ಚಿಲಿಪಿಲಿ | ಕಿತ್ತಳೆ ತಲೆಯ ನೆಲ ಸಿಳ್ಳಾರ

September 26, 2021
9:50 AM

ಕಿತ್ತಳೆ ತಲೆಯ ನೆಲ ಸಿಳ್ಳಾರ (Orange headed thrush) Zoothera citrina citrina  Latham

 ಬಣ್ಣ ಬಣ್ಣದ  ಮುದ್ದಾದ ಚೆಂಡು ಉರುಳುವಂತೆ  ಅತ್ತ ಇತ್ತ ಚುರುಕಾಗಿ  ನೆಲದ ಮೇಲೆ  ಚಲಿಸುವ ಈ ಹಕ್ಕಿ ದಟ್ಟ ಕಾಡಿನ ತರಗೆಲೆಗಳ  ನಡುವೆ ಪುಟು ಪುಟುನೆ ಓಡಾಡಿಕೊಂಡಿರುತ್ತವೆ. ಬಣ್ಣ  ಬಣ್ಣದ ಹಕ್ಕಿಯೇ ಕಂದು ತಲೆ  ನೆಲ ಸಿಳ್ಳಾರ.  ಮೈನಾ  ಹಕ್ಕಿಯ( 21 cm) ಗಾತ್ರದ ಈ ಹಕ್ಕಿ  ಗುಂಡು ಗುಂಡಾಗಿದೆ.

ಹಕ್ಕಿಯ   ರೆಕ್ಕೆ ಬೆನ್ನು, ಬಾಲಗಳು ತೆಳು ನೀಲಿ ಬಣ್ಣದ್ದಾಗಿದೆ. ತಲೆ, ಎದೆ ಹಾಗೂ ಹೊಟ್ಟೆಯ ಭಾಗ ಕಿತ್ತಳೆ ಬಣ್ಣದಲ್ಲಿದೆ.. ಕುತ್ತಿಗೆ ಬೆಳ್ಳಗಿದ್ದು, ಕೆನ್ನೆಯ ಮೇಲೆ ಕರಿ ಪಟ್ಟೆಗಳಿವೆ, ಕಾಲುಗಳು ಉದ್ದವಾಗಿರುತ್ತದೆ. ಹೆಣ್ಣು  ಹಕ್ಕಿ    ತಿಳಿ ಹಸಿರು ಬಣ್ಣವಿರುತ್ತದೆ, ಕೊಕ್ಕು ಕೆಂಬಣ್ಣ. ಮಳೆಗಾಲ ಚಳಿಗಾಲದಲ್ಲಿ ತೀರಾ ಮೌನಿಯಾಗಿದ್ದು  ಗೂಡು ಕಟ್ಟುವ  ಜೂನ್  ಸಮಯದಲ್ಲಿ ಸುಮಧುರವಾಗಿ ಶಿಳ್ಳೆಯ ದನಿಯಲ್ಲಿ  ಹಾಡುತ್ತದೆ. ದನಿಯನ್ನು ಹಿಗ್ಗಿಸಿ ಕುಗ್ಗಿಸಿ  ಕೂಗುವ  ಪರಿ ಆಕರ್ಷಿಸದೆ ಇರದು.

ಪಟ್ಟೆ ನೆಲಗುಟುರಹಕ್ಕಿ, ಇದಕ್ಕಿರುವ ಇನ್ನೊಂದು ಹೆಸರು. ಹಿಮಾಲಯ, ತಮಿಳುನಾಡು ಪಶ್ಚಿಮ ಘಟ್ಟಗಳಲ್ಲಿ   ಹೆಚ್ಚಾಗಿ ಕಂಡು ಬರುತ್ತವೆ.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ:  ಯು ರಾಧಾಕೃಷ್ಣ ರಾವ್ ಬಾಳಿಲ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಮನೆ ಎಂದರೆ ಗೋಡೆಗಳಲ್ಲ , ನೆಮ್ಮದಿಯನ್ನು ಕಟ್ಟುವ ಜೀವನಕಲೆ
October 9, 2026
7:14 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಮನಸ್ಸಿನಲ್ಲಿರುವ ಮಾತು ಹೇಳಿಬಿಡಿ… ಬದುಕಿಗೊಂದು ತಿರುವು ಸಿಗಬಹುದು..!
October 8, 2026
1:15 PM
by: ಮಹೇಶ್ ಪುಚ್ಚಪ್ಪಾಡಿ
ಅಂದಿಗೂ, ಇಂದಿಗೂ ಮತ್ತು ಮುಂದೆಯೂ ಅಡಿಕೆಯ ಜೊತೆ ಕೋಕೋ ಒಂದು ಸೂಕ್ತ ಉಪಬೆಳೆ
October 7, 2026
11:35 PM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?
October 4, 2026
6:58 AM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror