ಅಮರನಾಥ ದೇಗುಲದ ಬಳಿ ಮೇಘಸ್ಫೋಟ ಸಂಭವಿಸಿದೆ. ಹೀಗಾಗಿ ಭಾರೀ ಮಳೆಯ ಕಾರಣದಿಂದ ಕುಸಿತಗಳು ಸಂಭವಿಸಿ ಐದು ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ, ಕೆಲವು ಮಂದಿ ನಾಪತ್ತೆಯಾಗಿದ್ದು ಹಲವರನ್ನು ರಕ್ಷಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಅಮರನಾಥದ ಪವಿತ್ರ ಗುಹೆ ದೇಗುಲದ ಬಳಿ ಮೇಘಸ್ಫೋಟದ ನಂತರ ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿದಂತೆ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೋಡದ ಸ್ಫೋಟದಿಂದಾಗಿ ಅಮರನಾಥ ಗುಹೆಯ ಬಳಿ ಎರಡು ಲಂಗರ್‌ಗಳ ಮೇಲೆ ಪರಿಣಾಮ ಬೀರಿವೆ.ಅಮರನಾಥ ಯಾತ್ರೆಯ ಪ್ರದೇಶದಲ್ಲಿ ಮೇಘಸ್ಫೋಟ. ಮೃತಪಟ್ಟ 5 ಯಾತ್ರಿಕರು. ಹಲವರ ರಕ್ಷಣೆ. #Cloudburst #AmarnathYatra #AmarnathYatra2022 #ಮೇಘಸ್ಫೋಟ pic.twitter.com/K52fMeL9au
— theruralmirror (@ruralmirror) July 8, 2022


Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel

