Advertisement
ಹವಾಮಾನ

ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ ಏಕೆ…? | ಹವಾಮಾನ ವಿಶ್ಲೇಷಣೆ ಏನು…?

Share

ಕಳೆದ ಎರಡು ದಿನಗಳಿಂದ ಸದ್ದು ಮಾಡಿದ ಸುದ್ದಿ ಭಾರೀ ಮಳೆ..!. ಮಲೆನಾಡು, ಕರಾವಳಿ ಪ್ರದೇಶದಲ್ಲಿ ರೆಡ್‌ ಎಲರ್ಟ್‌ ಸೇರಿದಂತೆ ವಿವಿಧ ಬಗೆಯ ಎಚ್ಚರಿಕೆಗಳು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಲಿಲ್ಲ. ಹಾಗಿದ್ದರೆ ಮಳೆಯಾಗದೇ ಇರಲು ಕಾರಣವೇನು..? ಹವಾಮಾನ ಇಲಾಖೆ, ವೆದರ್‌ ಮಾಹಿತಿ ಪ್ರಕಾರ ಕರಾವಳಿ, ಮಲೆನಾಡು ಭಾಗಕ್ಕೆ ಮೋಡಗಳ ಚಲನೆ ಇತ್ತು. ಎಲ್ಲವೂ ನಿರೀಕ್ಷೆ ಇತ್ತು. ಕೊನೆಯ ಕ್ಷಣದಲ್ಲಿ ಮಳೆ ಮಾತ್ರಾ ಬರಲಿಲ್ಲ..!. ಈ ಬಗ್ಗೆ ಹವಾಮಾನ ವಿಶ್ಲೇಷಕ ಸಾಯಿಶೇಖರ್‌ ಕರಿಕಳ ಅವರ ಜೊತೆಗಿನ ಮಾತುಕತೆ ಇಲ್ಲಿದೆ….

Advertisement
Advertisement
Advertisement
Advertisement

ಐಎಂಡಿ ಮಾಹಿತಿ ಪ್ರಕಾರ ಹಾಗೂ ಉಪಗ್ರಹದ ಮಾಹಿತಿ ಪ್ರಕಾರ ಶನಿವಾರದಿಂದ ಉತ್ತಮ ಮಳೆ ಕರಾವಳಿ, ಮಲೆನಾಡು ಭಾಗದಲ್ಲಿ ಇರಬೇಕಾಗಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಮಳೆಗಾಲದ ಈ ಅವಧಿಯಲ್ಲಿ ಸಾಮಾನ್ಯವಾಗಿ ಉತ್ತಮವಾದ ಮಳೆ ನಿರೀಕ್ಷೆಯಂತೆಯೇ ಆಗುತ್ತದೆ. ಆದರೆ ಈಚೆಗೆ ಒಂದೆರಡು ವರ್ಷಗಳಿಂದ ಹವಾಮಾನದಲ್ಲಿ ಕೊನೆಯ ಕ್ಷಣದಲ್ಲಿ ಬದಲಾವಣೆಯಾಗುತ್ತಿದೆ. ಈ ಬಾರಿಯೂ ಅದೇ ರೀತಿಯ ಸಂದರ್ಭ ಎದುರಾಗಿದೆ. ಸಾಯಿಶೇಖರ್‌ ಅವರು ಹೇಳುವ ಪ್ರಕಾರ, ಮೋಡಗಳ ಚಲನೆ ಉಪಗ್ರಹದಲ್ಲಿ ತೋರಿಸಿದಂತೆಯೇ ಇತ್ತು. ಆದರೆ ಈಗಲೂ ಸಮುದ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಬಗ್ಗೆ ಹೇಳಬಹುದು, ಮೋಡಗಳು ಸಮುದ್ರದಿಂದ ಮುಂದೆ ಬಂದಿಲ್ಲ, ಇದಕ್ಕೆ ಗಾಳಿಯ ಕೊರತೆ ಕಾರಣವಿದೆ. ಉತ್ತಮ ಗಾಳಿ ಬೀಸಿದರೆ ಮೋಡದ ಚಲನೆಯಾಗು ಮಳೆಯಾಗಬೇಕಿತ್ತು. ಆದರೆ ಗಾಳಿಯ ಒತ್ತಡ ಕಡಿಮೆ ಇರಲು ಕಾರಣವೇನು? ಈ ಬಗ್ಗೆ ತಜ್ಞರು ವಿಶ್ಲೇಷಣೆ ಮಾಡಬೇಕಿದೆ, ವಿಜ್ಞಾನಿಗಳು ಈ ಬಗ್ಗೆ ತಿಳಿಸಬೇಕಿದೆ ಎನ್ನುತ್ತಾರೆ ಸಾಯಿಶೇಖರ್.…….ಮುಂದೆ ಓದಿ…..

Advertisement

ಈಗ ಉತ್ತರ ಭಾರತದಲ್ಲಿ ಬಿಸಿಗಾಳಿಯ ವಾತಾವರಣ ಇದೆ. ಹೀಗಾಗಿ ಗಾಳಿಯ ಒತ್ತಡ ಸಹಜವಾಗಿಯೇ ಕಡಿಮೆಯಾಗುವ ಸಾಧ್ಯತೆ ಉದೆ. ಈ ಕಾರಣದಿಂದಲೂ ಈಗ ಮಳೆಯ ಸೂಚನೆ ಇದ್ದರೂ ಗಾಳಿಯ ಒತ್ತಡ ಕಡಿಮೆಯಾಗಿರುವ ಸಾಧ್ಯತೆ ಇದೆ. ಹಾಗೆಂದು ಇದು ಅಧಿಕೃತವಾಗಿ ನಾವು ಹೇಳಲು ಬರುವುದಿಲ್ಲ, ತಜ್ಞರ ಅಧ್ಯಯನದ ಮೂಲಕವೇ ಸರಿಯಾದ ಮಾಹಿತಿ ಸಿಗಬಹುದು.

Advertisement

ಇಲಾಖೆಗಳ ಪ್ರಕಾರ ಈ ಬಾರಿ ಉತ್ತಮ ಮಳೆಯಾಗಬೇಕಿತ್ತು. ಇದುವರೆಗೂಈ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿಲ್ಲ. ಇದಕ್ಕೆ ಕಾರಣ ಏನು..? ಎಂಬುದರ ಮಾಹಿತಿ ಲಭ್ಯವಾದರೆ ರೈತರು ಕೂಡಾ ಮುಂಜಾಗ್ರತಾ ಕ್ರಮಗಳೊಂದಿಗೆ ಕೃಷಿ ಚಟುವಟಿಕೆ ಮಾಡಲು ಅನುಕೂಲವಾಗಬಹುದು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 03-03-2025 | ಬಿಸಿಲಿನ ವಾತಾವರಣ ಮುಂದುವರಿಕೆ | ಮಾ.6 ರ ನಂತರ ಅಲ್ಲಲ್ಲಿ ತುಂತುರು ಮಳೆ ನಿರೀಕ್ಷೆ |

ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…

10 hours ago

ಚಿಕ್ಕಮಗಳೂರಿನ ಅರಣ್ಯದಲ್ಲಿ ಕಾಡ್ಗಿಚ್ಚು | 20 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ

ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…

14 hours ago

Weather Update | ಕೆಲವು ಕಡೆ ಮಳೆ ಸಾಧ್ಯತೆ | ಕರಾವಳಿ ಜಿಲ್ಲೆಗೆ ಇಂದೂ ಹೀಟ್‌ವೇವ್‌ ಎಚ್ಚರಿಕೆ |

ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…

15 hours ago

ಕುಂಭಮೇಳ | ಆ ಪ್ರಯಾಣದಲ್ಲಿ ಕಂಡದ್ದು ಏನೇನು..? ಅದೊಂದು ಸಿಹಿ ನಮಗೂ ಹೊಸದು…!

ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್‌ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…

15 hours ago

ಭಾವತೀರ ಯಾನ ತಂಡದ ಸಂದರ್ಶನ

https://youtu.be/uK6DXLGXQiE?si=aXESe-CGSVVHt_WS

2 days ago

ವಳಲಂಬೆ ಜಾತ್ರೆ

https://youtu.be/2vEOlELtngk?si=R4B-hMjIJ5r31QyR

2 days ago