ಕಳೆದ ಎರಡು ವಾರಗಳಿಂದ ಕೊಡಗು ಜಿಲ್ಲೆಯ ಚೆಂಬು ಭೂಕಂಪನದ ಮೂಲಕ ಗಮನ ಸೆಳೆಯಿತು. ಚೆಂಬು, ಸಂಪಾಜೆ ಸೇರಿದಂತೆ ಆಸುಪಾಸಿನ ಪ್ರದೇಶಗಳು ರಾಜ್ಯಾದ್ಯಂತ ಸುದ್ದಿಯಾಯಿತು. ಆದರೆ ಇಂದಿಗೂ ಆ ಊರಿನ ಕೆಲವು ಕಡೆ ಮೂಲಭೂತ ಸೌಲಭ್ಯಗಳ ಆವಶ್ಯಕತೆ ಇದೆ. ಚೆಂಬು ಗ್ರಾಮದ ಕಟ್ಟಪಲ್ಲಿ ಎಂಬಲ್ಲಿನ ಹೊಳೆ ದಾಟಲು ಜನರು ಸಂಕಷ್ಟ ಪಡುತ್ತಿದ್ದಾರೆ. ಜೀಪೊಂದು ನೀರು ದಾಟಿ ಹೋಗುವ ಈ ವಿಡಿಯೋ ಈಗ ಗಮನಸೆಳೆದಿದೆ.
Advertisementಚೆಂಬು ಗ್ರಾಮದ ಕಟ್ಟಪಲ್ಲಿ ಪ್ರದೇಶದಲ್ಲಿನ ಜನರು ಅನುಭವಿಸುವ ಸಂಕಷ್ಟ.
– The Rural Mirror (@ruralmirror) 6 July 2022
Advertisement
ಕೊಡಗು ಜಿಲ್ಲೆಯ ಚೆಂಬು ಹಾಗೂ ಸುಳ್ಯ ತಾಲೂಕಿನ ಸಂಪಾಜೆ ಮೊದಲಾದ ಪ್ರದೇಶಗಳೂ ಭೂಕಂಪನದ ಮೂಲಕ ಸುದ್ದಿಯಾಯಿತು. ಭೂಕಂಪನಕ್ಕೆ ವಿವಿಧ ಕಾರಣಗಳನ್ನು ಹೇಳಲಾಯಿತು. ಚೆಂಬು, ಸಂಪಾಜೆ ಪ್ರದೇಶದಲ್ಲಿ ಕೃಷಿಯೇ ಪ್ರಮುಖವಾದ ಆದಾಯದ ಮೂಲ. ಆದರೆ ಅಡಿಕೆ ಹಳದಿ ಎಲೆ ರೋಗದ ನಂತರ ಅಡಿಕೆ ಕೃಷಿ ಕಡಿಮೆಯಾಗಿದೆ. ಅದರ ಬದಲಾಗಿ ರಬ್ಬರ್ ಕೃಷಿ ವಿಸ್ತಾರವಾಗಿದೆ. ಗುಡ್ಡದಿಂದ ಹಿಡಿದು ತೋಟವದರೆಗೂ ರಬ್ಬರ್ ಕೃಷಿ ಇದೆ. ಇಲ್ಲಿನ ಕೃಷಿ ಸಮಸ್ಯೆ , ಕೃಷಿಪಲ್ಲಟದ ಜೊತೆಗೆ ಇಲ್ಲಿ ಮೂಲಭೂತ ಆವಶ್ಯಕತೆಗಳ ಕೊರತೆ ಜನರನ್ನು ಕಾಡುತ್ತಿದೆ. ಚೆಂಬು ಗ್ರಾಮದ ಕಟ್ಟಪಲ್ಲಿ ಎಂಬಲ್ಲಿ ಸುಮಾರು 25 ಮನೆಗಳು ಇವೆ. ಇಲ್ಲಿ ಹರಿಯುವ ಹೊಳೆಯ ಕಾರಣದಿಂದ ಮಳೆಗಾಲ ದಾಟಲು ಸಮಸ್ಯೆಯಾಗುತ್ತದೆ. ಹೊಳೆ ದಾಟಿದ ಮುಂದೆ ಉಂಬಳ್ಳೆ ಎಂಬ ಪ್ರದೇಶ ಇದೆ. ಹಲವಾರು ಸಮಯಗಳಿಂದಲೂ ಇಲ್ಲಿನ ಜನ ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ಇಲ್ಲಿ ಹೆಚ್ಚು ನೀರು ಹರಿದಾಗ ಯಾವುದೇ ವಾಹನ ದಾಟುವುದಿಲ್ಲ, ಈ ಸಂದರ್ಭ ಸುತ್ತು ಬಳಸಿ ಪರ್ಯಾಯ ದಾರಿ ಬಳಸುತ್ತಾರೆ ಕಟ್ಟಪಲ್ಲಿಯ ಜನರು. ಈ ಪ್ರದೇಶದಲ್ಲಿ ಮಲೆಕುಡಿಯ ಸಮುದಾಯದ ಕುಟುಂಬಗಳು ಹೆಚ್ಚಿದೆ.
ಭೂಕಂಪನದ ಸುದ್ದಿಯ ಜೊತೆಗೆ ಮೂಲಭೂತ ಸಮಸ್ಯೆಗಳ ಬಗ್ಗೆಯೂ ಈಗ ಜನರು ಮಾತನಾಡುತ್ತಿದ್ದಾರೆ. ಒಂದು ವೇಳೆ ತುರ್ತಾಗಿ ಇಲ್ಲಿಂದ ಸ್ಥಳಾಂತರವಾಗಬೇಕಾಗಿ ಬಂದರೆ ಸಂಪರ್ಕ ಹೇಗೆ ಎನ್ನುವುದು ಕೂಡಾ ಪ್ರಶ್ನೆಯಾಗಿದೆ ಎಂದು ಕೇಳುತ್ತಾರೆ ಇಲ್ಲಿನ ಜನರು.ಸದ್ದಿಲ್ಲದೆ ಸುದ್ದಿಯಾದ ಭೂಕಂಪನ ಬಳಿಕ ಚೆಂಬು ಗ್ರಾಮ ಸುದ್ದಿಯಾಗಿದೆ. ಇದೀಗ ಗ್ರಾಮೀಣ ಭಾಗದ ಇಂತಹ ಮೂಲಭೂತ ಸಮಸ್ಯೆಗಳ ಕಡೆಗೂ ಆಡಳಿತ ಗಮನಿಸಬೇಕಿದೆ.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…