ಸುದ್ದಿಗಳು

ಏಕತೆ ಮತ್ತು ಸಾಮರಸ್ಯದ ಸಂದೇಶವನ್ನು ಸಾರುವ ಹಬ್ಬ ಕ್ರಿಸ್ಮಸ್… | ಗುತ್ತಿಗಾರು ಚರ್ಚ್‌ ಧರ್ಮಗುರು ಫಾ.ಆದರ್ಶ್‌ ಜೋಸೆಫ್‌ ಬರೆಯುತ್ತಾರೆ.. |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ದೇವರ ಪ್ರೀತಿ ಧರೆಗೆ ಇಳಿದು ಬಂದ ಸುಂದರವಾದ ದಿನ ಕ್ರಿಸ್ಮಸ್…..

Advertisement
Advertisement

ಪವಿತ್ರ ಬೈಬಲ್ ನ ಶುಭ ಸಂದೇಶ ಅಧ್ಯಾಯ 3 ವಾಕ್ಯ 16 ಹೀಗೆ ಹೇಳುತದೆ.”” ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನು ಧಾರೆಯೆರೆಯುವಂತೆ ಪ್ರೀತಿಸಿದರು””.ಎರಡು ಸಾವಿರ ಇಪ್ಪತೆರಡು ವರ್ಷಗಳ ಹಿಂದೆ ಮಾನವಕುಲದ ರಕ್ಷಣೆಗಾಗಿ ಪ್ರೀತಿಯ, ಸೌಹಾರ್ದತೆಯ ಸಂದೇಶವನ್ನು ಸಾರುತಾ ಬಾಲಯೇಸು ಗೋದಲಿಯಲ್ಲಿ ಜನಿಸಿದರು.

ಏಕತೆ ಮತ್ತು ಸಾಮರಸ್ಯವನ್ನು ಸಾರುವ ಹಬ್ಬವೇ ಕ್ರಿಸ್ಮಸ್. ಏಕೆಂದರೆ ‘ ಎಲ್ಲರನ್ನೂ ಪ್ರೀತಿಸು, ಶತ್ರುಗಳನ್ನು ಕ್ಷಮಿಸು, ಸರ್ವರಿಗೂ ಒಳಿತನ್ನು ಬಯಸು…….. ‘ ಎಂಬಂತಹ ಜೀವನ ಸಂದೇಶವನ್ನು ಕ್ರಿಸ್ತ ಯೇಸು ಜಗತ್ತಿಗೆ ಸಾರಿದ್ದಾರೆ. ನುಡಿದಂತೆ ನಡದ ಕ್ರಿಸ್ತ ಯೇಸುವಿನ ಸಂದೇಶಗಳು ಪ್ರತಿಯೊಬ್ಬರ ಬದುಕಿಗೂ ದಾರಿದೀಪವಾಗಬೇಕಾಗಿದೆ.

ಕ್ರಿಸ್ಮಸ್ ಹಬ್ಬದ ಸಾರಾಂಶ ಅಂದರೆ “” ಪ್ರೀತಿ “” ಯೇಸು ಕ್ರಿಸ್ತನು ನೀಡಿದ ಕಟ್ಟ ಕಡೆಯ ಕಟ್ಟಳೆ ಅಂದರೆ ” ನೀವು ಪರಸ್ಪರ ಪ್ರೀತಿ ಮತ್ತು ಅನ್ಯೋನ್ಯತೆಯಿಂದ ಬದುಕಬೇಕು ಎಂಬುವುದಾಗಿದೆ. ಎಲ್ಲಾ ಧರ್ಮಗಳ ಅಡಿಪಾಯ ಅಥವಾ ಮೂಲ ತತ್ವ ಪ್ರೀತಿಯಾಗಿದೆ.

ಹಿಂದೂ ಧರ್ಮ ಭೋದಿಸುತ್ತದೆ ” ಲೋಕ ಸಮಸ್ತ ಸುಖಿನೋ ಭವಂತು ” ಇಸ್ಲಾಂ ಧರ್ಮ ಭೋದಿಸುತ್ತದೆ ” ನಿನ್ನ ಸಮಾಜದಲ್ಲಿ ಬಡವರು ಇರಬಾರದು ಇತರರಿಗೆ ನಿನ್ನಿಂದ ಕೈಲಾದಷ್ಟು ಸಹಾಯವನ್ನು ಮಾಡು ” ಎಲ್ಲಾ ಧರ್ಮಗಳು ಪ್ರೀತಿಯನ್ನು ಸಾರುತಾ ಮಾನವರನ್ನು ದೇವರಲ್ಲಿಗೆ ಕೊಂಡೊಯ್ಯುವ ಮಾರ್ಗವಾಗಿದೆ.

Advertisement

ಆದರೆ ಇತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ, ನಮ್ಮ ಸಮಾಜದಲ್ಲಿ ಏನೋ ಒಂದು ತಪ್ಪು ಆಗುತ್ತಾ ಇದೆ. ಈ ತಪ್ಪು ಅಂದರೆ ಮಾನವ – ಮಾನವರ ನಡುವೆ ಉಂಟಾಗುವ ವೈಷಮ್ಯ, ಸೇಡು, ವೈರತ್ವ, ಗಲಭೆ, ಅಶಾಂತಿ . ಇವುಗಳು ಮನುಕುಲಕ್ಕೆ ಮಾರಕವಾಗಿದೆ. ಇಂಥ ತಪ್ಪನ್ನು ತಿದ್ದುವಂತಹ ಪ್ರಯತ್ನ ಎಲ್ಲರಿಂದಲೂ ಆಗಬೇಕಾಗಿದೆ.ಮನುಕುಲಕ್ಕೆ ಮಾರಕವಾಗುವ ಗಲಭೆ, ಅಶಾಂತಿಯನ್ನು ನಿರ್ಮೂಲನೆ ಮಾಡಿ ಪ್ರೀತಿಯ, ಸೌಹಾರ್ದತೆಯ,ಸಾಮರಸ್ಯದ ಬೀಜವನ್ನು ಸಮಾಜದಲ್ಲಿ ಬಿತ್ತುವ ಕಾರ್ಯ ಪ್ರಜ್ಞಾವಂತ ರಿಂದ ನಡಯಬೇಕಾಗಿದೆ.

ನಮ್ಮ ದೇಶ ‘ವೈವಿಧ್ಯತೆಯಲ್ಲಿ ಏಕತೆ ‘ ಹೊಂದಿರುವ ದೇಶವಾಗಿದೆ. ನಮ್ಮ ದೇಶವು ವಿವಿಧ ಧರ್ಮಗಳು, ಜಾತಿಗಳು, ಭಾಷೆಗಳು ವಿವಿಧ ವೇಷ ವಿಧಾನಗಳಿಂದ ಸುಂದರವಾಗಿದೆ. ಯಾವುದೇ ಭೇದ – ಭಾವ ವಿಲ್ಲದೆ ಏಕತೆ ಮತ್ತು ಸಾಮರಸ್ಯದಿಂದ ನಮ್ಮ ದೇಶವನ್ನು ಸಮಾಜವನ್ನು ಕಟ್ಟಬೇಕಾಗಿದೆ.

ಭಾರತೀಯ ಬಾಹ್ಯಕಾಶ ಯಾತ್ರಿಕನಾದ ರಾಕೇಶ್ ಶರ್ಮ ಬಾಹ್ಯಕಾಶದಲ್ಲಿ ಇರುವಾಗ ಅವತ್ತಿನ ಪ್ರದಾನ ಮಂತ್ರಿಯಾಗಿದ್ದ  ಇಂದಿರಾಗಾಂಧಿಯವರು ಕೇಳುತ್ತಾರೆ “” ಮೇಲಿನಿಂದ ನೋಡುವಾಗ ನಮ್ಮ ಭಾರತ ಹೇಗೆ ಕಾಣುತ್ತಿದೆ. ಅದಕ್ಕೆ ಉತ್ತರವಾಗಿ  ರಾಕೇಶ್ ಶರ್ಮಾ ಹೀಗೆ ಹೇಳುತ್ತಾರೆ, ” ಸಾರೆ ಜಹಾಂ ಸೇ ಅಚ್ಚಾ, ಹಮಾರಾ ಹಿಂದೂಸ್ತಾನ್ ”
ಇದರ ಅರ್ಥ ವಿಶ್ವದ ಎಲ್ಲಾ ದೇಶಗಳಿಂದ ನಮ್ಮ ಭಾರತ ಸುಂದರವಾಗಿದೆ. ನಮ್ಮ ದೇಶ “ಸಾರೆ ಜಹಾಂ ಸೇ ಅಚ್ಚಾ” ಆಗಬೇಕಾದರೆ ಶಾಂತಿಯ, ಸೌಹಾರ್ದತೆಯ, ಸಾಮರಸ್ಯದ, ಸಮಾಜವನ್ನು ನಿರ್ಮಿಸ ಬೇಕಾಗಿದೆ. ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಕ್ರಿಸ್ತ ಜಯಂತಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ದೇವರು ನಮ್ಮೊಳಗ ಶಾಂತಿ – ಸಮಾಧಾನವನ್ನು ಕರುಣಿಸಲಿ. ಎಲ್ಲರೂ ಪ್ರೀತಿ ಮತ್ತು ಅನ್ಯೋನ್ಯತೇಯಿಂದ ಜೀವಿಸುವಂತಾಗಲಿ, ಕಷ್ಟ- ನೋವುಗಳ ಬೆಟ್ಟ ಕರಗಲಿ, ನಮ್ಮ ಮನೆಯಲ್ಲಿ ಸದಾ ಆನಂದ ತುಬಿರಲಿ, ಸುಖ – ಶಾಂತಿಯ ಜೀವನ, ಉತ್ತಮ ಅರೋಗ್ಯ ನಮ್ಮದಾಗಲಿ. ಏಕತೆ ಮತ್ತು ಸಾಮರಸ್ಯದ ಸಂದೇಶ ಸಾರುವ ಕ್ರಿಸ್ಮಸ್ ಹಬ್ಬ ಸಂತೋಷದಿಂದ ಆಚರಿಸುವಂತಾಗಲಿ.

ಬರಹ :
ಫಾ. ಆದರ್ಶ್ ಜೋಸೆಫ್.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 22-05-2025 | ಮೇ ಕೊನೆಯ ತನಕವೂ ಉತ್ತಮ ಮಳೆ ಸಾಧ್ಯತೆ | ಇನ್ನೊಮ್ಮೆ ವಾಯುಭಾರ ಕುಸಿತದ ಲಕ್ಷಣ |

ಅರಬ್ಬಿ ಸಮುದ್ರದ ವಾಯುಭಾರ ಕುಸಿತವು ಉತ್ತರ ಮಹಾರಾಷ್ಟ್ರ ಕರಾವಳಿ ತಲುಪಿದ್ದು, ಇನ್ನೆರಡು ದಿನಗಳಲ್ಲಿ…

5 hours ago

ಅಕಾಲಿಕ ಮಳೆ | ಮಾವು ಇಳುವರಿ ಕುಸಿತ | ಬೆಲೆ ಕುಸಿತ | ರೈತರಿಗೆ ನಿರಾಸೆ |

ಮಾವು ಉತ್ಪಾದನೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿರುವ ರಾಮನಗರ ಜಿಲ್ಲೆಯಲ್ಲಿ ಈ ಬಾರಿ…

12 hours ago

ಶಾಲೆ ಆರಂಭ | ಯೋಜಿತ ಮತ್ತು ಪರಿಣಾಮಕಾರಿ ಆರಂಭದ ಅಗತ್ಯ

ಶಾಲೆಯ  ಯೋಜಿತ ಮತ್ತು ಪರಿಣಾಮಕಾರಿ ಆರಂಭಕ್ಕೆ  ವಿದ್ಯಾರ್ಥಿ – ಪೋಷಕ – ಶಿಕ್ಷಕ …

12 hours ago

ಛದ್ಮ ವೇಷದಲ್ಲಿ ನಮ್ಮ ಪ್ರಜಾಪ್ರಭುತ್ವ

ಬಡವರಿಗೆ, ಹಳ್ಳಿಗರಿಗೆ, ದಲಿತರಿಗೆ, ನಿರಕ್ಷಕ ಕುಕ್ಷಿಗಳಿಗೆ, ನಿರುದ್ಯೋಗಿಗಳಿಗೆ ಸಮಾನತೆಯೆಂಬುದು ಮತದಾನದ ಸಂದರ್ಭದಲ್ಲಿ ಮಾತ್ರವೇ…

13 hours ago

ಸಂಜೆ ದೀಪ ಹಚ್ಚುವಾಗ ಪಾಲಿಸಬೇಕಾದ ಕೆಲವು ನಿಯಮಗಳು

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳಲ್ಲಿ ಸಂಪರ್ಕಿಸಿ 9535156490

13 hours ago

ಆಂಧ್ರಪ್ರದೇಶಕ್ಕೆ ನಾಲ್ಕು ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ರಾಜ್ಯಸರ್ಕಾರ

ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ ಎಂದು…

21 hours ago