ಸ್ವಚ್ಛಂದ ಬದುಕಿಗೆ ಕೊರೋನಾ ಎಂಬ ಬೇಲಿ

January 25, 2021
6:39 AM
ಳೆದ ವರುಷ ಚೀನಾದ ವುಹಾನ್ ಎಂಬ ಪ್ರದೇಶದಲ್ಲಿ ಹುಟ್ಟಿಕೊಂಡ ಈ ಕೊರೋನಾವೆಂಬ ಮಾರಕ ವೈರಸ್ ಮುಂದೆ ವಿಶ್ವವಿಡೀ ವ್ಯಾಪಿಸಿ ಈ ರೀತಿ ಬದಲಾವಣೆಯನ್ನು ಉಂಟು ಮಾಡಬಹುದೆಂಬ ಕಲ್ಪನೆ ಬಹುಶಃ ಯಾರಿಗೂ ಇರಲಿಲ್ಲ. ಕೊರೋನಾ ಎಂಬ ಮಹಾಮಾರಿ ಬಂದ ಮೇಲೆ ಜನರ ಜೀವನ ಶೈಲಿ ಬದಲಾಗಿದ್ದಂತೂ ಸುಳ್ಳಲ್ಲ. ಈ ರೋಗ ಜಗತ್ತಿನ ಆರ್ಥಿಕತೆಯನ್ನೇ ಅಲ್ಲಾಡಿಸಿಬಿಟ್ಟಿತು. ಇದರಿಂದಾಗಿ ವಿಶ್ವದಾದ್ಯಂತ ಎಷ್ಟೋ ಮಹತ್ತರವಾದ ಬದಲಾವಣೆಗಳು ಉಂಟಾದವು. ತಮ್ಮ ಪಾಡಿಗೆ ಕೆಲಸ ಕಾರ್ಯಕ್ಕೆ ತೆರಳಿ ಜೀವನ ಸಾಗಿಸುತ್ತಿದ್ದ ಎಷ್ಟೋ ಮಂದಿ ಉದ್ಯೋಗವನ್ನು ಕಳೆದುಕೊಂಡರು. ಅದೆಷ್ಟೋ ಉದ್ದಿಮೆಗಳು ಹಳ್ಳ ಹಿಡಿದವು. ಕಾರ್ಮಿಕರು ಕೆಲಸ ಕಳೆದುಕೊಂಡು ಬವಣೆ ಅನುಭವಿಸಿದರು. ಪಟ್ಟಣಗಳಿಂದ ಮರಳಿ ಹಳ್ಳಿಯಲ್ಲಿ ಕೃಷಿ ಕಾಯಕವನ್ನು ಹಿಡಿದರು. ವಿದೇಶಿ ಜಾಡು ಹಿಡಿದು ವಿದೇಶಗಳಿಗೆ ತೆರಳಿದ್ದವರು ಸ್ವದೇಶಗಳಿಗೆ ಹಿಂತಿರುಗಿದರು. ಇಷ್ಟೆಲ್ಲಾಒಳಿತು ಕೆಡುಕುಗಳ ನಡುವೆ ಈಗ ಎಲ್ಲವೂ ಹಂತಹಂತವಾಗಿ ಸಹಜಸ್ಥಿತಿಗೆ ಮರಳಿ ಬರುತ್ತಿದೆ.

ಆದರೂ ಬದುಕು ಮೊದಲಿನಂತಿಲ್ಲ. ಕೊರೋನಾ ಪೂರ್ವದಲ್ಲಿ ನಿರಾಯಾಸವಾಗಿ ಓಡಾಡುತ್ತಿದ್ದ ಮನುಷ್ಯನ ಸ್ವಾತಂತ್ರ್ಯಕ್ಕೆ ಸ್ವಲ್ಪ ಕಡಿವಾಣ ಬಿದ್ದಿದೆ ಎಂದರೆ ತಪ್ಪಾಗಲಾರದು. ಹೊರಗಡೆ ತೆರಳುವಾಗ ಮಾಸ್ಕ್ ಧರಿಸುವುದನ್ನು ಅವನು ಮರೆಯುವಂತಿಲ್ಲ. ಇದರೊಂದಿಗೆ ಹಲವು ನೀತಿನಿಯಮಗಳನ್ನು ಅವನು ಪಾಲಿಸಲೇ ಬೇಕು. ಎಲ್ಲಿಗೆ ತೆರಳುವುದಿದ್ದರೂ ಮನದಲ್ಲಿ ಕೊರೋನಾದ ಆತಂಕ ಇರುವುದಂತೂ ದಿಟ. ಕೊರೋನಾ ಎಂಬ ಪದ ಮಾನವನ ಸಹಜ ಜೀವನಕ್ಕೆ ಅಡ್ಡಿಯಾಗಿದೆ. ಈ ಮಾರಕ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಯಾರೇ ಹೇಳಿದರೂ ಪುನಃ ಹೊಸ ರೂಪದಲ್ಲಿ ಬಂದು ಕಾಡುತ್ತಿದೆ. ಎಲ್ಲೇ ಹೋದರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ , ಮಾಸ್ಕ್ ಧರಿಸುವಿಕೆ ಹೀಗೆ ಅನೇಕ ನಿಯಮಗಳು ಮಾನವನ ಸ್ವಚ್ಛಂದ ಬದುಕಿಗೆ ಬೇಲಿ ಹಾಕಿರುವುದಂತೂ ಸುಳ್ಳಲ್ಲ. ಆದರೂ ನಮ್ಮ ಸುರಕ್ಷತೆಯ ದೃಷ್ಟಿಯಿಂದ ಇವೆಲ್ಲವನ್ನೂ ನಾವು ಪಾಲಿಸಲೇಬೇಕಾಗಿದೆ. ಕೊರೋನಾ ನಿವಾರಣೆಗೆಂದು ಬಂದಿರುವ ಲಸಿಕೆ ಈ ಕೊರೋನಾ ಶಕೆ ಅಂತ್ಯಗೊಳಿಸಲಿ ಎಂಬುದೇ ಎಲ್ಲರ ಆಶಯ. ಇವೆಲ್ಲಾ ಸರಿಹೋಗಲು ಕಾಲಾವಕಾಶದ ಅಗತ್ಯವಂತೂ ಇದ್ದೇ ಇದೆ. ಹೀಗಾಗಿ ಅಲ್ಲಿಯವರೆಗೂ ಕಾಯುವುದೊಂದೇ ಮಾನವರಿಗೆ ಉಳಿದಿರುವ ದಾರಿ.

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹೊಸರುಚಿ | ಎಳೆಯ ಹಲಸಿನ ಕಾಯಿ ಬಜ್ಜಿ – ಮನೆಯಲ್ಲೇ ಸವಿಯುವ ಕ್ರಿಸ್ಪಿ ಸ್ನ್ಯಾಕ್
March 28, 2026
9:12 AM
by: ದ ರೂರಲ್ ಮಿರರ್.ಕಾಂ
ಸಂಸ್ಥೆಯ ನಿಜವಾದ ಶಕ್ತಿ : ಮಾನವ ಸಂಪನ್ಮೂಲವೇ ಯಶಸ್ಸಿನ ಮೂಲಾಧಾರ
March 27, 2026
2:05 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಎಳೆಯ ಹಲಸಿನ ಕಾಯಿ ರೋಲ್ – ಕ್ರಿಸ್ಪಿ ಟೀ ಟೈಮ್ ಸ್ನ್ಯಾಕ್
March 21, 2026
5:00 PM
by: ದಿವ್ಯ ಮಹೇಶ್
ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆ : ಯುವಜನತೆಗೆ ಕಾಲದ ಕರೆಯೇ?
March 20, 2026
8:07 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror