Advertisement
Opinion

ರೈತರು ಕಷ್ಟ ಪಟ್ಟು ಬೆಳೆದ ಕಬ್ಬಿಗೆ “ಕಿಮ್ಮತ್ತು ಕೇಳುವ ಹಿಮ್ಮತ್ತು ಮಾಡಿ” |

Share

ಈ ವರ್ಷ ಕಬ್ಬಿಗೆ ಕಾರ್ಖಾನೆ ಮಾಲೀಕರು ರೈತರಿಗೆ ಹೇಗೆ ದರ ಕೊಡಬಹುದು..? ಪ್ರತಿ ವರ್ಷ ರೈತ ಹಾಗೂ ಸಕ್ಕರೆ ಕಾರ್ಖಾನೆ  ಮಧ್ಯೆ ಬೆಲೆಗಾಗಿ ಕಾದಾಟ ಇದ್ದಿದ್ದೇ. ರೈತರು ಕಷ್ಟ ಪಟ್ಟು ಬೆಳೆದ ಕಬ್ಬಿಗೆ ಸರಿಯಾದ ಬೆಲೆ, ಸೂಕ್ತ ಸಮಯಕ್ಕೆ ಬೆಲೆ ಸಿಗುವ ಹಾಗೆ ಆಗಬೇಕು. ಸಕ್ಕರೆ ಕಾರ್ಖಾನೆಗಳು ಈ ವರ್ಷ 2023-24 ರ ಕಬ್ಬಿಗೆ  ರೂಪಾಯಿ 3500.00 ಪ್ರತೀ ಟನ್ನಿಗೆ ಸಿಗುವ ಹಾಗೆ ಆಗಬೇಕು, ಇದು ನಿರೀಕ್ಷೆ…

ಪ್ರತೀ ಟನ್ ಕಬ್ಬಿಗೆ ಸರಾಸರಿ  115 ಕೆಜಿ ಸಕ್ಕರೆ ಸಿಗುತ್ತದೆ ಅಂದರೆ 3600 ರೂಪಾಯಿ ಪ್ರತೀಕ್ವಿಂಟಾಲ್‌ ಗೆ. ಇನ್ನು ಮಳಿ (molasys) , ಬಗ್ಯಸ್ (bagasse) , ಪ್ರೆಸ್ಸ್ ಮಡ್‌  ಎಲ್ಲಾ ಸೇರಿ ಅಂದಾಜು 5000 ರೂಪಾಯಿ ಲಭ್ಯವಾಗಬೇಕು. ಇನ್ನು ಪ್ರತಿ ಕಾರ್ಖಾನೆಗಳು ಎಥನಾಲ್ ಹಾಗೂ ವಿದ್ಯುತ್ ( ಕೋ.gen) ತಯಾರು ಮಾಡುತ್ತಿದ್ದಾರೆ. ಅದರಲ್ಲೂ ಆದಾಯ ಬರುತ್ತದೆ ಕಾರ್ಖಾನೆಗಳಿಗೆ. ಇನ್ನು ಒಟ್ಟು ಖರ್ಚು ಲೆಕ್ಕ ಹಾಕಿದರೂ  3700 ರೂಪಾಯಿ ಆಗುತ್ತದೆ. ಇದು ಎಥೆನಾಲ್ & co.gen ವಿದ್ಯುತ್ ಉತ್ಪಾದನೆ ಆದಾಯ ಬಿಟ್ಟು.

ಹೀಗೆ ಪ್ರತೀ ಸಕ್ಕರೆ ಕಾರ್ಖಾನೆ ರೈತರ ಪ್ರತೀ ಟನ್ ಕಬ್ಬಿಗೆ 3500 ರೂ ಕೊಟ್ಟ ನಂತರವೂ ಕೂಡ ಸಾಕಷ್ಟು ಲಾಭ ಉಳಿಯುತ್ತದೆ. 
ಆದರೆ ಕಾರ್ಖಾನೆಯವರು ಕೊಡುವುದಿಲ್ಲ. ಕಾರಣ ರೈತ ತಾನು ಕಷ್ಟ ಪಟ್ಟು ಬೆಳೆದ ಕಬ್ಬಿಗೆ ಕಿಮ್ಮತ್ತು ಕೇಳುವ ಹಿಮ್ಮತ್ತು ಮಾಡುವುದಿಲ್ಲ. ಮೇಲಾಗಿ ದರ ಜಾಹೀರು ಮಾಡದೇ ಕಾರ್ಖಾನೆ ಶುರು ಮಾಡಲು ಕಬ್ಬು ಪೂರೈಸುತ್ತಾರೆ. ಹಾಗೆ ಕಬ್ಬು ಕೊಟ್ಟು , ಕಡಿಮೆ ದರ ಅದರೂ ಕೂಡ ಕಾರ್ಖಾನೆ ಶುರು ಮಾಡಿ ತಿಂಗಳ ನಂತರ ಕೊಟ್ಟರೂ ಸರಿ. ಸುಮ್ಮನೆ ಇರುತ್ತಾನೆ.

ಈ ವರ್ಷ ಕೂಡ ಅದೇ ನಾಟಕ ನಡೆದಿದೆ. ರೈತರು ಹೀಗೆ ಕಾರ್ಖಾನೆಗಳಿಗೆ ಈಗಲೇ ಕಬ್ಬು ಕೊಟ್ಟರೆ 2900 ಕ್ಕಿಂತ ಹೆಚ್ಚಿನ ದರ ಕೊಡುವುದಿಲ್ಲ, ಯಾಕೆಂದರೇ ದರ ಕಡಿಮೆ ಇದೆ ಅಂತ ಗೊತ್ತಿದ್ದರೂ ಕೂಡ ಕಾರ್ಖಾನೆಗಳ ಅಡ್ಡೆಗಳು ಜಾಮ್ ಆದರೆ ನಂತರ ಕೊಡಲು ಕಾರ್ಖಾನೆಯ ಮಾಲೀಕರು ಅಷ್ಟೊಂದು ದಯಾಳುಗಳಲ್ಲಾ, ಕೊಟ್ಟರೂ 20..30. ಹೆಚ್ಚು ಕೊಡಬಹುದು, 
ಅಂದ್ರೆ 2900. ರ ಆಸು - ಪಾಸು ಕಥೆ ಮುಗಿಯುತ್ತದೆ.

ಅದಕ್ಕೆ ಮಹಾರಾಷ್ಟ್ರದ ದರ ಘೋಷಣೆ ಆಗುವವರೆಗೆ ಕಾದು ನೋಡಿ. ಇಲ್ಲದಿದ್ದರೆ ಈ ವರ್ಷ ಕಬ್ಬು ಅತೀ ಕಡಿಮೆ ಇದೆ. ಸಕ್ಕರೆಗೆ ಹೆಚ್ಚು ದರ ಇದೆ. ಎಥನಾಲ್ ಮಾಡುತ್ತಿದ್ದಾರೆ. Co Gen (ಕರೆಂಟ್) ತಯಾರು ಮಾಡ್ತಾರೆ. ಇಂತಹ ವರ್ಷ ಕೂಡ ಲಾಭ ಪಡಿಯದೆ ಹೋದರೆ ರೈತ ಯಾವತ್ತೂ ಗೆಲ್ಲಲಾರ..

ಬರಹ :
ಅಂಬು ಮಾರಲಭಾವಿ ಗೋಲಗೇರಿ, ರೈತ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ : ಮಂಗಳೂರು ಮಹಾನಗರಪಾಲಿಕೆ ಸೂಚನೆ

2026ರ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಮಂಗಳೂರು ಮಹಾನಗರಪಾಲಿಕೆ ಸೂಚಿಸಿದ್ದು, POP…

17 minutes ago

ಹವಾಮಾನ ವರದಿ | 09-09-2026 | ಕರ್ನಾಟಕದಲ್ಲಿ ಮಳೆಯ ಚಿತ್ರಣ ಬದಲಾಗುತ್ತಿದೆ – ಸೆ.11ರಿಂದ ಕರಾವಳಿಯಲ್ಲಿ ಬದಲಾವಣೆ

ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಒಟ್ಟಾರೆ ಇಳಿಮುಖವಾಗುತ್ತಿದ್ದು, ಕರಾವಳಿಯಲ್ಲಿ ಸೆ.11ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.…

8 hours ago

ಕ್ಯಾಂಪ್ಕೋ ಅಭಿವೃದ್ಧಿಯ ಹಾದಿಯಲ್ಲಿ: ₹2,900 ಕೋಟಿ ಅಡಿಕೆ ವ್ಯವಹಾರದ ನಡುವೆ ಮುಂದಿರುವ ಸವಾಲುಗಳೇನು?

2025-26ರಲ್ಲಿ ಕ್ಯಾಂಪ್ಕೋದ ಅಡಿಕೆ ಖರೀದಿ ಪ್ರಮಾಣ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದ್ದರೂ, ಬೆಲೆ ಏರಿಕೆಯಿಂದ…

15 hours ago

ಅಡಿಕೆಯಷ್ಟೇ ಅಲ್ಲ ಅದೇ ಮರಕ್ಕೆ ವೆನಿಲ್ಲಾ ಬಳ್ಳಿ | ಅಸ್ಸಾಂನಲ್ಲಿ ಅಡಿಕೆಯ ಜೊತೆಗೆ ಇನ್ನೊಂದು ಬೆಳೆ..

ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…

23 hours ago

ದೇಶಾದ್ಯಂತ ಮುಂಗಾರು ಬಿತ್ತನೆ 1,086 ಲಕ್ಷ ಹೆಕ್ಟೇರ್ ದಾಟಿದೆ – ಕರ್ನಾಟಕದಲ್ಲಿ ಭತ್ತ, ದ್ವಿದಳ ಧಾನ್ಯ ಕೃಷಿ ಕುಸಿತ

ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…

24 hours ago

ಜಾನುವಾರುಗಳ ಮೇವಿನ ಕೊರತೆಗೆ ಅಜೋಲಾ ಪರಿಹಾರ – ರಾಜ್ಯದಲ್ಲಿ 12 ಸಾವಿರ ಘಟಕಗಳ ಸ್ಥಾಪನೆಗೆ ಚಾಲನೆ

ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…

1 day ago