ದೇಶವು ಡಿಜಿಟಲ್ ವ್ಯವಹಾರ ಆರಂಭವಾಗಿ ವರ್ಷಗಳು ಉರುಳಿದವು. ನೋಟ್ ಬ್ಯಾನ್ ಬಳಿಕ ಕ್ಯಾಶ್ ಲೆಸ್ ವ್ಯವಹಾರಕ್ಕೆ ಸರ್ಕಾರವು ಆದ್ಯತೆ ನೀಡಿತ್ತು. ಇದೀಗ ಜಾತ್ರೆಯಲ್ಲೂ ಡಿಜಿಟಲ್ ವ್ಯವಹಾರ ಆರಂಭಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯದ ಜಾತ್ರಾ ಉತ್ಸವದ ವೇಳೆ ಡಿಜಿಟಲ್ ವ್ಯವಹಾರ ಗಮನ ಸೆಳೆಯಿತು.
ಡಿಜಿಟಲ್ ವ್ಯವಹಾರ ಆರಂಭಗೊಂಡಾಗ ಅನೇಕರು ಗಾಬರಿಗೊಂಡರು. ಬೀದಿ ಬದಿಯ ವ್ಯಾಪಾರಿಗಳು ಡಿಜಿಟಲ್ ವ್ಯವಸ್ಥೆಗೆ ಬರುವುದು ಕಷ್ಟ ಎಂದು ಹೇಳಿಕೊಂಡಿದ್ದರು. ಆದರೆ ನಿರೀಕ್ಷೆಗೂ ಮೀರಿ ಇದೀಗ ಡಿಜಿಟಲ್ ವ್ಯವಹಾರದಲ್ಲಿ ಬೀದಿ ಬದಿಯ ವ್ಯಾಪಾರಿಗಳು, ಸಂತೆ, ಜಾತ್ರೆಯ ವ್ಯವಹಾರದಲ್ಲೂ ಈಗ ಡಿಜಿಟಲ್ ವ್ಯವಹಾರ ಆರಂಭಗೊಂಡಿದೆ. ಜನರೂ ಪಾವತಿಗೆ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಜಾತ್ರೆ ವೇಳೆ ರಸ್ತೆ ಬದಿ ಮಾಲೆ ಇತ್ಯಾದಿ ಮಾರಾಟ ಮಾಡುವ ವ್ಯಾಪರಸ್ಥರಲ್ಲೂ ಪೋನ್‍ಪೇ, ಗೂಗಲ್‍ಪೇ ಮುಂತಾದ ಕ್ಯಾಶ್ ಲೆಸ್ ವ್ಯವಸ್ಥೆ ಜಾರಿಗೆ ಬಂದಿತ್ತು.
ಜಾತ್ರೆ, ಸಂತೆ ಇತ್ಯಾದಿಗಳಲ್ಲಿ ಈಗ ಡಿಜಿಟಲ್ ವ್ಯವಹಾರ, ಕ್ಯೂಆರ್ ಕೋಡ್ ಬಳಕೆ ಮಾಡದೇ ಇದ್ದರೆ ವ್ಯವಹಾರವೂ ಕಡಿಮೆ ಎನ್ನುವ ಸ್ಥಿತಿ ಬಂದಿದೆ ಎನ್ನುತ್ತಾರೆ ವ್ಯಾಪಾರಿ ಸೀತಮ್ಮ. ಹಿಂದೆಲ್ಲಾ ಜನರು ಸಂತೆಗೆ ಬರುವಾಗ ಹಣ ತರುತ್ತಿದ್ದರು. ಈಗ ಮೊಬೈಲ್ ತರುತ್ತಾರೆ, ಅದರಲ್ಲೇ ಹಣ ಪಾವತಿ ಮಾಡುತ್ತಾರೆ. ಕ್ಯೂ ಆರ್ ಕೋಡ್, ಡಿಜಿಟಲ್ ವ್ಯವಸ್ಥೆ ನಮ್ಮಲ್ಲಿ ಇಲ್ಲದೇ ಇದ್ದರೆ ವ್ಯವಹಾರ ಇಲ್ಲ ಎನ್ನುವ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ವ್ಯಾಪಾರಿ ಬಸಪ್ಪ.
ಹಣ ಕಳೆದು ಹೋಗುವ ಭಯ, ಕಳ್ಳರ ಭಯ, ಪಿಕ್ ಪಾಕೆಟ್ ಇತ್ಯಾದಿಗಳಿಂದ ತಪ್ಪಿಸಿಕೊಳ್ಳಲೂ ಡಿಜಿಟಲ್ ವ್ಯವಹಾರ ಅನುಕೂಲವಾಗಿದೆ. ತುಂಬಾ ಜನರು ಸೇರಿದಾಗ ನೆಟ್ವರ್ಕ್ ಸಮಸ್ಯೆ ಕಂಡುಬರುತ್ತದೆ. ಆಗ ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಾಗಿ ಇಂತಹ ಜಾತ್ರೆಗಳಲ್ಲಿ ಈಗ ನೆಟ್ವರ್ಕ್ ಕಡೆಗೂ ಗಮನ ಹರಿಸಬೇಕಾಗಿದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…