ಕಳೆದ ಕೆಲವು ವರ್ಷಗಳಿಂದ ದೇಶದಾದ್ಯಂತ ಹವಾಮಾನ ಬದಲಾವಣೆಯ ಪರಿಣಾಮಗಳು ಕಂಡುಬರುತ್ತಿದೆ. ಇದರಿಂದ ಕೃಷಿ, ಪರಿಸರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಹಲವು ಆಯಾಮಗಳಿಂದ ಸಮಸ್ಯೆಗಳಾಗುತ್ತಿದೆ. ಈಗ ಹವಾಮಾನ ಬದಲಾವಣೆಯಿಂದ ಮಲೆನಾಡು ಭಾಗಗಳಲ್ಲಿ ಆಗಿರುವ ವಿಶೇಷ ಬದಲಾವಣೆಗಳು ಹಾಗೂ ಕೃಷಿಯ ಮೇಲಿನ ಪರಿಣಾಮಗಳ ಬಗ್ಗೆ ಚಿಂತನೆ ನಡೆಸಲು ಆರಂಭವಾಗಿದೆ. ಇದಕ್ಕಾಗಿ ಆರಂಭ ಹಂತದ ಚಿಂತನಾ ಸಭೆ ನಡೆಯಿತು.
ತಾಪಮಾನ ಏರಿಕೆ, ಇದರಿಂದಾಗಿ ಹವಾಮಾನ ಬದಲಾವಣೆ. ಈ ಕಾರಣದಿಂದ ಹವಾಮಾನ ಏರುಪೇರು. ಮಳೆಯ ಪರಿಸ್ಥಿತಿ ಬದಲಾವಣೆ. ಚಳಿ ಇರಬೇಕಾದ ಕಾಲದಲ್ಲಿ ಮಳೆ, ಮಳೆಯಾಗಬೇಕಾದ ಕಾಲದಲ್ಲಿ ಬಿಸಿಲು. ಇದೆಲ್ಲಾ ಕೃಷಿಯ ಮೇಲೆ, ಗ್ರಾಮೀಣ ಭಾಗದ ಹಲವು ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತಿದೆ. ಈಚೆಗೆ ಕೆಲವು ಸಮಯಗಳಿಂದ ಮಳೆಯ ಪ್ಯಾಟರ್ನ್ ಕೂಡಾ ಬದಲಾಗಿದೆ. ಹೀಗಾಗಿ ಬಹುವಾರ್ಷಿಕ ಬೆಳೆಗಳಾದ ಅಡಿಕೆ, ರಬ್ಬರ್, ಕಾಫಿ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ. ಇದಕ್ಕೆ ಕಾರಣ ಹಾಗೂ ಮುಂದೆ ಅಳವಡಿಸಿಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧ್ಯಯನ ಹಾಗೂ ಎಚ್ಚರಿಕೆಗಳ ಬಗ್ಗೆ ಚರ್ಚಿಸಲು ಕೃಷಿಕರ ಸಂವಾದ -ಚಿಂತನೆ ಆರಂಭವಾಗಿದೆ.
ಸುಳ್ಯ ತಾಲೂಕಿನ ಬಾಳಿಲದಲ್ಲಿ ಕಳೆದ 48 ವರ್ಷಗಳಿಂದ ಮಳೆ ದಾಖಲೆ ಮಾಡುತ್ತಿರುವ ಪಿಜಿಎಸ್‌ಎನ್ ಪ್ರಸಾದ್ ಅವರ ಮಳೆ ದಾಖಲೆಗಳನ್ನು ಆಧಾರವಾಗಿರಿಸಿಕೊಂಡು ಚರ್ಚೆ ಆರಂಭಿಸಲಾಗಿದೆ. ಚಿಂತನಾ ಸಭೆಯಲ್ಲಿ ಐಬಿಬಿಎನ್ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಪಣೀಶ್ ಕೃಷ್ಣ ಮತ್ತು ಕೃಷಿ ಗ್ರಾಮೀಣ ಅಭಿವೃದ್ಧಿ ವಿಶ್ಲೇಷಕ ಕೆ.ಪಿ.ಸುರೇಶ್ ಕಂಜರ್ಪಣೆ, ಕೃಷಿಕರಾದ ವಿನಯಚಂದ್ರ ಕಿಲಂಗೋಡಿ, ಸುರೇಶ್ಚಂದ್ರ ಕಲ್ಮಡ್ಕ, ಪ್ರಸನ್ನ ಎಣ್ಮೂರು, ಸಾಯಿಶೇಖರ್ ಕರಿಕಳ , ಮಹೇಶ್ ಪುಚ್ಚಪ್ಪಾಡಿ ಇದ್ದರು.
ಕಳೆದ ಸುಮಾರು 50 ವರ್ಷಗಳಿಂದ ಮಳೆಯ ಪ್ಯಾಟರ್ನ್‌ನಲ್ಲಿ ಬದಲಾವಣೆ ಹಾಗೂ ಮಳೆಯ ಬದಲಾವಣೆಗೆ ಕಾರಣಗಳು ಏನು ಎಂಬುದರ ಬಗ್ಗೆ ಚರ್ಚಿಸಲಾಯಿತು. ಇದರಿಂದಾಗಿ ಕೃಷಿಯ ಮೇಲೆ ಆಗುತ್ತಿರುವ ಪರಿಣಾಮಗಳು, ಬಹುವಾರ್ಷಿಕ ಬೆಳೆಯಾದ ಅಡಿಕೆಯ ಮೇಲೆ ಆಗುತ್ತಿರುವ ಪರಿಣಾಮಗಳು, ಅಡಿಕೆಯ ಮೇಲೆ ಬರುತ್ತಿರುವ ಈಚೆಗಿನ ರೋಗಗಳಾದ ಸಿಂಗಾರ ಒಣಗುವಿಕೆ, ಎಲೆಚುಕ್ಕಿ ರೋಗದ ಕಾರಣ ಹಾಗೂ ಅಡಿಕೆ ಒಡೆದು ಬೀಳುವುದು ಇತ್ಯಾದಿಗಳು, ರಬ್ಬರ್ ಕೃಷಿಯ ಮೇಲೆ ಆಗುತ್ತಿರುವ ಪರಿಣಾಮಗಳು, ಕಾಫಿ ಬೆಳೆಯಲ್ಲಿ ಆಗುವ ಬದಲಾವಣೆಗಳು, ಇಳುವರಿ ಕೊರತೆ ಇದಕ್ಕೆಲ್ಲಾ ಪ್ರಮುಖವಾದ ಕಾರಣಗಳು ಹವಾಮಾನದ ಬದಲಾವಣೆ. ಇದಕ್ಕಾಗಿ ಮುಂದೆ ಏನು ತಕ್ಷಣದ ಕ್ರಮಗಳು ಕೈಗೊಳ್ಳಬಹುದು ಹಾಗೂ ದೀರ್ಘಾವಧಿಯಾಗಿ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಬಗ್ಗೆ ಸೂಕ್ಷ್ಮವಾಗಿ ಚರ್ಚಿಸಲಾಯಿತು.
ಇದಕ್ಕಾಗಿ ಮುಂದೆ ಸುಳ್ಯ, ಪುತ್ತೂರು ಸೇರಿದಂತೆ ಕರಾವಳಿ, ಮಲೆನಾಡು ಭಾಗದ ಕೃಷಿಕರ ಅಭಿಪ್ರಾಯವೂ ಅಗತ್ಯವಿದೆ. ಈ ನೆಲೆಯಲ್ಲಿ ಕೃಷಿಯನ್ನು ಉಳಿಸುವ, ಗ್ರಾಮೀಣ , ಪರಿಸರ ಬದಲಾವಣೆಯನ್ನು ತಡೆಯುವ ಪ್ರಯತ್ನ ನಡೆಯಬೇಕಿದೆ.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…