Advertisement
MIRROR FOCUS

ಚಿಕಿತ್ಸೆ ಮುಗಿದರೂ ಕ್ಯಾನ್ಸರ್ ಅಪಾಯ ಏಕೆ ಮುಗಿಯುವುದಿಲ್ಲ?

Share

 ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡ ನಂತರವೂ ವರ್ಷಗಳ ಬಳಿಕ ಮತ್ತೆ ರೋಗ ಕಾಣಿಸಿಕೊಳ್ಳುವುದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ವಿಜ್ಞಾನಿಗಳು ಮಹತ್ವದ ಉತ್ತರವನ್ನು ಕಂಡುಕೊಂಡಿದ್ದಾರೆ. ದೇಹದೊಳಗೆ ಮರೆಮಾಡಿಕೊಂಡಿರುವ ನಿದ್ರಿತ ಕ್ಯಾನ್ಸರ್ ಕೋಶಗಳು’ (Dormant Tumour Cells) ಮತ್ತೆ ಸಕ್ರಿಯವಾಗುವುದೇ ಕ್ಯಾನ್ಸರ್ ಮರುಕಳಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಅಮೆರಿಕ ಹಾಗೂ ಯೂರೋಪಿನ ಪ್ರಮುಖ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ನಡೆಸಿರುವ ಅಧ್ಯಯನಗಳ ಪ್ರಕಾರ, ಕ್ಯಾನ್ಸರ್‌ ಚಿಕಿತ್ಸೆ ಬಳಿಕವೂ ಕೆಲ ಕ್ಯಾನ್ಸರ್ ಕೋಶಗಳು ಸಂಪೂರ್ಣವಾಗಿ ನಾಶವಾಗದೆ ದೇಹದ ವಿವಿಧ ಭಾಗಗಳಲ್ಲಿ ನಿದ್ರಾವಸ್ಥೆಯಲ್ಲಿ ಉಳಿದುಕೊಳ್ಳುತ್ತವೆ. ಇವು ಹಲವು ವರ್ಷಗಳ ಕಾಲ ಯಾವುದೇ ಲಕ್ಷಣವಿಲ್ಲದೆ ಮರೆಮಾಚಿಕೊಂಡಿರುತ್ತವೆ. ಆದರೆ ಸೂಕ್ತ ಪರಿಸ್ಥಿತಿ ಬಂದಾಗ ಮತ್ತೆ ಬೆಳೆಯಲು ಪ್ರಾರಂಭಿಸಿ ಕ್ಯಾನ್ಸರ್‌ ಮರುಕಳಿಕೆಗೆ ಕಾರಣವಾಗುತ್ತವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಮರುಕಳಿಕೆ ಸಾಧ್ಯತೆ :  ವೈಜ್ಞಾನಿಕ ಅಂದಾಜಿನ ಪ್ರಕಾರ, ಸ್ತನ ಕ್ಯಾನ್ಸರ್ ಸೇರಿದಂತೆ ಹಲವಾರು ಕ್ಯಾನ್ಸರ್‌ಗಳಿಂದ ಗುಣಮುಖರಾದ ಸುಮಾರು 30% ರೋಗಿಗಳಲ್ಲಿ ಇಂತಹ ನಿದ್ರಿತ ಕೋಶಗಳು ಇರಬಹುದೆಂದು ತಿಳಿದುಬಂದಿದೆ. ಕೆಲ ಸಂದರ್ಭಗಳಲ್ಲಿ ಈ ಕೋಶಗಳು ದಶಕಗಳ ನಂತರವೂ ಸಕ್ರಿಯಗೊಳ್ಳುವ ಸಾಧ್ಯತೆ ಇದೆ. ಫಿಲಡಲ್ಪಿಯಾದ ಲಿಸಾ ಡಟ್ಟನ್ ಎಂಬ ಮಹಿಳೆ 2017ರಲ್ಲಿ ಸ್ತನ ಕ್ಯಾನ್ಸರ್‌ನಿಂದ ಗುಣಮುಖಳಾದರು. ಆದರೆ 2020ರಲ್ಲಿ ನಡೆಸಿದ ಪರೀಕ್ಷೆಯಲ್ಲಿ, ಅವರ ಎಲುಬು ಮಜ್ಜೆಯಲ್ಲಿ ನಿದ್ರಿತ ಕ್ಯಾನ್ಸರ್ ಕೋಶಗಳು ಇರುವುದನ್ನು ವೈದ್ಯರು ಪತ್ತೆಹಚ್ಚಿದರು. “ರೋಗ ಮುಕ್ತಳಾಗಿದ್ದೇನೆ ಎಂದು ಭಾವಿಸಿದ್ದಾಗ ಈ ಸುದ್ದಿ ಆಘಾತ ತಂದಿತು” ಎಂದು ಅವರು ಹೇಳಿದ್ದಾರೆ.

ನಿದ್ರಿತ ಕೋಶಗಳು ಹೇಗೆ ಉಳಿದುಕೊಳ್ಳುತ್ತವೆ? :  ಸಂಶೋಧಕರ ಪ್ರಕಾರ ಈ ಕೋಶಗಳು ಮುಖ್ಯ ಟ್ಯೂಮರ್‌ನಿಂದ ಆರಂಭಿಕ ಹಂತದಲ್ಲೇ ಬೇರ್ಪಟ್ಟು ದೇಹದ ಇತರೆ ಭಾಗಗಳಿಗೆ ತೆರಳುತ್ತವೆ, ಸಾಮಾನ್ಯವಾಗಿ ಎಲುಬು ಮಜ್ಜೆ, ಲಿಂಫ್ ನೋಡ್‌, ಶ್ವಾಸಕೋಶಗಳಲ್ಲಿ ನೆಲೆಸುತ್ತವೆ, ವೇಗವಾಗಿ ಬೆಳೆಯದ ಕಾರಣ, ಕಿಮೋಥೆರಪಿ ಮತ್ತು ರೇಡಿಯೇಷನ್ ಚಿಕಿತ್ಸೆಗಳಿಂದ ತಪ್ಪಿಸಿಕೊಳ್ಳುತ್ತವೆ, ರೋಗನಿರೋಧಕ ವ್ಯವಸ್ಥೆಯಿಂದಲೂ ಇವು ಮರೆಮಾಚಿಕೊಳ್ಳುತ್ತವೆ.

ಯಾವಾಗ ಮತ್ತೆ ಎಚ್ಚರಗೊಳ್ಳುತ್ತವೆ? :  ವೈಜ್ಞಾನಿಕ ಅಧ್ಯಯನಗಳು ತಿಳಿಸುವಂತೆ, ಕೆಳಗಿನ ಸಂದರ್ಭಗಳಲ್ಲಿ ಈ ನಿದ್ರಿತ ಕೋಶಗಳು ಮತ್ತೆ ಸಕ್ರಿಯಗೊಳ್ಳಬಹುದು:

Advertisement
  • ಫ್ಲು, COVID-19 ಮುಂತಾದ ವೈರಲ್ ಸೋಂಕುಗಳು
  • ಗಾಯ, ಶಸ್ತ್ರಚಿಕಿತ್ಸೆ ಅಥವಾ ಉರಿಯೂತ
  • ವಯಸ್ಸಾಗುವುದು ಮತ್ತು ದೇಹದ ಬದಲಾವಣೆಗಳು
  • ನಿರಂತರ ಮಾನಸಿಕ ಒತ್ತಡ ಮತ್ತು ಜೀವನಶೈಲಿ ಬದಲಾವಣೆ
  • ರೋಗನಿರೋಧಕ ಶಕ್ತಿ ಕುಂದುವುದು

ಇಂತಹ ಸಂದರ್ಭಗಳಲ್ಲಿ ದೇಹದ ಸಮತೋಲನ ಕದಡಿದಾಗ, ಈ ಕೋಶಗಳು ಮತ್ತೆ ಬೆಳೆಯಲು ಅವಕಾಶ ಪಡೆಯುತ್ತವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಹೊಸ ಚಿಕಿತ್ಸೆಗಳತ್ತ ಹೆಜ್ಜೆ :  ಈ ಸಮಸ್ಯೆಯನ್ನು ನಿವಾರಿಸಲು ವಿಜ್ಞಾನಿಗಳು ಈಗ ನಿದ್ರಿತ ಕ್ಯಾನ್ಸರ್ ಕೋಶಗಳನ್ನು  ಮೊದಲೇ ಪತ್ತೆಹಚ್ಚುವ ಪರೀಕ್ಷೆಗಳು, ನಿದ್ರಾವಸ್ಥೆಯಲ್ಲೇ ನಾಶ ಮಾಡುವ ಔಷಧೋಪಚಾರ, ರೋಗ ಮತ್ತೆ ಕಾಣಿಸಿಕೊಳ್ಳುವುದನ್ನು ತಡೆಯುವ ಚಿಕಿತ್ಸೆಗಳ ಮೇಲೆ ಕೆಲಸ ಮಾಡುತ್ತಿದ್ದಾರೆ.  ಅಮೆರಿಕದಲ್ಲಿ ನಡೆಯುತ್ತಿರುವ SURMOUNT ಮತ್ತು CLEVER ಎಂಬ ಕ್ಲಿನಿಕಲ್ ಟ್ರಯಲ್‌ಗಳು ಈ ನಿದ್ರಿತ ಕೋಶಗಳನ್ನು ಗುರುತಿಸಿ ಸಂಪೂರ್ಣವಾಗಿ ನಾಶ ಮಾಡುವ ಉದ್ದೇಶ ಹೊಂದಿವೆ. ಈ ಪ್ರಯೋಗಗಳು ಯಶಸ್ವಿಯಾದರೆ, ಭವಿಷ್ಯದಲ್ಲಿ ಕ್ಯಾನ್ಸರ್ ಮರುಕಳಿಕೆ ತಡೆಯುವಲ್ಲಿ ದೊಡ್ಡ ಕ್ರಾಂತಿ ತರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕ್ಯಾನ್ಸರ್ ವಿಜ್ಞಾನಿ ಸೈರಸ್ ಘಾಜರ್ ಅವರ ಪ್ರಕಾರ, “ಈಗ ಅನೇಕ ಸಂಶೋಧನಾ ತಂಡಗಳು ಒಂದೇ ದಿಕ್ಕಿನಲ್ಲಿ ಕೆಲಸ ಮಾಡುತ್ತಿವೆ. ನಿದ್ರಿತ ಕ್ಯಾನ್ಸರ್ ಕೋಶಗಳ ಕುರಿತು ನಮಗೆ ಈಗ ಸ್ಪಷ್ಟ ಚಿತ್ರ ಸಿಗುತ್ತಿದೆ. ಮುಂದಿನ ವರ್ಷಗಳಲ್ಲಿ ಇದಕ್ಕೆ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಾಗಲಿದೆ, ಎನ್ನುತ್ತಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

(ಮೂಲ : ಅಧ್ಯಯನ )

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕಿಸಾನ್ ಪಾಠಶಾಲೆ ಮೂಲಕ 20 ಲಕ್ಷ ರೈತರಿಗೆ ಆಧುನಿಕ ಕೃಷಿ ತರಬೇತಿ

ಉತ್ತರ ಪ್ರದೇಶ ಸರ್ಕಾರವು ಕಿಸಾನ್ ಪಾಠಶಾಲೆ ಕಾರ್ಯಕ್ರಮದ ಮೂಲಕ 2025–26 ಹಂಗಾಮಿನಲ್ಲಿ 20.15…

6 hours ago

ಕೀಟನಾಶಕ ಕಾಯ್ದೆಯಲ್ಲಿ ಮಹತ್ವದ ಬದಲಾವಣೆ | ಕೇಂದ್ರ ಸರ್ಕಾರದಿಂದ ಹೊಸ ಕರಡು ಮಸೂದೆ

ಕರಡು ಪೆಸ್ಟಿಸೈಡ್ಸ್ ಮ್ಯಾನೇಜ್ಮೆಂಟ್ ಬಿಲ್–2025 ಕುರಿತು ಸಾರ್ವಜನಿಕ ಅಭಿಪ್ರಾಯಕ್ಕೆ ಕೇಂದ್ರ ಆಹ್ವಾನ ಮಾಡಿದೆ.…

7 hours ago

ಕುರಿ ಸಾಕಾಣಿಕ ಘಟಕ ಸ್ಥಾಪನೆಗೆ ಸಹಾಯಧನ

ಕುರಿಸಾಕಾಣಿಕೆ ಅದೇಷ್ಟೋ ಯುವಕರು ತಮ್ಮ ಸ್ವಂತ ಉದ್ಯಮವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಹೆಚ್ಚು…

8 hours ago

ವೃತ್ತಿಯಲ್ಲಿ ಇಂಗ್ಲಿಷ್ ಪ್ರೊಫೆಸರ್- ಕೃಷಿಕನಾಗಿಯೂ ಯಶಸ್ಸು…!

ಯಾವುದೇ ವೃತ್ತಿಯಲ್ಲಿದ್ದರೂ ಕೃಷಿಯನ್ನು ಬಿಡಬಾರದು ಎಂಬ ಹಠದಿಂದ ಜೀವನದಲ್ಲಿ ಯಶಸ್ಸು ಕಂಡವರಲ್ಲಿ ಅಮರಾವತಿ…

8 hours ago

ಯಶಸ್ವಿನಿ ಕಾರ್ಡ್ ಅರ್ಜಿ ಪ್ರಾರಂಭ

ಆರ್ಥಿಕವಾಗಿ ದುರ್ಬಲ ಹೊಂದಿರುವ ಕುಟುಂಬದ ಸದಸ್ಯರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾದದ ದೊಡ್ಡ ಮಟ್ಟದ…

8 hours ago

ಹೊಟ್ಟೆಯ ಕೊಬ್ಬು ಕರಗಿಸಲು ಸೋರೆಕಾಯಿ ಜ್ಯೂಸ್

ಅಧಿಕ ಎಣ್ಣೆ ಅಂಶವುಳ್ಳ ತಿಂಡಿಗಳು, ಶೇಖರಿಸಿಕೊಂಡಿರುವ ಆಹಾರಗಳ ಸೇವನೆಯು ಹೊಟ್ಟೆಯ ಬೊಜ್ಜಿಗೆ ಕಾರಣವಾಗುತ್ತದೆ.…

8 hours ago