ತನ್ನ ಕೆಲಸ ಮುಗಿಸಿ ಭೂಮಿಗೆ ಹಿಂತಿರುಗಿದ ಚಂದ್ರಯಾನ-3 ರಾಕೆಟ್ ಅವಶೇಷ | ಅಂತಾರಾಷ್ಟ್ರೀಯ ಕಾನೂನಿನಂತೆ ನಡೆದುಕೊಂಡ ಭಾರತ |

November 16, 2023
12:49 PM
ಜುಲೈ 14 ರಂದು ಶ್ರೀಹರಿಕೋಟಾದಿಂದ ಚಂದ್ರಯಾನ ನೌಕೆಯನ್ನು ಹೊತ್ತ ಎಲ್‌ಎಂವಿ ರಾಕೆಟ್ ಯಶಸ್ವಿಯಾಗಿ ನೌಕೆಯನ್ನು ಕಕ್ಷೆಗೆ ಸೇರಿಸಿತ್ತು. ನಂತರ ನೌಕೆಯನ್ನು ಅಂತಿಮ ಹಂತಕ್ಕೆ ಕೊಂಡುಹೋಗಿದ್ದ ರಾಕೆಟ್‌ನ ಮುಂಭಾಗ ಬಾಹ್ಯಾಕಾಶದಲ್ಲೇ ಉಳಿದುಕೊಂಡಿತ್ತು. ಇದೀಗ ಯಾವುದೇ ನಿಯಂತ್ರಣವಿಲ್ಲದೇ ಇದು ಭೂಮಿಗೆ ಬಿದ್ದಿದೆ.

ಅಂದು ಚಂದ್ರಯಾನ-೩(Chandrayaan-3) ನೌಕೆಯನ್ನು ಉಡಾವಣೆಗೊಳಿಸಿದ ಸಂಭ್ರಮ ಇಡೀ ಭಾರತೀಯರ(India) ಮನದಲ್ಲಿ ಇಂದು ಕೂಡ ಅಚ್ಚಳಿಯದೇ ಉಳಿದಿದೆ. ಅದು ಯಶಸ್ವಿಯಾಗಿ ತನ್ನ ಕೆಲಸಗಳನ್ನು ಮುಗಿಸಿ ಇದೀಗ ಅವಶೇಷವಾಗಿ(remnant) ಮತ್ತೆ ಭೂಮಿಗೆ(Earth) ಮರಳಿದೆ. ಜುಲೈ 14 ರಂದು ಚಂದ್ರಯಾನ-3  ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ್ದ ಎಲ್‌ವಿಎಂ3 ಎಂ4 ಉಡಾವಣಾ ವಾಹನದ ಅವಶೇಷ ಬುಧವಾರ ಯಾವುದೇ ನಿಯಂತ್ರಣವಿಲ್ಲದೆ ಭೂಮಿಗೆ ಬಿದ್ದಿದೆ ಎಂದು ಇಸ್ರೋ (ISRO) ತಿಳಿಸಿದೆ.

ಈ ರಾಕೆಟ್ (Rocket) ಜುಲೈ 14 ರಂದು ಚಂದ್ರಯಾನ-3 ನೌಕೆಯನ್ನು ಕಕ್ಷೆಗೆ ಸೇರಿಸಿತ್ತು. ಇದಾಗ 124 ದಿನಗಳ ಬಳಿಕ ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಹಂತವು ಬುಧವಾರ ಭೂಮಿಯನ್ನು ತಲುಪಿದೆ. ಅದು ಭಾರತದ ಭೂಭಾಗದ ಮೇಲೆ ಬೀಳದೆ ಉತ್ತರ ಪೆಸಿಫಿಕ್ ಸಾಗರದಲ್ಲಿ ಬಿದ್ದಿದೆ ಎಂದು ತಿಳಿಸಿದೆ. ಬುಧವಾರ ಮಧ್ಯಾಹ್ನ 2:42ರ ವೇಳೆಗೆ ಅದು ಭೂಮಿಯ ವಾತಾವರಣವನ್ನು ಪುನಃ ಪ್ರವೇಶಿಸಿದೆ. ವಿಶ್ವಸಂಸ್ಥೆ ಮತ್ತು ಐಎಡಿಸಿ ಸೂಚಿಸಿದ ಬಾಹ್ಯಾಕಾಶ ಶಿಲಾಖಂಡಗಳನ್ನು ತಗ್ಗಿಸುವ ಮಾರ್ಗಸೂಚಿಗಳ ಪ್ರಕಾರ ಆಕಸ್ಮಿಕ ಸ್ಫೋಟಗಳ ಅಪಾಯವನ್ನು ಕಡಿಮೆ ಮಾಡಲು ರಾಕೆಟ್‌ನಲ್ಲಿರುವ ಎಲ್ಲಾ ಇಂಧನ ಮತ್ತು ಶಕ್ತಿಯ ಮೂಲಗಳನ್ನು ತೆಗೆದುಹಾಕಲಾಗಿತ್ತು. ಇದು ಬಾಹ್ಯಾಕಾಶದಲ್ಲಿ ಅಂತಾರಾಷ್ಟ್ರೀಯ ಕಾನೂನನ್ನು ಗೌರವಿಸಿ ನಡೆದುಕೊಳ್ಳುವ ಭಾರತದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಇಸ್ರೋ ಹೇಳಿದೆ.

ಜುಲೈ 14 ರಂದು ಶ್ರೀಹರಿಕೋಟಾದಿಂದ ಚಂದ್ರಯಾನ ನೌಕೆಯನ್ನು ಹೊತ್ತ ಎಲ್‌ಎಂವಿ ರಾಕೆಟ್ ಯಶಸ್ವಿಯಾಗಿ ನೌಕೆಯನ್ನು ಕಕ್ಷೆಗೆ ಸೇರಿಸಿತ್ತು. ನಂತರ ನೌಕೆಯನ್ನು ಅಂತಿಮ ಹಂತಕ್ಕೆ ಕೊಂಡುಹೋಗಿದ್ದ ರಾಕೆಟ್‌ನ ಮುಂಭಾಗ ಬಾಹ್ಯಾಕಾಶದಲ್ಲೇ ಉಳಿದುಕೊಂಡಿತ್ತು. ಇದೀಗ ಯಾವುದೇ ನಿಯಂತ್ರಣವಿಲ್ಲದೇ ಇದು ಭೂಮಿಗೆ ಬಿದ್ದಿದೆ.

– ಅಂತರ್ಜಾಲ ಮಾಹಿತಿ

The rocket launched Chandrayaan-3 into orbit on July 14. After 124 days, the launch vehicle’s cryogenic upper stage reached Earth on Wednesday. It said that it did not land on the Indian mainland but fell in the North Pacific Ocean. It re-entered the Earth’s atmosphere at 2:42 pm on Wednesday.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬಿಸಿ ಆಹಾರ ಪಾರ್ಸೆಲ್‌ಗೆ ಪ್ಲಾಸ್ಟಿಕ್‌, ಪತ್ರಿಕೆ ನಿಷೇಧ…! : ಸಾರ್ವಜನಿಕ ಧೂಮಪಾನಕ್ಕೆ ₹1000 ದಂಡ ಎಚ್ಚರಿಕೆ
March 11, 2026
9:28 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಳೆಗಾರರೇ ಗಾಬರಿ ಬೇಡ | ಮಾರುಕಟ್ಟೆಯ ‘ತಾತ್ಕಾಲಿಕ ತಿದ್ದುಪಡಿ’ಯ ಹಿಂದಿದೆ ಆರ್ಥಿಕ ಲೆಕ್ಕಾಚಾರ
March 11, 2026
7:13 PM
by: ಅರುಣ್‌ ಕುಮಾರ್ ಕಾಂಚೋಡು
ಕಾಂಪೌಂಡ್ ರಬ್ಬರ್ ಆಮದು ಹೆಚ್ಚಳ : 10 ವರ್ಷಗಳ ವಿವರ ಲೋಕಸಭೆಯಲ್ಲಿ ಬಹಿರಂಗ
March 11, 2026
7:19 AM
by: ದ ರೂರಲ್ ಮಿರರ್.ಕಾಂ
ದಾಖಲೆಯ ಆಹಾರಧಾನ್ಯ ಉತ್ಪಾದನೆ | 10 ವರ್ಷಗಳಲ್ಲಿ 357 ಮಿಲಿಯನ್ ಟನ್
March 11, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror