ಚಿಲಿಪಿಲಿ | ಪೇರಳೆ ಗಿಡದಲ್ಲಿ ಕಾಣುವ “ಕೆಮ್ಮಂಡೆ ಗಿಳಿ”…!

November 22, 2021
2:42 PM
ಪೇರಳೆ ಗಿಡದ ತುಂಬಾ ಕಾಯಿ, ಹಣ್ಣುಗಳು. ದಿನವಿಡೀ ಹಕ್ಕಿಗಳದ್ದೇ ಕಾರುಬಾರು.  ಹಲವು ಜಾತಿಯ ಹಕ್ಕಿಗಳು ಒಂದೇ ಮರದಲ್ಲಿ ಕಾಣ ಸಿಕ್ಕರೆ ಎಷ್ಟು ಖುಷಿಯಲ್ಲವೇ? ಹಾಗೆ ಕಂಡು ಬಂದ  ಹಕ್ಕಿಗಳಲ್ಲಿ ತುಂಬಾ ವಿಶೇಷವಾಗಿ ಕಂಡದ್ದು  ಈ  ಗಿಳಿರಾಮ.  ಕೆಮ್ಮಂಡೆ ಗಿಳಿ.
ಉಳಿದ ಗಿಳಿಗಳಿಗೆ  ಹೋಲಿಸಿದರೆ ಇದರ ಗಾತ್ರ ಸ್ವಲ್ಪ ಚಿಕ್ಕದು(36c.m).  ಮೈನಾ ಹಕ್ಕಿಯ ಗಾತ್ರ, ತಲೆ  ಕೆಂಪಾಗಿದ್ದು, ಉದ್ದವಾಗಿ ಚೂಪಾಗಿರುವ ಬಾಲವಿದೆ.  ನೀಲಿ,  ಕೆಂಪು ಬಣ್ಣದ ತಲೆಯಿಂದಾಗಿ ಸುಲಭವಾಗಿ ಗುರುತಿಸ ಬಹುದು. ಭಾರತ, ಬಾಂಗ್ಲಾ, ಪಾಕಿಸ್ತಾನ, ಶ್ರೀಲಂಕಾ ದೇಶಗಳಲ್ಲಿ ಕಂಡು ಬರುತ್ತವೆ.  ಬಯಲುಸೀಮೆ ಹಾಗೂ ಮಲೆನಾಡಿಗೆ ಸ್ಥಳೀಯವಾಗಿ ವಲಸೆ ಹೋಗುವ ಹಕ್ಕಿಗಳಾಗಿವೆ.  ಗುಂಪು ಗುಂಪಾಗಿಯೇ ಕಂಡುಬರುತ್ತವೆ.
 ಹಣ್ಣು ಕಾಯಿಗಳೇ ಇವುಗಳ ಆಹಾರ.  ಮರದ ಪೊಟರೆಗಳಲ್ಲಿ  ಅಥವಾ ಮರದ ಮೇಲೆ ಗೂಡು ಕಟ್ಟಿ ಮೊಟ್ಟೆಗಳನ್ನಿಡುತ್ತವೆ. ಕೆಲವೊಮ್ಮೆ ದೊಡ್ಡ ಪೊಟರೆಗಳಿದ್ದಲ್ಲಿ ಸಾಮೂಹಿಕವಾಗಿ  ಮೊಟ್ಟೆಗಳನ್ನಿಟ್ಟು ಮರಿ ಮಾಡುವುದು ಇವುಗಳ ವಿಶೇಷತೆ.
ಸುಂದರವಾಗಿರುವ ಈ ಹಕ್ಕಿಯನ್ನು ಪಂಜರದಲ್ಲೂ ಸಾಕುತ್ತಾರೆ.  ಮಾರುಕಟ್ಟೆಯಲ್ಲಿ ಈ ಹಕ್ಕಿಯ ಸಾಕಾಣಿಕೆ ಲಾಭದಾಯಕ ಉದ್ಯಮವಾಗಿದೆ.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ : ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಮಲೆನಾಡಿನಲ್ಲಿ ಅಡಿಕೆ ಕಷ್ಟ…!, ಬಯಲುಸೀಮೆಯಲ್ಲಿ ಅಡಿಕೆ ಇಷ್ಟು ಸುಲಭವೇ? ಕಾರಣ ತಿಳಿದರೆ ಅಚ್ಚರಿಯಾಗುತ್ತೆ!
September 27, 2026
10:34 AM
by: ಪ್ರಬಂಧ ಅಂಬುತೀರ್ಥ
ಕುಟುಂಬದ ಸೌಂದರ್ಯ ವೈಭವದಲ್ಲಲ್ಲ, ಸೌಹಾರ್ದತೆಯಲ್ಲಿ: ಸಂಬಂಧ ಉಳಿಸುವುದೇ ನಿಜವಾದ ಗೆಲುವು
September 26, 2026
7:21 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ನಾಗರಿಕ ಪ್ರಜ್ಞೆ ಎಂದರೆ ಕಾನೂನು ಪಾಲನೆ ಮಾತ್ರವಲ್ಲ – ನಮ್ಮ ನಡವಳಿಕೆಯೇ ಸಮಾಜದ ಕನ್ನಡಿ
September 26, 2026
9:36 AM
by: ಮಹೇಶ್ ಪುಚ್ಚಪ್ಪಾಡಿ
ಬದುಕಿನ “ಬ್ಯಾಗೇಜ್‌” ಇಳಿಸುವ ಸಮಯ ಇದು
September 25, 2026
7:14 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror