ಈ ಬಾರಿ ಮುಂಗಾರು ಉತ್ತರ ಕರ್ನಾಟಕದ ಕಡೆ ಇನ್ನೂ ಮಳೆ ಸರಿಯಾಗಿ ಆಗಿಲ್ಲ. ಅದರಲ್ಲೂ ಬಯಲು ಸೀಮೆ ಜಿಲ್ಲೆಗಳಾದ ರಾಯಚೂರು, ಕಲಬುರಗಿ, ಬಿಜಾಪುರ, ಯಾದಗಿರಿ ಕಡೆ ರೈತರು ಮಳೆರಾಯನಿಗಾಗಿ ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದಾರೆ. ಮಳೆ ಬಾರದಿದ್ದರೆ ಬೆಳೆ ಇಲ್ಲ. ಬೆಳೆ ಇಲ್ಲದಿದ್ದರೆ ಜೀವನವೇ ದುಸ್ತರವಾಗಲಿದೆ.
ಮಳೆಯಾಗದೆ ಇರುವ ಹಿನ್ನೆಲೆಯಲ್ಲಿ ರೈತ ಯಂಕಪ್ಪ ಎಂಬುವವರು ವಿಶೇಷ ಪ್ರಯತ್ನ ಕೈಗೊಂಡಿದ್ದಾರೆ. ರೈತ ಯಂಕಪ್ಪ ಅವರ ಜೋಡೆತ್ತುಗಳ ಸಹಕಾರದಿಂದ ಈ ಸಾಧನೆಯನ್ನು ಮಾಡಿದ್ದಾರೆ. ಮನುಷ್ಯರು ಗಿನ್ನಿಸ್ ರೆಕಾರ್ಡ್ ಗಾಗಿ ಏನೇನೋ ಮಾಡೋದನ್ನು ಕೇಳಿದ್ದೀವಿ. ಆದರೆ ಇಲ್ಲಿ ಜೋಡೆತ್ತುಗಳನ್ನು ಬಳಸಿಕೊಂಡು ಈ ರೈತ ದಾಖಲೆಯನ್ನು ಮಾಡಿದ್ದಾರೆ. ಈ ಸಾಧನೆಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 11 ಗಂಟೆಯಲ್ಲಿ 18 ಎಕರೆಯ ಕೃಷಿ ಭೂಮಿಯನ್ನು ನಿರಂತರವಾಗಿ ಉಳುಮೆ ಮಾಡಿ ಜೋಡೆತ್ತುಗಳೊಂದಿಗೆ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮೂಷ್ಟುರು ಗ್ರಾಮದ ಜೋಡೆತ್ತುಗಳು ಹೊಸ ದಾಖಲೆ ಬರೆದಿವೆ.
ರೈತ ಯಂಕಪ್ಪ ಎಂಬುವವರ ಸೀಮೆ ತಳಿಯ ಜೋಡೆತ್ತುಗಳೇ ಈ ಸಾಧನೆ ಮಾಡಿದವು. ರಾತ್ರಿ 1 ಗಂಟೆಗೆ ಜೋಡೆತ್ತುಗಳಿಗೆ ನೊಗ ಕಟ್ಟಿದ್ದ ರೈತ ಯಂಕಪ್ಪ ಬೆಳಗ್ಗೆ 11 ಗಂಟೆಗೆ ಹೊತ್ತಿಗೆ ಉಳುಮೆ ಕಾರ್ಯ ಮುಕ್ತಾಯಗೊಳಿಸಿದ್ದಾರೆ. ಉಳುಮೆಗೂ ಮುನ್ನ ಜೋಡೆತ್ತುಗಳಿಗೆ ಭಾರೀ ಆರೈಕೆ ಮಾಡಲಾಗಿತ್ತು. ಆ ನಂತರ ರಾತ್ರಿ 1 ಗಂಟೆಯಿಂದ ಉಳುಮೆಯನ್ನು ರೈತ ಯಂಕಪ್ಪ ಅವರು ಆರಂಭಿಸಿದ್ದಾರೆ.
ಮಳೆಯಾಗದೆ ಇರುವ ಹಿನ್ನೆಲೆಯಲ್ಲಿ ರೈತ ಯಂಕಪ್ಪ ಅವರು ಈ ಪ್ರಯತ್ನ ಕೈಗೊಂಡಿದ್ದಾರೆ. ಸದ್ಯ ರೈತ ಯಂಕಪ್ಪ ಜೋಡೆತ್ತುಗಳ ಸಾಧನೆಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇತ್ತ ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಮಾತ್ರ ಉತ್ತಮ ಮಳೆಯಾಗುತ್ತಿದೆ. ಉತ್ತರ ಕರ್ನಾಟಕ ಸೇರಿದಂತೆ ಇತರ ಪ್ರದೇಶಗಳಲ್ಲಿ ಮಳೆಯ ಕೊರತೆ ಕಾಡುತ್ತಿದೆ. ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎಂಬ ಮಾತಿನಂತೆ ರೈತ ಯಂಕಪ್ಪ ಅವರ ಪ್ರಯತ್ನ ಮಾತ್ರ ಸ್ಥಳೀಯವಾಗಿ ವೈರಲ್ ಆಗುತ್ತಿದೆ.
(ಸುಳಿವು: ಅಂತರ್ಜಾಲ )
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.