ಪುತ್ತೂರಿನಲ್ಲಿ ಕೃಷಿಯಂತ್ರ ಮೇಳಕ್ಕೆ ಭರದ ಸಿದ್ಧತೆ | 310 ಕ್ಕೂ ಅಧಿಕ ಮಳಿಗೆಗಳು | ವರ್ಚುವಲ್‌ ಟೂರಿಂಗ್‌ ಮೂಲಕ ಮಾಹಿತಿಗೆ ವ್ಯವಸ್ಥೆ |

February 7, 2023
10:29 PM

ಪುತ್ತೂರಿನಲ್ಲಿ ಫೆ.10 ರಿಂದ ಫೆ.12 ರ ವರೆಗೆ ಕೃಷಿಯಂತ್ರ ಮೇಳೆ ನಡೆಯಲಿದೆ. ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಸುಮಾರು 310 ಮಳಿಗೆಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಕೃಷಿ, ವ್ಯಾಪಾರ, ವಾಣಿಜ್ಯ, ಗಿಡ ಹೀಗೇ ವಿವಿಧ ವಿಭಾಗಗಳಲ್ಲಿ ಮಳಿಗೆಗಳ ಸಿದ್ಧತೆಯಾಗಿದೆ. ವಿಶೇಷವಾಗಿ ಈ ಬಾರಿ ವರ್ಚುವಲ್‌ ಟೂರಿಂಗ್‌ ವ್ಯವಸ್ಥೆಯನ್ನು ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ತಯಾರು ಮಾಡಿದ್ದಾರೆ. ಈ ಮೂಲಕ ಯಂತ್ರ ಮೇಳದ ಸಮಗ್ರ ಮಾಹಿತಿಯನ್ನು ಕೃಷಿಕರು ಪಡೆಯಬಹುದಾಗಿದೆ. ಯಂತ್ರ ಮೇಳದ ಬಳಿಕವೂ ಯಂತ್ರಗಳ ತಯಾರಕರ, ಮಾರಾಟಗಾರರ ಸಂಪರ್ಕ ಸಂಖ್ಯೆ ಲಭ್ಯವಾಗುವಂತಹ ವ್ಯವಸ್ಥೆ ಮಾಡಲಾಗುತ್ತಿದೆ.

ಪುತ್ತೂರಿನ ನೆಹರುನಗರದ ವಿವೇಕಾನಂದ ಕಾಲೇಜು ಆವರಣದಲ್ಲಿ ಕ್ಯಾಂಪ್ಕೋ, ಎಆರ್‌ಡಿಎಫ್‌ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಗ , ವಿವೇಕಾನಂದ  ಇಂಜಿನಿಯರಿಂಗ್‌ ಕಾಲೇಜು ಸಹಯೋಗದೊಂದಿಗೆ ನಡೆಯುವ 5 ನೇ ಕೃಷಿಯಂತ್ರ ಮೇಳಕ್ಕೆ ಸಿದ್ಧತೆ ನಡೆಯುತ್ತಿದೆ. ಫೆ.10 ರಿಂದ 12 ವರೆಗೆ ಮೇಳ ನಡೆಯುತ್ತದೆ. ಯಂತ್ರ ಮೇಳದಲ್ಲಿ ಸುಮಾರು 140 ಮಳಿಗೆಗಳು ಕೃಷಿ ಯಂತ್ರಗಳು, ಸುಮಾರು 75 ಕನಸಿನ ಮನೆಗೆ ಸಂಬಂಧಿಸಿದ್ದು, 5 ನರ್ಸರಿ, 45 ವಾಣಿಜ್ಯ, 11 ಅಟೋ ಮೊಬೈಲ್‌, 20 ಸಾವಯವ, 15 ಕ್ಯಾಂಪ್ಕೋ ಮಳಿಗೆಗಳು , ಕೆಎಂಎಫ್‌ ಸೇರಿದಂತೆ ವಿವಿಧ ಮಳಿಗೆಗಳು ಇರಲಿದೆ.

Advertisement

ಈ ಬಾರಿ ವಿಶೇಷವಾಗಿ ಕೃಷಿ ಯಂತ್ರ ಅನ್ವೇಷಕರಿಗೆ ಅವಕಾಶ ನೀಡಲಾಗಿದ್ದು,  ವಿಶೇಷ ಮಾದರಿಯ ಡ್ರೈಯರ್‌ ತಯಾರು ಮಾಡಿದ ಶಿರಸಿಯ ಕೃಷಿಕರೊಬ್ಬರು ಆಗಮಿಸುವರು. ಡ್ರೋನ್‌ ,ಟ್ರೀ ಬೈಕ್‌, ಲೋಡರ್‌ ಸೇರಿದಂತೆ ವಿಶೇಷ ಯಂತ್ರಗಳ ಗಮನ ಸೆಳೆಯಲಿದೆ.  ಸಣ್ಣ ಸಣ್ಣ ಯಂತ್ರಗಳ ಕಡೆಗೇ ಈ ಬಾರಿ ಹೆಚ್ಚು ಗಮನಹರಿಸಲಾಗಿದ್ದು, ಕೃಷಿಕರಿಗೆ ದಿನ ಬಳಕೆಗೆ ಅಗತ್ಯ ಇರುವ ಯಂತ್ರಗಳೇ ಹೆಚ್ಚಾಗಿ ಆಗಮಿಸಲಿದೆ. ಕನಸಿನ ಮನೆಯಲ್ಲೂ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣ, ಪೈಂಟ್‌ ಸೇರಿದಂತೆ ಇತರ ಆಕರ್ಷಣೆಗಳೂ ಇಲ್ಲಿದೆ.  ಇಲೆಕ್ಟ್ರಿಕ್‌ ವಾಹನಗಳಿಗಾಗಿ ವಿಶೇಷ ಅವಕಾಶ ಇದೆ.

Advertisement
ವರ್ಚುವಲ್‌ ಟೂರಿಂಗ್‌ ವ್ಯವಸ್ಥೆ...!
ಈ ಯಂತ್ರಮೇಳದಲ್ಲಿ ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ವಿಶೇಷವಾಗಿ ಈ ಮೇಳಕ್ಕಾಗಿಯೇ ವೆಬ್‌ ಸೈಟ್‌ ಮೂಲಕ ಮೇಳದ ಎಲ್ಲಾ ಮಾಹಿತಿಯನ್ನು ನೀಡಲು ವ್ಯವಸ್ಥೆ ಮಾಡಿದ್ದಾರೆ. ಫೆ.9 ರಂದು ಈ ವೆಬ್‌ ಸೈಟ್‌ ಸಮಗ್ರ ಮಾಹಿತಿಯೊಂದಿಗೆ ಜನರಿಗೆ ತೆರೆದುಕೊಳ್ಳಲಿದೆ. ವರ್ಚುವಲ್‌ ರಿಯಾಲಿಟಿ ಟೂರಿಂಗ್‌ ವ್ಯವಸ್ಥೆಯ ಮೂಲಕ ಮೇಳದ ಆವರಣಕ್ಕೆ ಆಗಮಿಸುವ ದಾರಿಯಿಂದ ತೊಡಗಿ ಮೇಳದಲ್ಲಿರುವ ಸ್ಟಾಲ್‌ ವಿಭಾಗಗಳು, ಶೌಚಾಲಯ, ಪಾರ್ಕಿಂಗ್‌ ವ್ಯವಸ್ಥೆ ಹೀಗೆ ಎಲ್ಲಾ ವಿವರಗಳನ್ನು ಈ ವ್ಯವಸ್ಥೆಯ ಮೂಲಕ ನೀಡಲಾಗುತ್ತಿದೆ.  ಮೇಳದ ಬಳಿಕ ಇದೇ ವೆಬ್‌ ಸೈಟ್‌ ಮೂಲಕ ಯಂತ್ರ ಮೇಳದ ಪ್ರತೀ ಸ್ಟಾಲ್‌ ವಿವರ ದಾಖಲಿಸಿ, ಅವರ ಸಂಪರ್ಕ ಸಂಖ್ಯೆಯ ಸಹಿತ ಎಲ್ಲಾ ವಿವರವನ್ನು ದಾಖಲಿಸಲಾಗುತ್ತದೆ. ಈ ಮೂಲಕ ಮುಂದೆಯೂ ಕೃಷಿಕರಿಗೆ ಅನುಕೂಲವಾಗುವ ವ್ಯವಸ್ಥೆಯನ್ನು ಕಾಲೇಜು ವಿದ್ಯಾರ್ಥಿಗಳು ಪ್ರಾಜೆಕ್ಟ್‌ ರೂಪದಲ್ಲಿ ಮಾಡುತ್ತಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲಸಿನ ಹಾಲಿನಿಂದ ವಸಡು ರೋಗಕ್ಕೆ ಚಿಕಿತ್ಸೆ…? ಬ್ರೆಜಿಲ್‌ ವಿಜ್ಞಾನಿಗಳ ಹೊಸ ಸಂಶೋಧನೆ ಆಶಾಭರವಸೆ ಮೂಡಿಸಿದೆ
June 28, 2026
10:21 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಬ್ಯಾನ್ ಅಲ್ಲ… ಕಲಬೆರಕೆ ಅಡಿಕೆಗೆ ಬ್ಯಾನ್ ಆಗಬೇಕು..! – ಮಲೆನಾಡಿನ ಅಡಿಕೆಗೆ ಪ್ರತ್ಯೇಕ ಮಾರುಕಟ್ಟೆ ಅಗತ್ಯ
June 28, 2026
7:21 AM
by: ಪ್ರಬಂಧ ಅಂಬುತೀರ್ಥ
ಬೆಲೆ ಕುಸಿದಾಗ ನಷ್ಟ ಬೇಡ – ರಂಬುಟಾನ್‌ ಫ್ರೀಜ್‌ ಮಾಡಿ, ನಂತರ ಮಾರಾಟ ಮಾಡಿ..! ಕೃಷಿಕನ ಹೊಸ ಪ್ರಯೋಗ
June 28, 2026
6:57 AM
by: ದ ರೂರಲ್ ಮಿರರ್.ಕಾಂ
ಚೆಸ್‌ ಬೋರ್ಡ್‌ನ ಆಚೆಗೂ ಗೆಲುವು – ಕಾಪುವಿನಲ್ಲಿ ಚೆಸ್ ಹಬ್ಬ, ವಿದ್ಯಾರ್ಥಿಗಳ ಕನಸುಗಳಿಗೆ ವೇದಿಕೆ | ಗ್ರಾಮೀಣ ಕರ್ನಾಟಕದಲ್ಲಿಯೂ ಬೆಳೆಯುತ್ತಿರುವ ಹೊಸ ಕ್ರೀಡಾ ಸಂಸ್ಕೃತಿ
June 27, 2026
11:20 PM
by: ವಿಶೇಷ ಪ್ರತಿನಿಧಿ

You cannot copy content of this page - Copyright -The Rural Mirror