ಅಂಕಣ

ಹಕ್ಕಿಗಳ ಲೋಕದಲ್ಲಿ ನಮ್ಮ “ಚಿಲಿಪಿಲಿ”

Share

ಪ್ರಕೃತಿಯೊಂದಿಗೆ ಬದುಕುವುದು ಇಷ್ಟವಾದ ಸಂಗತಿ. ಅದೆಷ್ಟೋ ಬಗೆಯ ಪ್ರಾಣಿ, ಪಕ್ಷಿಗಳು ಪರಿಸರದಲ್ಲಿ  ಕಾಣಸಿಗುತ್ತವೆ. ಅದರಲ್ಲೂ ಹಕ್ಕಿಗಳು ಎಷ್ಟೋ ಬಗೆಯವು. ಬಣ್ಣ ಬಣ್ಣದ ಹಕ್ಕಿಗಳು ಹಾರಾಡುತ್ತಾ ಸಾಗಿದಾಗ ದಿನವೂ ಹೊಸತು ಹೊಸತು. ಅಂತಹ ಹಕ್ಕಿಗಳ ಛಾಯಾಗ್ರಹಣ ಒಂದು ಹವ್ಯಾಸವಾದರೆ, ಆ ಹಕ್ಕಿಗಳ ಪರಿಚಯ ಇನ್ನೂ ಆಸಕ್ತಿದಾಯಕ. ಈಗ ಅಂತಹದ್ದೊಂದು ಪ್ರಯತ್ನದಲ್ಲಿ ನಾವಿದ್ದೇವೆ.

ಪ್ರಕೃತಿಯ ಹಲವು ಅಚ್ಚರಿಗಳಲ್ಲಿ ಈ ಪಕ್ಷಿ ಪ್ರಪಂಚವೂ ಒಂದು. ಗಮನಿಸಿದಷ್ಟು ಹೊಸ ಹೊಸ ಸಂಗತಿಗಳು .‌ ಪರಿಸರದಲ್ಲಿರುವ ಪ್ರತಿಯೊಂದು ಜೀವಿಗೂ ಅದರದೇ ಮಹತ್ವವಿದೆ. ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಸಣ್ಣ ದೊಡ್ಡ ಪ್ರಾಣಿ , ಪಕ್ಷಿಗಳೆನ್ನದೆ ಎಲ್ಲವೂ ಅನಿವಾರ್ಯ. ಯಾವುದೇ ಒಂದು ಜೀವಿಯ ಅಳಿವು ಅಥವಾ ನಿರ್ನಾಮವಾದರೆ ಪರಿಸರದಲ್ಲಿ ವಿಷಮ ಪರಿಸ್ಥಿತಿ ತಲೆದೋರಬಹುದು. ಆರೋಗ್ಯಯುತ ಪರಿಸರದ ನಿರ್ಮಾಣ ಕಾರ್ಯದಲ್ಲಿ ಪಕ್ಷಿಗಳ ಕೊಡುಗೆ ಅಪಾರ.
ನಮ್ಮ ಪರಿಸರದಲ್ಲಿ ವೈವಿಧ್ಯಮಯ ಪಕ್ಷಿಗಳಿವೆ. ಅವುಗಳ ಹಗುರ ದೇಹ ರಚನೆ, ಬಣ್ಣ, ವಿನ್ಯಾಸ, ಸ್ವರ, ಸಾಮರ್ಥ್ಯ ಎಲ್ಲವೂ ಭಿನ್ನ. ಪ್ರತಿಯೊಂದು ಅದರದೇ ಶೈಲಿಯಲ್ಲಿ ಆಹಾರ ಸಂಗ್ರಹಿಸುತ್ತವೆ. ಗೂಡು ಕಟ್ಟುತ್ತವೆ. ಇವುಗಳ ಜೀವನ ಕ್ರಮವೇ ಅಧ್ಯಯನ ಯೋಗ್ಯವಾದುದು.

ತಾಳ್ಮೆ , ಕಲಿಯುವ ಉತ್ಸಾಹ, ಪಕ್ಷಿಗಳ ಕುರಿತು ಒಂದು ಪುಟ್ಟ ಕುತೂಹಲವಿದ್ದರೆ ಪಕ್ಷಿಗಳು ಆಸಕ್ತಿದಾಯಕ ವಿಷಯ. ಸುಮ್ಮನೆ ಕುಳಿತು ಹಕ್ಕಿಗಳನ್ನು ವೀಕ್ಷಿಸಿದರೂ ಆನಂದವೇ. ಫೋಟೋಗ್ರಫಿಯನ್ನು ಹವ್ಯಾಸವಾಗಿ ರೂಡಿಸಿಕೊಂಡವರು ಹಕ್ಕಿಗಳ ಜೀವನದ ಹೆಚ್ಚಿನ ವಿಷಯಗಳನ್ನು ಆಸಕ್ತಿದಾಯಕವಾಗಿ ಸೆರೆ ಹಿಡಿಯ ಬಲ್ಲರು. ಅವುಗಳ ದಿನನಿತ್ಯದ ಚಟುವಟಿಕೆಗಳನ್ನು ಸೂಕ್ಷ್ಮ ವಾಗಿ ಅಭ್ಯಸಿಸಿ ಹೇಳಬಲ್ಲರು. ಪಕ್ಷಿಗಳ ಸುಂದರ ಪ್ರಪಂಚದತ್ತ ಸ್ವಲ್ಪ ‌ಇಣುಕಿ ನೋಡುವ ಪ್ರಯತ್ನವನ್ನು ಲೇಖಕಿ, ಗೃಹಿಣಿ, ಪರಿಸರ ಆಸಕ್ತಿಯನ್ನು ಹೊಂದಿರುವ ಅಶ್ವಿನಿಮೂರ್ತಿ ಅಯ್ಯನಕಟ್ಟೆ ಅವರು ರೂರಲ್‌ ಮಿರರ್‌ ನಲ್ಲಿ ಚಿಲಿಪಿಲಿ ಅಂಕಣದ ಮೂಲಕ ಬರೆಯುತ್ತಿದ್ದಾರೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಇಂದೂ ಕರಾವಳಿ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ…

41 minutes ago

ಏಪ್ರಿಲ್‌ನಲ್ಲಿ ಶನಿ ನಕ್ಷತ್ರ ಪ್ರವೇಶದಿಂದ 5 ರಾಶಿಗಳ ಲೈಫ್ ಚೇಂಜ್ ಆಗುವ ಸಾಧ್ಯತೆ‌ |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

5 hours ago

ಕೊಡಗು ಜಿಲ್ಲೆಯ ಕೆಲವೆಡೆ ಲಘು ಭೂಕಂಪನ | ಆತಂಕಪಡುವ ಅಗತ್ಯವಿಲ್ಲ | ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಸ್ಪಷ್ಟನೆ

ಕೊಡಗು ಜಿಲ್ಲೆಯ ಕೆಲವೆಡೆ ಲಘು ಭೂಕಂಪನವಾಗಿದ್ದು ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 1.6…

14 hours ago

ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಗುಡುಗು ಸಹಿತ ಗಾಳಿ-ಮಳೆ | ಎರಡನೇ ಬಾರಿ ಸುರಿದ ಧಾರಾಕಾರ ಮಳೆ |

ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳ ಹಲವು ಕಡೆ ಸಂಜೆ ಉತ್ತಮ ಮಳೆಯಾಗಿದೆ.…

14 hours ago

ಸರ್ಕಾರಿ ವೈದ್ಯರು ಆಸ್ಪತ್ರೆಗಳಲ್ಲಿ ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಇರಬೇಕು- ಸಚಿವ ಶರಣಪ್ರಕಾಶ್ ಪಾಟೀಲ್

ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಕರ್ತವ್ಯ ನಿರ್ವಹಿಸುವ ವೈದ್ಯರು ಬೆಳಗ್ಗೆ 9 ಗಂಟೆಯಿಂದ…

1 day ago

ಕೃಷಿ ಉತ್ಪನ್ನಗಳ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧ

ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾದ ಕೃಷಿ ಉತ್ಪನ್ನಗಳ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ ಎಂದು ಗದಗ…

1 day ago