ಇವುಗಳು ಕೆಮ್ಮಂಡೆಜೇನ್ನೊಣ ಬಾಕಗಳು. ಕೆಂದಲೆ ಕಳ್ಳಿಪೀರ ಮೈ ಬಣ್ಣ ಹಸಿರು, ನೆತ್ತಿಯ ಮೇಲೆ ಕಂದು ಬಣ್ಣ, ಮೊನಚಾದ ಕೊಕ್ಕುಗಳು ಇದರ ವಿಶೇಷತೆ.
ತೀಕ್ಷವಾದ ಕಣ್ಣುಗಳಿರುವ ಇವುಗಳು ಬೇಟೆಯನ್ನು ಸುಮಾರು 60 ಮೀಟರ್ ದೂರದಿಂದಲೇ ಗುರುತಿಸುವ ಸಾಮರ್ಥ್ಯ ಹೊಂದಿವೆ. ಆಕಾಶದಲ್ಲಿ ಹಾರುತ್ತಲೇ ಬೇಟೆಯನ್ನು ಹಿಡಿದು ಬಿಡುತ್ತವೆ. ಗಾತ್ರದಲ್ಲಿ ಪುಟ್ಟಹಕ್ಕಿಯಾಗಿದೆ(21cm)
ಸಾಮಾನ್ಯವಾಗಿ ಇವುಗಳು ಐದರಿಂದ ಹತ್ತರವರೆಗೆ ಗುಂಪಾಗಿ ಇರುತ್ತವೆ. ಎತ್ತರದ ಅಪಾಯಮುಕ್ತ ಪ್ರದೇಶಗಳಲ್ಲಿ ಗೂಡು ಕಟ್ಟುತ್ತವೆ. ವಿದ್ಯುತ್ ತಂತಿಗಳ ಮೇಲೆ, ಎತ್ತರದ ಮರದ ಗೆಲ್ಲುಗಳ ಮೇಲೆ ಕುಳಿತು ಸುತ್ತಮುತ್ತಲಿನ ಪರಿಸ್ಥಿತಿಯನ್ನು ಅವಲೋಕಿಸಿ ತಮ್ಮ ಬೇಟೆಯನ್ನು ಹಿಡಿಯುತ್ತವೆ. ಇವುಗಳು ಗಂಟೆಗೆ ನೂರರ ಮೇಲೆ ನೊಣ ಅಥವಾ ಕೀಟಗಳನ್ನು ಭಕ್ಷಿಸುತ್ತವೆ. ಆಹಾರ ಕ್ರಮ ಹಸಿರು ಜೇನ್ನೊಣಬಾಕದಂತೆಯೇ ಇದೆ. ಇದರ ಸ್ವರ ಸಾಮಾನ್ಯವಾಗಿ ನೀಲಿ ಬಾಲದ ಜೇನ್ನೋಣಬಾಕದಂತಿದೆ.
ಇವುಗಳ ಚಲನೆ zig zag ರೀತಿಯಲ್ಲಿರುತ್ತವೆ. ತನ್ನ ಸೌಂದರ್ಯದೊಂದಿಗೆ ಬುದ್ಧಿವಂತ ಪಕ್ಷಿಯಾಗಿಯೂ ಗುರುತಿಸಿ ಕೊಂಡಿದೆ. ಈ ಪಕ್ಷಿ camera friendly ಎಂದೇ ಪ್ರಸಿದ್ಧವಾಗಿದೆ.
#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ.
ಛಾಯಾಚಿತ್ರ : ರಾಧಾಕೃಷ್ಣ ರಾವ್ ಯು, ಬಾಳಿಲ.
ರಾಧಾಕೃಷ್ಣ ರಾವ್ ಯು , ಬಾಳಿಲ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು ಕಡಬ ಅರಣ್ಯ ಹಾಗೂ ಅರಣ್ಯದಂಚಿನ…
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…