ಕರ್ನಾಟಕದ ಪರವಾಗಿ ಭಾಗಿಯಾದ ಎಸಿಎಸ್ ರಾಕೇಶ್ ಸಿಂಗ್, ಮಳೆಯ ಕೊರತೆಯಿಂದಾಗಿ ಜಲಾಶಯಗಳಿಂದ ನೀರು ಹರಿಸಲು ಸಾಧ್ಯವಿಲ್ಲ. ಅನಿಯಂತ್ರಿತವಾಗಿ ಜಲಾನಯನದಿಂದ ಬರುವ ನೀರು ಮಾತ್ರ ಹರಿಸುತ್ತೇವೆ ಎಂದು ಹೇಳಿದರು. ಎರಡು ರಾಜ್ಯಗಳ ಮನವಿ ಆಲಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕ ಜಲಮಾಪನ ಕೇಂದ್ರ ಬಿಳಿಗುಂಡ್ಲು ಬಳಿ 2,600 ಕ್ಯೂಸೆಕ್ ನೀರು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿತು. ನವೆಂಬರ್ 1 ರಿಂದ 15 ರವರೆಗೂ ನೀರು ಹರಿಸಲು ಶಿಫಾರಸ್ಸು ಮಾಡಿತು.
Advertisement
ಈ ಬಗ್ಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಮತ್ತು ಡಿಸಿಎಂ ಡಿಕೆ ಶಿವಕುಮಾರ್, ಕಾವೇರಿ ವಿಚಾರದಲ್ಲಿ ನಾವು ನೀರು ಬಿಡಲು ಸಾಧ್ಯವಿಲ್ಲ. ಕಾವೇರಿ ಒಳಹರಿವು ಸೊನ್ನೆ ಇದೆ. ಸದ್ಯಕ್ಕೆ ಕುಡಿಯೋ ನೀರಿನ ರಕ್ಷಣೆ ಮಾಡಬೇಕಿದೆ. 817 ಕ್ಯೂಸೆಕ್ ಕಬಿನಿಯಿಂದ ಕೆಆರ್ಎಸ್ಗೆ ನೈಸರ್ಗಿಕವಾಗಿ ಹೊರ ಬರುತ್ತಿದೆ. ಒಳಹರಿವು ಹೆಚ್ಚಲಿ ಎಂದು ದೇವರಿಗೆ ಮೊರೆ ಹೋಗೋಣ ಎಂದರು.
Advertisement