror