MIRROR FOCUS

ಪುತ್ತೂರಿನಲ್ಲಿ ಕೃಷಿಯಂತ್ರ ಮೇಳಕ್ಕೆ ಭರದ ಸಿದ್ಧತೆ | 310 ಕ್ಕೂ ಅಧಿಕ ಮಳಿಗೆಗಳು | ವರ್ಚುವಲ್‌ ಟೂರಿಂಗ್‌ ಮೂಲಕ ಮಾಹಿತಿಗೆ ವ್ಯವಸ್ಥೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪುತ್ತೂರಿನಲ್ಲಿ ಫೆ.10 ರಿಂದ ಫೆ.12 ರ ವರೆಗೆ ಕೃಷಿಯಂತ್ರ ಮೇಳೆ ನಡೆಯಲಿದೆ. ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಸುಮಾರು 310 ಮಳಿಗೆಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಕೃಷಿ, ವ್ಯಾಪಾರ, ವಾಣಿಜ್ಯ, ಗಿಡ ಹೀಗೇ ವಿವಿಧ ವಿಭಾಗಗಳಲ್ಲಿ ಮಳಿಗೆಗಳ ಸಿದ್ಧತೆಯಾಗಿದೆ. ವಿಶೇಷವಾಗಿ ಈ ಬಾರಿ ವರ್ಚುವಲ್‌ ಟೂರಿಂಗ್‌ ವ್ಯವಸ್ಥೆಯನ್ನು ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ತಯಾರು ಮಾಡಿದ್ದಾರೆ. ಈ ಮೂಲಕ ಯಂತ್ರ ಮೇಳದ ಸಮಗ್ರ ಮಾಹಿತಿಯನ್ನು ಕೃಷಿಕರು ಪಡೆಯಬಹುದಾಗಿದೆ. ಯಂತ್ರ ಮೇಳದ ಬಳಿಕವೂ ಯಂತ್ರಗಳ ತಯಾರಕರ, ಮಾರಾಟಗಾರರ ಸಂಪರ್ಕ ಸಂಖ್ಯೆ ಲಭ್ಯವಾಗುವಂತಹ ವ್ಯವಸ್ಥೆ ಮಾಡಲಾಗುತ್ತಿದೆ.

Advertisement

ಪುತ್ತೂರಿನ ನೆಹರುನಗರದ ವಿವೇಕಾನಂದ ಕಾಲೇಜು ಆವರಣದಲ್ಲಿ ಕ್ಯಾಂಪ್ಕೋ, ಎಆರ್‌ಡಿಎಫ್‌ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಗ , ವಿವೇಕಾನಂದ  ಇಂಜಿನಿಯರಿಂಗ್‌ ಕಾಲೇಜು ಸಹಯೋಗದೊಂದಿಗೆ ನಡೆಯುವ 5 ನೇ ಕೃಷಿಯಂತ್ರ ಮೇಳಕ್ಕೆ ಸಿದ್ಧತೆ ನಡೆಯುತ್ತಿದೆ. ಫೆ.10 ರಿಂದ 12 ವರೆಗೆ ಮೇಳ ನಡೆಯುತ್ತದೆ. ಯಂತ್ರ ಮೇಳದಲ್ಲಿ ಸುಮಾರು 140 ಮಳಿಗೆಗಳು ಕೃಷಿ ಯಂತ್ರಗಳು, ಸುಮಾರು 75 ಕನಸಿನ ಮನೆಗೆ ಸಂಬಂಧಿಸಿದ್ದು, 5 ನರ್ಸರಿ, 45 ವಾಣಿಜ್ಯ, 11 ಅಟೋ ಮೊಬೈಲ್‌, 20 ಸಾವಯವ, 15 ಕ್ಯಾಂಪ್ಕೋ ಮಳಿಗೆಗಳು , ಕೆಎಂಎಫ್‌ ಸೇರಿದಂತೆ ವಿವಿಧ ಮಳಿಗೆಗಳು ಇರಲಿದೆ.

ಈ ಬಾರಿ ವಿಶೇಷವಾಗಿ ಕೃಷಿ ಯಂತ್ರ ಅನ್ವೇಷಕರಿಗೆ ಅವಕಾಶ ನೀಡಲಾಗಿದ್ದು,  ವಿಶೇಷ ಮಾದರಿಯ ಡ್ರೈಯರ್‌ ತಯಾರು ಮಾಡಿದ ಶಿರಸಿಯ ಕೃಷಿಕರೊಬ್ಬರು ಆಗಮಿಸುವರು. ಡ್ರೋನ್‌ ,ಟ್ರೀ ಬೈಕ್‌, ಲೋಡರ್‌ ಸೇರಿದಂತೆ ವಿಶೇಷ ಯಂತ್ರಗಳ ಗಮನ ಸೆಳೆಯಲಿದೆ.  ಸಣ್ಣ ಸಣ್ಣ ಯಂತ್ರಗಳ ಕಡೆಗೇ ಈ ಬಾರಿ ಹೆಚ್ಚು ಗಮನಹರಿಸಲಾಗಿದ್ದು, ಕೃಷಿಕರಿಗೆ ದಿನ ಬಳಕೆಗೆ ಅಗತ್ಯ ಇರುವ ಯಂತ್ರಗಳೇ ಹೆಚ್ಚಾಗಿ ಆಗಮಿಸಲಿದೆ. ಕನಸಿನ ಮನೆಯಲ್ಲೂ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣ, ಪೈಂಟ್‌ ಸೇರಿದಂತೆ ಇತರ ಆಕರ್ಷಣೆಗಳೂ ಇಲ್ಲಿದೆ.  ಇಲೆಕ್ಟ್ರಿಕ್‌ ವಾಹನಗಳಿಗಾಗಿ ವಿಶೇಷ ಅವಕಾಶ ಇದೆ.

ವರ್ಚುವಲ್‌ ಟೂರಿಂಗ್‌ ವ್ಯವಸ್ಥೆ...!
ಈ ಯಂತ್ರಮೇಳದಲ್ಲಿ ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ವಿಶೇಷವಾಗಿ ಈ ಮೇಳಕ್ಕಾಗಿಯೇ ವೆಬ್‌ ಸೈಟ್‌ ಮೂಲಕ ಮೇಳದ ಎಲ್ಲಾ ಮಾಹಿತಿಯನ್ನು ನೀಡಲು ವ್ಯವಸ್ಥೆ ಮಾಡಿದ್ದಾರೆ. ಫೆ.9 ರಂದು ಈ ವೆಬ್‌ ಸೈಟ್‌ ಸಮಗ್ರ ಮಾಹಿತಿಯೊಂದಿಗೆ ಜನರಿಗೆ ತೆರೆದುಕೊಳ್ಳಲಿದೆ. ವರ್ಚುವಲ್‌ ರಿಯಾಲಿಟಿ ಟೂರಿಂಗ್‌ ವ್ಯವಸ್ಥೆಯ ಮೂಲಕ ಮೇಳದ ಆವರಣಕ್ಕೆ ಆಗಮಿಸುವ ದಾರಿಯಿಂದ ತೊಡಗಿ ಮೇಳದಲ್ಲಿರುವ ಸ್ಟಾಲ್‌ ವಿಭಾಗಗಳು, ಶೌಚಾಲಯ, ಪಾರ್ಕಿಂಗ್‌ ವ್ಯವಸ್ಥೆ ಹೀಗೆ ಎಲ್ಲಾ ವಿವರಗಳನ್ನು ಈ ವ್ಯವಸ್ಥೆಯ ಮೂಲಕ ನೀಡಲಾಗುತ್ತಿದೆ.  ಮೇಳದ ಬಳಿಕ ಇದೇ ವೆಬ್‌ ಸೈಟ್‌ ಮೂಲಕ ಯಂತ್ರ ಮೇಳದ ಪ್ರತೀ ಸ್ಟಾಲ್‌ ವಿವರ ದಾಖಲಿಸಿ, ಅವರ ಸಂಪರ್ಕ ಸಂಖ್ಯೆಯ ಸಹಿತ ಎಲ್ಲಾ ವಿವರವನ್ನು ದಾಖಲಿಸಲಾಗುತ್ತದೆ. ಈ ಮೂಲಕ ಮುಂದೆಯೂ ಕೃಷಿಕರಿಗೆ ಅನುಕೂಲವಾಗುವ ವ್ಯವಸ್ಥೆಯನ್ನು ಕಾಲೇಜು ವಿದ್ಯಾರ್ಥಿಗಳು ಪ್ರಾಜೆಕ್ಟ್‌ ರೂಪದಲ್ಲಿ ಮಾಡುತ್ತಿದ್ದಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭಕ್ತರಿಗಾಗಿ ತೆರೆದ ಕೇದಾರನಾಥ ದ್ವಾರ | ಮೊದಲ ದಿನ ಸುಮಾರು 10 ಸಾವಿರ ಜನರಿಂದ ದೇವರ ದರ್ಶನ

ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ವೇದ ಮಂತ್ರಗಳ ಪಠಣ…

3 hours ago

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ | ಆರೋಪಿಗಳ ಪತ್ತೆಗೆ 4  ಪ್ರತ್ಯೇಕ ತಂಡ ರಚನೆ | ದಕ್ಷಿಣ ಕನ್ನಡದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಬದ್ಧ

ಮಂಗಳೂರಿನಲ್ಲಿ ಹತ್ಯೆಗೀಡಾದ  ಸುಹಾಸ್ ಶೆಟ್ಟಿ ಪ್ರಕರಣದ ಸಂಬಂಧ ಆರೋಪಿಗಳ ಪತ್ತೆಗೆ ನಾಲ್ಕು ಪ್ರತ್ಯೇಕ…

3 hours ago

ಆನೆ-ಮಾನವ ಸಂಘರ್ಷ ನಿಯಂತ್ರಣಕ್ಕೆ ಕ್ರಮ | ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ

ಹಾಸನ ಜಿಲ್ಲೆ ಸಕಲೇಶಪುರ ಬಳಿಯ ಬೈಕೆರೆ ಗ್ರಾಮದಲ್ಲಿ ಇತ್ತೀಚಿಗೆ ಆನೆ ದಾಳಿಯಿಂದ ಮೃತಪಟ್ಟ…

3 hours ago

ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಅವಧಿ ವಿಸ್ತರಣೆ

ಬೆಂಬಲ ಬೆಲೆ ತೊಗರಿ ಖರೀದಿ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು, ಮೇ ತಿಂಗಳ ಅಂತ್ಯದವರೆಗೆ…

4 hours ago

ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ | ಮೃತಪಟ್ಟ ಕುಟುಂಬಗಳಿಗೆ  ಶೃಂಗೇರಿ ಮಠದಿಂದ 2 ಲಕ್ಷ ಪರಿಹಾರ

ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ಚಿಕ್ಕಮಗಳೂರು ಜಿಲ್ಲೆಯ  ಶೃಂಗೇರಿ ಶಾರದಾ ಮಠವು…

17 hours ago