ಚಿಲಿಪಿಲಿ | ಹಕ್ಕಿಗಳ ಕೂಗನ್ನು ಅನುಕರಣೆ ಮಾಡಬಲ್ಲ ಕಾಜಾಣ ಹಕ್ಕಿ..! |

June 2, 2022
2:14 PM

ನಮ್ಮ ಸುತ್ತಲೂ ಹಲವು ಹಕ್ಕಿಗಳ ಕಲರವ ಕೇಳುತ್ತಿರುತ್ತವೆ. ಒಂದೊಂದು ಹಕ್ಕಿಯ ದನಿಯೂ ಬೇರೆ ಬೇರೆ. ಕೆಲವೊಮ್ಮೆ ಹೋಲಿಕೆ ಇದ್ದು ನಮ್ಮನ್ನು ಬೆಸ್ತು ಬೀಳಿಸುವ ಹಕ್ಕಿಗಳೂ ಇವೆ. ಹೊಸ ಹಕ್ಕಿಯ ದನಿಯೆಂದು ಬೆಂಬತ್ತಿ ಹೋದರೆ ಹೊಸ ದನಿಯೊಡೆಯನನ್ನು ಕಾಣದೆ ವಾಪಾಸ್ ಆಗ ಬೇಕಾದೀತು. ಕೆಲವು ಹಕ್ಕಿಗಳು ಹಲವು ರೀತಿಯಲ್ಲಿ ಕೂಗ ಬಲ್ಲವು. ಅಂತಹ ವಿಶಿಷ್ಟ ಹಕ್ಕಿಗಳ ಸಾಲಿನಲ್ಲಿ ಈ ಕಾಜಾಣ ಹಕ್ಕಿಯೂ ನಿಲ್ಲುತ್ತದೆ. ಹತ್ತಕ್ಕೂ ಮಿಕ್ಕಿ ಇತರ ಹಕ್ಕಿಗಳ ಕೂಗನ್ನು ಅನುಕರಣೆ ಮಾಡ ಬಲ್ಲುದು.

ಮೈನಾ ಗಾತ್ರದ (31 cm-35 ಛcm) ಈ ಹಕ್ಕಿ ನೀಲಿಗಪ್ಪಿನ ಬಣ್ಣದ್ದಾಗಿದೆ. ತಲೆಯಲ್ಲಿ ಪುಟ್ಟ ಜುಟ್ಟಿನಂತ ರಚನೆಯಿದೆ. ಗಟ್ಟಿಗಂಟಲಿನ ಹಕ್ಕಿಯಾಗಿದೆ. ಭಾರತ , ಬಾಂಗ್ಲಾ, ಬರ್ಮಾ ಮೊದಲಾದ ಕಡೆಗಳಲ್ಲಿ ಕಂಡು ಬರುತ್ತವೆ. ಹತ್ತಾರು ಉಪಜಾತಿಗಳು ಕಾಜಾಣದಲ್ಲಿವೆ. ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸ ಗಳಿಲ್ಲ. ಆಕ್ರಮಣಕಾರಿ ಹಕ್ಕಿಯಾಗಿದ್ದು ರಾಜ ಕಾಗೆ ಎಂಬ ಹೆಸರೂ ಇದೆ. ವೈರಿ ಎಷ್ಟೇ ಪ್ರಬಲವಾಗಿದ್ದರೂ ಅದರ ಮೇಲೆ ಎಗರಿ ಬೀಳುವ ಧೈರ್ಯಶಾಲಿ ಹಕ್ಕಿಯಾಗಿದೆ. ಒಂಟಿ ಅಥವಾ ಜೋಡಿಯಾಗಿರುತ್ತದೆ. ಗುಂಪಿನಲ್ಲಿರುವುದು ಅಪರೂಪ. ಒಮ್ಮೆಗೆ 3-5 ಮೊಟ್ಟೆಗಳನ್ನಿಡುತ್ತವೆ. ಮರಿಗಳ ಜವಾಬ್ದಾರಿಯನ್ನು ಎರಡೂ ಹಕ್ಕಿಗಳು ಹಂಚಿಕೊಳ್ಳುತ್ತವೆ. ಕೀಟಗಳು, ಹಣ್ಣುಗಳು, ಇವುಗಳ ಆಹಾರವಾಗಿದೆ.

ಬರಹ :
# ಅಶ್ವಿನಿಮೂರ್ತಿ ಅಯ್ಯನಕಟ್ಟೆ # ಛಾಯಾಚಿತ್ರ :ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಮನೆ ಎಂದರೆ ಗೋಡೆಗಳಲ್ಲ , ನೆಮ್ಮದಿಯನ್ನು ಕಟ್ಟುವ ಜೀವನಕಲೆ
October 9, 2026
7:14 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಮನಸ್ಸಿನಲ್ಲಿರುವ ಮಾತು ಹೇಳಿಬಿಡಿ… ಬದುಕಿಗೊಂದು ತಿರುವು ಸಿಗಬಹುದು..!
October 8, 2026
1:15 PM
by: ಮಹೇಶ್ ಪುಚ್ಚಪ್ಪಾಡಿ
ಅಂದಿಗೂ, ಇಂದಿಗೂ ಮತ್ತು ಮುಂದೆಯೂ ಅಡಿಕೆಯ ಜೊತೆ ಕೋಕೋ ಒಂದು ಸೂಕ್ತ ಉಪಬೆಳೆ
October 7, 2026
11:35 PM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?
October 4, 2026
6:58 AM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror