Advertisement
ಸುದ್ದಿಗಳು

ಹವಾಮಾನ ಬದಲಾವಣೆಯಿಂದ ಭಾರತದ ಆಹಾರದ ಬೆಲೆಗಳ ಮೇಲೆ ಭಾರೀ ಪರಿಣಾಮ

Share
ಹವಾಮಾನ ವೈಪರೀತ್ಯವು ಅಡುಗೆ ಮನೆಗೂ ಪರಿಣಾಮವನ್ನು ಬೀರಿದೆ. ಹೌದು..! ,ಹವಮಾನ ಬದಲಾವಣೆಯಿಂದ ಟೊಮೆಟೊದಿಂದ ಈರುಳ್ಳಿವರೆಗೆ ಸಮಸ್ಯೆ ಆಗಿದೆ. ಹವಾಮಾನ ಆಘಾತದ ಕಾರಣದಿಂದ ಭಾರತೀಯರು ದಿನನಿತ್ಯದ ಊಟಕ್ಕೆ ಎಷ್ಟು ಹೆಚ್ಚುವರಿ ಪಾವತಿಸಬೇಕಾಗುತ್ತದೆ..?. ಬೆಲೆ ಏರಿಕೆ ಹೆಚ್ಚಾಗುತ್ತಲೇ ಇದೆ, ಇಳುವರಿಯೂ ಕುಸಿತವಾಗುತ್ತಲೇ ಇದೆ. ಇದರ ಎರಡು ಮುಖ್ಯ ಅಂಶಗಳು…
  1. ಬೆಲೆಗಳು ಮತ್ತು ಹವಾಮಾನ: ಭಾರತದ ಅತ್ಯಂತ ಮುಖ್ಯ ಹಾಗೂ ಮಹತ್ವದ ಬೆಳೆಗಳಾದ ಟೊಮೆಟೊ , ಈರುಳ್ಳಿ ಮತ್ತು ಆಲೂಗಡ್ಡೆ ಕೃಷಿಯು ಹವಾಮಾನಕ್ಕೆ ಹೆಚ್ಚು ವೇಗವಾಗಿ ವರ್ತಿಸುತ್ತಿವೆ. ಹೀಗಾಗಿ ಇಳುವರಿ ಮತ್ತು ಗುಣಮಟ್ಟದಲ್ಲೂ ಬದಲಾವಣೆಯಾಗುತ್ತದೆ. ಇದಕ್ಕೆ ಹವಮಾನ ವೈಪರೀತ್ಯವೇ ದೊಡ್ಡ ಕಾರಣವಾಗಿದೆ. ಹಠಾತ್ ಮಳೆ, ಶಾಖದ ಅಲೆಗಳು ಅಥವಾ ಬಿರುಗಾಳಿಗಳು ಮತ್ತು ಇತರ ಹವಾಮಾನ ಪರಿಣಾಮಗಳು ಹೆಚ್ಚಿನ ಸಮಸ್ಯೆಯನ್ನು ತಂದಿದೆ. ಇದು ಬೆಳೆದು  ನಿಂತಿರುವ ಬೆಳೆಗಳನ್ನು ನಾಶಮಾಡುತ್ತಿದೆ.
  2. ಆಹಾರದ ಬೆಲೆ ಏರಿಕೆ ಮತ್ತು ಹವಾಮಾನ ಬದಲಾವಣೆ : ಭಾರತ ಇನ್ನೂ ಮಳೆಯಾಶ್ರಿತ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದು ದೇಶವನ್ನು ಸಣ್ಣ ಹವಾಮಾನ ವೈಪರೀತ್ಯಗಳಿಗೂ ಅತ್ಯಂತ ದುರ್ಬಲಗೊಳಿಸುತ್ತದೆ. ಇದರರ್ಥ ಅನಿಯಮಿತ ಮಾನ್ಸೂನ್ ಅಥವಾ ಹಠಾತ್ ಶಾಖದ ಅಲೆ, ಇವೆರಡೂ  ಈ ವರ್ಷ ಸಂಭವಿಸಿದೆ. ಮುಂದೆ ಮತ್ತೆ ಮತ್ತೆ ಅಪ್ಪಳಿಸುವ ನಿರೀಕ್ಷೆಯಿದೆ. ಈ ಕಾರಣದಿಂದ ಉತ್ವಾದನೆಯಲ್ಲಿ ಬದಲಾವಣೆ ತರಬಹುದು.
ಈ ಹವಾಮಾನ ಬದಲಾವಣೆಯಿಂದ ಬೆಲೆ ಏರಿಕೆ ಯಾಕೆ:  ಹವಾಮಾನ ಬದಲಾವಣೆಯು ಅದೇ ಪ್ರದೇಶಕ್ಕೆ ಸೀಮಿತವಾಗಿಲ್ಲ. ಯಾವುದೋ ಒಂದು ಕಡೆ ಸಂಭವಿಸುವ ಹವಾಮಾನ ವೈಪರೀತ್ಯ ಇನ್ನು ಯಾವುದೋ ಕಡೆ ಪರಿಣಾಮ ಬೀರುತ್ತದೆ. ಯಾವುದೇ ಪ್ರದೇಶದ ಕೃಷಿ ಹಾನಿ, ಇನ್ಯಾವುದೋ ಪ್ರದೇಶದ ದಿನಸಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ  ಅನಿರೀಕ್ಷಿತ ದಿನಸಿ ಬಿಲ್ ಗಳು ಮತ್ತು ಅದರ  ಪರಿಣಾಮಗಳು ಕೇವಲ ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿಲ್ಲ. ಮಹಾರಾಷ್ಟ್ರದಲ್ಲಿ ಹಠಾತ್ ಬಿರುಗಾಳಿ ಅಥವಾ ಆಂದ್ರಪ್ರದೇಶದಲ್ಲಿ ಬಿಸಿಲಿನ ಅಲೆಯು ದೆಹಲಿ ಅಥವಾ ಬೆಂಗಳೂರಿನಲ್ಲಿ ಕೆಲವೇ ದಿನಗಳಲ್ಲಿ ತರಕಾರಿಯ ಬೆಲೆಯನ್ನು ದ್ವಿಗುಣಗೊಳಿಸಬಹುದು.
ಸಾಲಗಳನ್ನು ಮಾಡಿಕೊಂಡ ರೈತರು, ಹವಾಮಾನ ಪ್ರಭಾವದಿಂದ ಸಾಲ ತೀರಿಸುವುದು ಹೇಗೆ ಎಂಬುದರ ಬಗ್ಗೆ ಚಿಂತಿಸುತ್ತಾರೆ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯವಾಗುತ್ತದೆ. ಭಾರತದ ಕೃಷಿ ಕ್ಷೇತ್ರದ ಬಹುಪಾಲು ಭಾಗವಾಗಿರುವ ಸಣ್ಣ ಮತ್ತು ಅತೀಸಣ್ಣ ರೈತರು ಇಂತಹ ಹವಾಮಾನ ಆಘಾತಗಳನ್ನು ಸಹಿಸಿಕೊಳ್ಳಲು ಹಾಗೂ ಅವುಗಳಿಂದ ರಕ್ಷಿಸಿಕೊಳ್ಳಲು ಯಾವುದೇ ಪರಿಹಾರ ಮಾರ್ಗಗಳನ್ನು ಸದ್ಯ ಹೊಂದಿಲ್ಲ. ಹೀಗಾಗಿ ಭಾರತವು ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಹವಾಮಾನ ಸ್ಥಿತಿಸ್ಥಾಕತ್ವವನ್ನು ಬೆಳೆಸಲು ಪ್ರಯತ್ನಿಸುತ್ತಿದೆ. ಕೃಷಿಕರೂ ಸುಧಾರಣೆಯ ಕಡೆಗೆ ಗಮನಹರಿಸಬೇಕಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

12 hours ago

ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…

12 hours ago

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ

ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…

13 hours ago

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…

13 hours ago

ಹವಾಮಾನ ವರದಿ | 3-10-2026 | ಬಂಗಾಳಕೊಲ್ಲಿಯಿಂದ ತೇವಾಂಶದ ಗಾಳಿ – ಕರ್ನಾಟಕದಲ್ಲಿ ಮತ್ತೆ ಮಳೆ?

ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…

1 day ago

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

1 day ago