Advertisement
MIRROR FOCUS

ತೆಂಗಿನೆಣ್ಣೆ ಬೆಲೆ ಇಳಿಕೆಯ ಹಾದಿಯಲ್ಲಿ – ತೆಂಗಿನ ಕಾಯಿ ಬೆಲೆ ಅಸ್ಥಿರ

Share

ಕೇರಳದಲ್ಲಿ ಓಣಂ ಹಬ್ಬಕ್ಕೂ ಮೊದಲು ದಾಖಲೆ ಮಟ್ಟದಲ್ಲಿ ಏರಿದ ತೆಂಗಿನಕಾಯಿ ಹಾಗೂ ತೆಂಗಿನ ಎಣ್ಣೆ ಬೆಲೆ ಈಗ ತೀವ್ರವಾಗಿ ಇಳಿಯುತ್ತಿದೆ. ಕೆಲವು ದಿನಗಳ ಹಿಂದೆ ಲೀಟರ್‌ಗೆ ಸುಮಾರು ₹430-480 ಇದ್ದ ಬೆಲೆ ಈಗ ಸುಮಾರು ₹330-360 (ರಖಂ ದರಗಳು) ಆಗಿದೆ ಎಂದು ಮಲಯಾಳ ಮನೋರಮಾ ವರದಿ ಮಾಡಿದೆ.  ಇದೇ ವೇಳೆ ರಾಜ್ಯದಲ್ಲಿ ತೆಂಗಿನ ಮಾರುಕಟ್ಟೆಯಲ್ಲಿ ಅಸ್ಥಿರತೆ ಕಂಡುಬಂದಿದೆ. ಮಾರುಕಟ್ಟೆ ಏರಿಕೆ ಕಾಣುತ್ತಿಲ್ಲ.

Advertisement
Advertisement

ಕೇರಳದ ತೆಂಗಿನ ಎಣ್ಣೆ ಬೆಲೆಯ ಇಳಿಕೆಗೆ ಕಾರಣಗಳಾಗಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ತೆಂಗಿನ ಉತ್ಪಾದನೆಯು ಹೆಚ್ಚಿರುವುದು ಮತ್ತು ಹೆಚ್ಚು ಪ್ರಮಾಣದಲ್ಲಿ ಕೊಬ್ಬರಿ ಮಾರುಕಟ್ಟೆಗೆ ಆಮದಾಗಿರುವುದರಿಂದ , ಸಹಜವಾಗಿ ಮಾರುಕಟ್ಟೆ ಒತ್ತಡದ ಕಾರಣ ದರಗಳು ಗಣನೀಯವಾಗಿ ಕಡಿಮೆಯಾಗಿದೆ.

ವ್ಯಾಪಾರಿಗಳು ಹೇಳುವ ಪ್ರಕಾರ, ಮುಂದಿನ ವಾರಗಳಲ್ಲಿ ಹೊಸ ಕೊಬ್ಬರಿ ಪೂರೈಕೆಗಳು ತಲುಪಿದಂತೆ ಬೆಲೆ ಇನ್ನೂ ಕಡಿಮೆಯಾಗಿ, ಮುಂದಿನ ಏಪ್ರಿಲ್‌ ನ ಅಂದಾಜಿಗೆ ಲೀಟರ್‌ಗೆ ಸುಮಾರು ₹180-200 ರ ಆಸುಪಾಸಿನಲ್ಲಿ ಇರಬಹುದು ಎಂದು ನಿರೀಕ್ಷೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ತೆಂಗಿನಕಾಯಿಯ ಇನ್ನೊಂದು ಉತ್ಪನ್ನ ಡೆಸಿಕೇಟೆಡ್ ಪೌಡರ್ , ಇದರ ಮಾರುಕಟ್ಟೆ ಹಾಗೂ ಕೊಬ್ಬರಿ ಮಾರುಕಟ್ಟೆಗೆ ಸರಿಯಾಗಿ, ತುಲನಾತ್ಮಕ ದರಗಳಲ್ಲಿ ವ್ಯವಹರಿಸುತ್ತಿಲ್ಲ . ಉತ್ತಮ ಗುಣಮಟ್ಟದ ಒಣಕಾಯಿಗಳು, ಕೊಬ್ಬರಿ ಮಾಡಲ್ಪಡುತ್ತದೆ.

ಹಸಿ ಹಾಗೂ ಇತರೇ ತೆಂಗಿನಕಾಯಿಗಳು ಪೌಡರ್ ಮಾಡಲು ಹೋಗುತ್ತದೆ. ಪೌಡರ್ ನ ಮಾರಾಟ ಕೂಡ ಹಬ್ಬ ದ ಸಮಯವಲ್ಲದ ಕಾರಣ ಮಂದಗತಿಯಲ್ಲಿ ಸಾಗಿದೆ. ಹಾಗಾಗಿ ತೆಂಗಿನಕಾಯಿಗಳಲ್ಲಿ ದರಗಳಲ್ಲಿ ವ್ಯತ್ಯಾಸ ಕಾಣಬಹುದಾಗಿದೆ .

ಸದ್ಯ, ಕ್ರಿಸ್‌ಮಸ್‌ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಬೆಲೆ ತಾತ್ಕಾಲಿಕವಾಗಿ ಹೆಚ್ಚುತ್ತಿದೆ. ತೆಂಗಿನಕಾಯಿಯ ಸಗಟು ಬೆಲೆ ಕೆಜಿಗೆ 72 ರೂ. ತಲುಪಿದ್ದರೂ, ಸಾಮಾನ್ಯ ಕೃಷಿಕರನ್ನು ಚಿಂತೆಗೀಡು ಮಾಡಿದೆ. ಧಾರಣೆ ಅಸ್ಥಿರತೆಯು ಕೃಷಿಕರನ್ನು ಕಾಡುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ಶಬರಿಮಲೆಯ  ಮತ್ತು ಹಬ್ಬದ ಕಾರಣಗಳಿಂದ ಡಿಸೆಂಬ‌ರ್ ಮೊದಲ ವಾರದಲ್ಲಿ 60-65 ರೂ.ಗಳಷ್ಟಿದ್ದ ತೆಂಗಿನಕಾಯಿಯ ಸಗಟು ಬೆಲೆ, ಕ್ರಿಸ್‌ಮಸ್‌ ಮತ್ತು ಹೊಸ ವರ್ಷಕ್ಕೆ ಹೆಚ್ಚಿದ ಬೇಡಿಕೆಯಿಂದಾಗಿ 72 ರೂ.ಗಳಿಗೆ ಏರಿತು. ಡಿಸೆಂಬರ್ ಮೊದಲ ವಾರದಲ್ಲಿ ತೆಂಗಿನಕಾಯಿ ಬೆಲೆ 60 ರೂ.ಗಳಷ್ಟಿತ್ತು. ಎರಡನೇ ವಾರದಲ್ಲಿ ಬೆಲೆ 57 ರೂ.ಗಳಿಗೆ ಇಳಿಯಿತು ಎಂದು ಮನೋರಮಾ ವರದಿಯಲ್ಲಿ ಹೇಳಿದೆ.

ಕರ್ನಾಟಕದಲ್ಲಿ ಧಾರಣೆ ಅಸ್ಥಿರತೆ ರೈತರನ್ನು ಚಿಂತೆಗೀಡು ಮಾಡಿದೆ. ಈ ಹಿಂದೆ ಉತ್ತಮ ಧಾರಣೆಯ ಕಾರಣದಿಂದ ತೆಂಗು ಬೆಳೆಗಾರರಿಗೆ ಸ್ಥಿರವಾದ ಧಾರಣೆ ಲಭ್ಯವಾಗುತ್ತಿತ್ತು. ಇದೀಗ ಧಾರಣೆ ಕುಸಿತವು ಕೃಷಿಕರಿಗೆ ಹಾಗೂ ವ್ಯಾಪಾರಿಗಳು ಸಂಕಷ್ಟ ತಂದಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ

ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?.  ಈ ಪ್ರಶ್ನೆಗೆ ಹಲವರದು ಹಲವು…

8 hours ago

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ

ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…

15 hours ago

ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!

ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…

22 hours ago

ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ

ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…

22 hours ago

ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ

ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…

22 hours ago

ಶುದ್ಧ ಹಿಮಾಲಯವೂ ಸುರಕ್ಷಿತವಲ್ಲ..! ಮರುಭೂಮಿ ಧೂಳಿನೊಂದಿಗೆ ಹರಡುವ ರೋಗಕಾರಕಗಳು

ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…

22 hours ago