“ಚಿಲಿಪಿಲಿ” ಹಕ್ಕಿ ನೀಡುವ ರಾಧಾಕೃಷ್ಣ ರಾವ್ ಬಾಳಿಲ

November 23, 2020
11:01 PM
ರೂರಲ್‌ ಮಿರರ್‌ ಹೊಸತೊಂದು ಅಂಕಣ ಶುರು ಮಾಡುತ್ತಿದೆ. ಹಕ್ಕಿಗಳ ಲೋಕವನ್ನು ಪರಿಚಯ ಮಾಡುವ ಚಿಲಿಪಿಲಿ ಅಂಕಣ ಇದು. ಬರಹಗಾರ್ತಿ ಅಶ್ವಿನಿಮೂರ್ತಿ ಬಾಳಿಲ ಈ ಅಂಕಣ ಬರೆಯುವರು. ಹಕ್ಕಿಗಳ ಪರಿಚಯ ಮಾಡುವರು. ಇದಕ್ಕೆ ಚಿತ್ರವನ್ನು ನೀಡುವವರು  ರಾಧಾಕೃಷ್ಣ ರಾವ್ ಯು ಬಾಳಿಲ. ಫೋಟೋಗ್ರಫಿ ಒಂದು ತಪಸ್ಸು. ಅದರಲ್ಲೂ ಹಕ್ಕಿ, ಪರಿಸರದ ಛಾಯಾಚಿತ್ರ ತೆಗೆಯುವುದು  ಎಂದರೆ ಅದು ಬಹುದೊಡ್ಡ ತಪಸ್ಸು.
ಸಾವಿರ ಶಬ್ದಗಳಲ್ಲಿ ಹೇಳಲಾಗದ್ದನ್ನು ಒಂದು ಛಾಯಾಚಿತ್ರ ಅರ್ಥಮಾಡಿಸಿ ಬಿಡುತ್ತದೆ. ಮಾತನಾಡುವ ಫೋಟೋವನ್ನು ತೆಗೆಯುವುದೂ ಒಂದು ಕಲೆ. ಛಾಯಾಗ್ರಹಣ ಕಲೆಯನ್ನು ಒಲಿಸಿಕೊಂಡವರಲ್ಲಿ ಪ್ರಮುಖರಾಗಿ ಕಂಡು ಬರುವವರು ರಾಧಾಕೃಷ್ಣ ರಾವ್ ಯು ಬಾಳಿಲ ಅವರು. ಇವರು ಸೆರೆ ಹಿಡಿಯುವ ಪ್ರತಿ ಫೋಟೋ ವೂ ಒಂದು ಸಂಭಾಷಣೆಯೇ. ಅದರಲ್ಲೂ ಪಕ್ಷಿ ಚಿತ್ರಣವಂತೂ ಅದ್ಭುತ.  ಕೃಷಿಕರಾಗಿರುವ ಇವರು ವನ್ಯಜೀವಿ ಛಾಯಾಗ್ರಾಹಕರು.  ಅಪಾರ ಶ್ರದ್ಧೆ, ಪರಿಶ್ರಮ , ತಾಳ್ಮೆ, ಹಾಗೂ ನೂತನ ತಂತ್ರಜ್ಞಾನದ ಅರಿವು ವನ್ಯಜೀವಿ ಛಾಯಾಗ್ರಹಣಕ್ಕೆ ಬಹಳ ಅಗತ್ಯ. ಕೆಲವೊಂದು ಫೋಟೋಗಳನ್ನು ತೆಗೆಯಲು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಹಕ್ಕಿಗಳ ಮನಸ್ಥಿಯನ್ನು ಅರ್ಥಮಾಡಿಕೊಂಡು , ವಿವಿಧ ಭಂಗಿಗಳನ್ನು ಸಮರ್ಥವಾಗಿ ಸೆರೆಹಿಡಿಯ ಬಲ್ಲರು. ಇವರು ತೆಗೆದ ಪ್ರತಿಯೊಂದು ಹಕ್ಕಿಗಳ ಛಾಯಾಚಿತ್ರವೂ ಏನನ್ನೋ ಧ್ವನಿಸುತ್ತದೆ. ಬರಿಗಣ್ಣಿನಲ್ಲಿ ಗೋಚರಿಸದ ಸೂಕ್ಷ್ಮ ಸಂಗತಿಗಳು ಕ್ಯಾಮರಾ ಕಣ್ಣಿನಿಂದ ತಪ್ಪಿಸಿ ಕೊಳ್ಳಲಾಗದು.  ಇವರ ಫೋಟೋಗಳು ಪಕ್ಷಿ ಲೋಕದ ಸುಂದರ‌ ಚಿತ್ರಣಗಳು. ಇವರು ಅಶ್ವಿನಿಮೂರ್ತಿ ಅವರಿಗೆ ಹಕ್ಕಿಗಳ ಲೋಕವನ್ನು ಪರಿಚಯಿಸುವ ಉದ್ದೇಶದಿಂದ ಛಾಯಾಚಿತ್ರಗಳನ್ನು ನೀಡುತ್ತಾರೆ.
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸತ್ಯ……..ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..
May 18, 2024
12:36 PM
by: ವಿವೇಕಾನಂದ ಎಚ್‌ ಕೆ
ಸಮಾಜಕ್ಕೆ ಸೇವೆ ಮಾಡುವುದು ಎಂದರೆ ಹಲವು ಆಯಾಮಗಳಿವೆ | ಹವಾಮಾನ ಹೇಳುವುದೂ ಒಂದು ಸೇವೆ |
May 17, 2024
11:12 AM
by: ದ ರೂರಲ್ ಮಿರರ್.ಕಾಂ
ಮಲೆನಾಡ ಗಿಡ್ಡ ಗೋತಳಿಗಳನ್ನು ಉಳಿಸಿ ಸಂವರ್ಧಿಸಬೇಕು ಏಕೆ..?
May 15, 2024
2:29 PM
by: ಮುರಲೀಕೃಷ್ಣ ಕೆ ಜಿ
ಶಂಕರರ ಆಕ್ರೋಶಕ್ಕೆ ಹೊರಹೊಮ್ಮಿದ ಭಜಗೋವಿಂದಂ
May 15, 2024
11:34 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror