Advertisement
ಅನುಕ್ರಮ

ಡೇಟಾ ಇರೋ ತನಕ ಮಕ್ಕಳು ಊಟ ಮಾಡೋದು..!

Share

ಊಟ ಮಾಡದೇ ಇದ್ದರೂ ಪರವಾಗಿಲ್ಲ. ಮೊಬೈಲ್ ಮಾತ್ರ ನೀಡಲೇ ಬೇಡಿ. ಆಶ್ಚರ್ಯ ಆಗಬಹುದು ನಿಮಗೆ. ಹೇಗೆ ಇದೆಲ್ಲಾ ಸಾಧ್ಯವಾ ಎಂದು. ಮೂರು ನಾಲ್ಕು ದಿನಗಳ ಕಾಲ ಮೊಬೈಲ್ ಹಾಳಾಗಿದೆ ಎಂಬ ಸುಳ್ಳಿನ ಪ್ರಾಮಾಣಿಕ ಪ್ರಯೋಗ ನಡೆಸಿ. ಏನಾಗುವುದು? ಊಟ ಮಾಡದೆ ಇರುವರೇ! ಮನಸ್ಸಿದ್ದರೆ ಮಾರ್ಗ.ಧೈರ್ಯ ಮಾಡಿರಿ. ನನ್ನ ಮಾರ್ಗದರ್ಶನದಲ್ಲಿ ಈ ಪ್ರಯೋಗವು ಅತ್ಯಂತ ಯಶಸ್ವಿಯಾಗಿದೆ. ಇದರೊಂದಿಗೆ ಇನ್ನಷ್ಟು ಮಾಹಿತಿ ಇದೆ ಕೇಳಿ.ಮೊಬೈಲ್ ಜೊತೆಗೆ ಊಟ ಮಾಡೋಹೊತ್ತಿಗೆ ಒಂದು ಗಂಟೆಯಂತೆ ದಿನಕ್ಕೆ ನಾಲ್ಕು ಬಾರಿ ಆಹಾರ ಸೇವನೆಗೆ ಎಷ್ಟು ಅವಧಿ ಬಳಕೆಯಾಯ್ತು ಒಂದು ಬಾರಿ ಲೆಕ್ಕಾಚಾರ ಮಾಡಿ.

ಹಾಗಿದ್ದಲ್ಲಿ ಮೊಬೈಲ್ ಮತ್ತು ತಂತ್ರಜ್ಞಾನ ಬಳಸಿಕೊಂಡೇ ದುಡಿಯುವ ಜನರಿಗೆ ಏನೆನ್ನುತ್ತೀರಿ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು? ನಾವೀಗ ಹೆಚ್ಚು ಗಮನ ಹರಿಸಬೇಕಿರುವುದು ದುಡಿಯುವ ಮನಸ್ಸುಗಳತ್ತ ಅಲ್ಲ. ಬದಲಾಗಿ ಎಳೆಯ ಕಂದಮ್ಮಗಳ ಹಾಗೂ ಹದಿಹರೆಯದ ವಯಸ್ಸಿನ, ಬೆಳೆಯುವ ಮನಸ್ಸುಗಳ ಕಡೆಗೆ.ಹೈಪರ್ ಆಕ್ಟಿವಿಟಿ, ಅಗ್ರೆಸ್ಸಿವ್ ಬಿಹೇವಿಯರ್, ತಕ್ಷಣದ ಆಕ್ರಮಣಕಾರಿ ವರ್ತನೆ, ಬೇಕೇ ಬೇಕು ಎನ್ನುವ ಛಲ, ಭಾವನಾ ಹೀನ ವ್ಯಕ್ತಿತ್ವ, ಜೀವನ ಮೌಲ್ಯಗಳ ಕೊರತೆ, ಸಂಬಂಧಗಳ ಕಡೆಗಣನೆ, ಜನರ ನಡುವಿನ ಅಂತರ ಹೆಚ್ಚಳ,ವಸ್ತುಗಳನ್ನು ಒಡೆದು ಹಾಳು ಮಾಡುವ, ದೊಡ್ಡ ಧ್ವನಿಯಲ್ಲಿ ಚೀರಾಡುವ ಗುಣ ಹೆಚ್ವಾಗುತ್ತಲೇ ಹೋಗುವುದು.ಕಾರ್ಟೂನ್ ಚಾನಲ್ ಗಳಲ್ಲಿ ಬರುವ  ಕಥೆಗಳು ಮಕ್ಕಳಿಗೆ ಏತಕ್ಕಾಗಿ ಇಷ್ಟವಾಗುವುದು? ಪ್ರತಿ ಸೆಕೆಂಡ್ ಗಳಲ್ಲಿಯೂ ಚಿತ್ರಣ ಬದಲಾಗುತ್ತಿರುತ್ತದೆ. ಇದರಿಂದ ಮಗು ಕಣ್ಣು ಮಿಟುಕಿಸದೆಯೇ ಟಿವಿ ಹಾಗೂ ಮೊಬೈಲ್ ನೋಡುತ್ತಿರುವುದು. ಇದರಿಂದ ಮಗು ಹೊರ ಜಗತ್ತಿನಲ್ಲಿ ಬಹು ಬೇಗನೆ ನಿರಾಶೆಗೊಳ್ಳುವುದು.

ನಮ್ಮೆಲ್ಲರ ಹಣೆಯ ಮೇಲ್ಭಾಗದಲ್ಲಿರುವ ಮಿದುಳಿನ ಭಾಗವು ಅತ್ಯಂತ ಪ್ರಮುಖ ಕಾರ್ಯಗಳನ್ನು ಮಾಡುತ್ತವೆ. ಯೋಚನಾ ತರಂಗಗಳು, ನಿರ್ಧಾರ ತೆಗೆದುಕೊಳ್ಳುವ ಶಕ್ತಿ, ಊಹಿಸಿಕೊಳ್ಳುವ ಶಕ್ತಿ, ನೆನಪಿಟ್ಟುಕೊಳ್ಳುವ ಶಕ್ತಿ, ಹೊಸ ರೀತಿಯಲ್ಲಿ ಆಲೋಚಿಸುವ ಶಕ್ತಿ, ಸಾಮಾಜಿಕವಾಗಿ ಬೆರೆಯುವ ಶಕ್ತಿ ಹೀಗೆ ಅನೇಕ ಕಾರ್ಯಗಳಿಗೆ ಸಹಕರಿಸುತ್ತದೆ. ಬೆಳೆಯುವ ಹಂತದಲ್ಲಿ ಸ್ಕ್ರೀನ್ ಟೈಮ್ ಹೆಚ್ಚಾದಂತೆ ಮೆದುಳಿನ ಈ ಎಲ್ಲಾ ಕಾರ್ಯಗಳಲ್ಲಿ ಕೊರತೆ ಕಾಣಿಸಿಕೊಳ್ಳುವುದು.ಹಾಗಾಗಿ ಇಲ್ಲಿ ಮೊಬೈಲನ್ನು ಕಡೆಗಣಿಸುವುದರಿಂದ ಮಗುವಿನ ಮೆದುಳಿನ ಎಲ್ಲಾ ಸಾಮರ್ಥ್ಯಗಳು ವೃದ್ಧಿಸುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಹಾಗಿದ್ದರೆ ಪಾಲಕರು ಏನು ಮಾಡಬಹುದು?ಇಲ್ಲಿ ಗಮನಾರ್ಹವಾದುದು ಏನೆಂದರೆ ಪ್ರತಿಯೊಬ್ಬ ಪಾಲಕನಿಗೂ ತನ್ನ ಮಗು ಖುಷಿಯಾಗಿರಬೇಕು ಎನ್ನುವುದು.ದೈಹಿಕವಾಗಿ ಮತ್ತು ಭಾವನಾತ್ಮವಾಗಿ ದೃಢವಾಗಿಸೋದೆ ಜಾಣತನ ಅಲ್ಲವೇ? ಮಕ್ಕಳ ಇಂದಿನ ಖುಷಿಗಾಗಿ ಅದರ ನಾಳೆಯ ಜೀವನವನ್ನು ಹಾಳುಮಾಡುವ ದುಸ್ಸಾಹಸವನ್ನು ಮಾಡದಿರಿ.ಮಗು ಏನೇ ಕೇಳಿದರೂ, ಎಲ್ಲಾ ಸಮಯದಲ್ಲೂ ‘ ಸರಿ, ಆಯ್ತು’ ಎನ್ನುವ ಉತ್ತರವನ್ನು ಕೊಡಬೇಡಿ. “ಆಗಲ್ಲ” ಎನ್ನುವ ಧೈರ್ಯವೂ ಬರಲಿ. ಮಗುವಿಗೆ ಹಠ ಮಾಡಿ ಕೇಳಿದಂತೆ ಎಲ್ಲವೂ ಸಿಗಲಾರದು ಎನ್ನುವ ಸ್ಥಿತಿ-ಗತಿಯ ಪರಿಚಯ ಮಾಡಿಕೊಡಿ.ಬದಲಾವಣೆ ಮಕ್ಕಳಿಂದ ಪ್ರಾರಂಭವಾಗುವುದು ಸಾಧ್ಯವೇ ಇಲ್ಲ. ಬದಲಾವಣೆ ಹೆತ್ತವರ ಮನಸ್ಸಿನಲ್ಲಿ ಆರಂಭವಾಗಿ ಕಾರ್ಯಗತವಾಗಬೇಕು. ಆಗ ಮಕ್ಕಳಲ್ಲಿಯೂ ಮಹತ್ತರವಾದ ಬದಲಾವಣೆ ಸಾಧ್ಯ.ಡೊಪೊಮಿನ್ (DOPAMINE ) ಕೆಮಿಕಲ್  ಯಾವುದೇ ವಸ್ತು, ವಿಷಯ, ಮೊಬೈಲ್, ವಾಹನಗಳು, ಮಾದಕ ವಸ್ತು, ಹೆಣ್ಣಿನ ಚಟ, ಅಶ್ಲೀಲ ದೃಶ್ಯಗಳತ್ತ ಮನಸ್ಸನ್ನು ಮತ್ತೆ ಮತ್ತೆ ಚಿಂತಿಸುವಂತೆ ಮಾಡುತ್ತದೆ.

ಮಕ್ಕಳು ಯಾವ ಗುಣವನ್ನು ಹೊಂದಬೇಕೆಂದು ಪಾಲಕರು ಆಸೆ ಪಟ್ಟಿರುತ್ತಾರೋ ಅದನ್ನೇ ಪಾಲಕರು ವ್ಯಕ್ತಪಡಿಸಬೇಕು. ಮತ್ತು ಅದರಂತೆಯೇ ನಡೆದುಕೊಳ್ಳತಕ್ಕದ್ದು.ಮಕ್ಕಳನ್ನು ಸಾಮಾಜಿಕವಾಗಿ ಬೆಳೆಸಬೇಕೆಂದರೆ ಹೆತ್ತವರು ಸಾಮಾಜಿಕವಾಗಿ ಹೆಚ್ಚು ಕಾರ್ಯೋನ್ಮುಖರಾಗಬೇಕು. ಹೀಗೆ ನಾನಾ ಕ್ಷೇತ್ರಗಳತ್ತ ನಾವು ಮುಖ ಮಾಡುತ್ತಲೇ ನಮ್ಮ ಮಕ್ಕಳನ್ನು ತೊಡಗಿಸಿಕೊಳ್ಳಬೇಕು.

ಬರಹ :
ದುರ್ಗಾಪರಮೇಶ್ವರ ಭಟ್
, ಮನಶಾಸ್ತ್ರಜ್ಞ ಹಾಗೂ ಶಿಶು ಶಿಕ್ಷಣ ತಜ್ಞರು.  Mob; 9663826972
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದುರ್ಗಾಪರಮೇಶ್ವರ ಭಟ್

ದುರ್ಗಾಪರಮೇಶ್ವರ ಭಟ್. ಇವರು ಮನಶಾಸ್ತ್ರಜ್ಞ ಹಾಗೂ ಶಿಶು ಶಿಕ್ಷಣ ತಜ್ಞರು. ಪುತ್ತೂರಿನಲ್ಲಿ ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಆರಂಭಿಸಿದ್ದಾರೆ.

Published by
ದುರ್ಗಾಪರಮೇಶ್ವರ ಭಟ್

Recent Posts

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲು ಪೊಲೀಸ್…

4 hours ago

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…

1 day ago

ಕೃಷಿಕರ ಜೀವನಾಡಿ ‘ಕ್ಯಾಂಪ್ಕೊ’ ವಿಟ್ಲ ಶಾಖೆಗೆ ನೂತನ ಕಟ್ಟಡ | ಮಾರ್ಚ್ 27ರಂದು ಶಂಕುಸ್ಥಾಪನೆ

ವಿಟ್ಲದಲ್ಲಿ ₹12 ಕೋಟಿ ವೆಚ್ಚದ ಕ್ಯಾಂಪ್ಕೊ ನೂತನ ಕಟ್ಟಡಕ್ಕೆ ಮಾರ್ಚ್ 27ರಂದು ಶಂಕುಸ್ಥಾಪನೆ…

1 day ago

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

2 days ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

3 days ago