ಚೆಂಬು-ಸಂಪಾಜೆಯಲ್ಲಿ “ಚಾರ್ಲಿ” ನೆನಪು.. ! | ಮನೆಯವರ ಜೊತೆಗೇ ಓಡುವ ನಾಯಿ…. ! |ಭೂಕಂಪನದ ಭಯದ ನಡುವೆ ಈ ಸಂಬಂಧಗಳಿಗೆ ಏನು ಹೇಳೋಣ…. ? |

July 3, 2022
6:13 PM

ಕಳೆದ ಕೆಲವು ದಿನಗಳಿಂದ ಕೊಡಗಿನ ಚೆಂಬು, ಸುಳ್ಯದ ಸಂಪಾಜೆ ಸೇರಿದಂತೆ ಆಸುಪಾಸಿನ ಪ್ರದೇಶದಲ್ಲಿ  ಭಯದ ವಾತಾವರಣ ಇದೆ. ಹೀಗಾಗಿ ಉದ್ಯೋಗದಲ್ಲಿ ಇರುವ ಕೆಲವರು ತಮ್ಮ ಮನೆಯಲ್ಲಿರುವ ಸಾಮಾಗ್ರಿಗಳ ಸಾಗಾಟ ಮಾಡುತ್ತಿದ್ದಾರೆ. ನಗರ ಪ್ರದೇಶದಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸಾಕು ಪ್ರಾಣಿಗಳ ಒಡನಾಟ ವಿವರಿಸಲು ಸಾಧ್ಯವಿಲ್ಲ. ಈ ವೇಳೆ ಚಾರ್ಲಿ ಸಿನಿಮಾ ನೆನಪಿಗೆ ಬರುತ್ತಿದೆ.

ಎಂ ಚೆಂಬು ಪ್ರದೇಶದಲ್ಲಿ ಕೃಷಿ ಭೂಮಿ ಹೊಂದಿದ್ದ ಕುಟುಂಬವೊಂದು ಕಳೆದ ಕೆಲವು ದಿನಗಳ ಭೂಕಂಪನ ಹಾಗೂ ಭಾರೀ ಮಳೆಯ ಕಾರಣದಿಂದ ಕೃಷಿ ಹಾಗೂ ಮನೆಯನ್ನು ಮಳೆಗಾಲ ಮುಗಿಯುವರೆಗೆ ಬಿಟ್ಟು ನಗರದಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿತು. ಹೀಗಾಗಿ ಮನೆಯಲ್ಲಿರುವ ವಸ್ತುಗಳ ಸಾಗಾಟವನ್ನು ಮಾಡುತ್ತಿದ್ದಾಗ ಸಂಜೆ ವೇಳೆ ಮನೆಯವರು ಅಟೋ ಮೂಲಕ ಸಾಗಿದರು. ಈ ಸಮಯದಲ್ಲಿ  ಮನೆಯ ಸಾಕು ನಾಯಿ ಅಟೋ ಜೊತೆ ಸುಮಾರು ಮೂರು ಕಿಮೀ ದೂರ ಓಡುತ್ತಾ ಸಾಗಿತು.ಬಳಿಕ ಮನೆಯವರು ನಾಯಿಯನ್ನೂ ಜೊತೆಯಲ್ಲಿ ಕರೆದೊಯ್ದರು. ಈ ದೃಶ್ಯ ಶ್ವಾನ ಪ್ರೀತಿಯನ್ನು ಮತ್ತೆ ಸಾಕ್ಷೀಕರಿಸುತ್ತದೆ.

ಚೆಂಬು ಪ್ರದೇಶದಲ್ಲಿ  ಹಲವಾರು ಮಂದಿಯಲ್ಲಿ ಆತಂಕ ಇದ್ದರೂ ಅನಿವಾರ್ಯ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಖಾಸಗಿ ಉದ್ಯೋಗ ಇದ್ದು ನಗರದಲ್ಲಿ ಕೆಲಸ ಮಾಡುವವರು ತಾತ್ಕಾಲಿಕವಾಗಿ ವಾಸ್ತವ್ಯ ಸ್ಥಳಾಂತರಕ್ಕೆ ಚಿಂತನೆ ನಡೆಸಿದ್ದಾರೆ. ಸಾಕು ಪ್ರಾಣಿಗಳು ಇರುವ ಮಂದಿ ಅನಿವಾರ್ಯ ಪರಿಸ್ಥಿತಿಯಲ್ಲಿದ್ದಾರೆ. ಈಗಾಗಲೇ ಈ ಪ್ರದೇಶದಲ್ಲಿ ಅಡಿಕೆ ಹಳದಿ ರೋಗ ಕಂಡುಬಂದು ಕೃಷಿ ನಾಶವಾದ ಕಾರಣ ಹೈನುಗಾರಿಕೆ ಸೇರಿದಂತೆ ವಿವಿಧ ಕೃಷಿಯಲ್ಲಿ  ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಹೈನುಗಾರಿಕೆ ಇರುವವರು ಧೈರ್ಯದಿಂದಲೇ ಬದುಕು ಸಾಗಿಸುತ್ತಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ
October 16, 2026
3:42 PM
by: ದ ರೂರಲ್ ಮಿರರ್.ಕಾಂ
ಗುತ್ತಿಗಾರಿನಲ್ಲಿ ಚಣಿಲ ಹೋಮಿಯೋಪಥಿ ಕ್ಲಿನಿಕ್‌ ಆರಂಭ
October 16, 2026
3:13 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 16-10-2026 | ಕರ್ನಾಟಕದಲ್ಲಿ ಇನ್ನೂ 10 ದಿನ ಮಳೆ? ಅ.19ರ ನಂತರ ಹಿಂಗಾರು ಮಾರುತಗಳ ಆಗಮನದ ನಿರೀಕ್ಷೆ
October 16, 2026
2:48 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror