ಕೊರೋನಾ ಅಬ್ಬರ | ಇಂದು ಸಂಜೆಯ ನಂತರ ಕಠಿಣ ಕ್ರಮದತ್ತ ಸರಕಾರ ಚಿಂತನೆ ?

April 20, 2021
3:21 PM
 ರಾಜ್ಯದಲ್ಲಿ ಕೊರೋನಾ ಅಬ್ಬರ ಹೆಚ್ಚುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ರಣಕೇಕೆ ಹಾಕುತ್ತಿದೆ. ಕೋವಿಡ್‌ ಸೋಂಕಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ಇಂದು ಸಂಜೆಯ ನಂತರ ರಾಜ್ಯದಲ್ಲಿ  ಕಠಿಣ ಕ್ರಮಗಳು ಜಾರಿಯಾಗುವ ಸೂಚನೆಯನ್ನು ಸರಕಾರ ನೀಡಿದೆ. 

ರಾಜ್ಯದಲ್ಲಿನ ಕೊರೋನಾ ಸ್ಥಿತಿಗತಿಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಕಂದಾಯ ಸಚಿವ ಅಶೋಕ್‌, ರಾಜ್ಯಪಾಲರು ಇಂದು ಸಂಜೆ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು ಸೇರಿದಂತೆ ಸರ್ವ ಪಕ್ಷ ನಾಯಕರೊಂದಿಗೆ ನಡೆಸುವ ಸಭೆಯ ನಂತರ ರಾಜ್ಯದಲ್ಲಿ ಕಠಿಣ ನಿಯಮಗಳು ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.

ಈಗಾಗಲೇ ಆಮ್ಲಜನಕದ ಕೊರತೆಯಾಗದಂತೆ ಸರಕಾರ ಮುನ್ನೆಚ್ಚರಿಕೆ ಕೈಗೊಂಡಿದೆ. ಯಾವ ಆಸ್ಪತ್ರೆಗಳಲ್ಲಿ ಅವಕಾಶವಿದೆಯೋ ಅಲ್ಲಿಗೆ ಆಮ್ಲಜನಕ ಕೊಡಿಸಲಾಗುವುದು. ಸಿಲಿಂಡರ್ ಗಳ ಮೂಲಕವೇ ವಿತರಿಸುವ ಮೂಲಕ ದಾಸ್ತಾನಿಗೆ ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಲಾಗುವುದು ಎಂದು ಅಶೋಕ್‌ ಹೇಳಿದ್ದಾರೆ. ಕೊರೋನಾ  ಸೋಂಕು ನಿಯಂತ್ರಿಸಲು ಎಲ್ಲರ ಸಹಕಾರ  ಅಗತ್ಯವಾಗಿದ್ದು,  ಕೋವಿಡ್ ಎರಡನೆ ಅಲೆ ತಡೆಯಲು  ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುತ್ತೇವೆ ಎಂದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದಿಲ್ಲ
May 8, 2026
7:35 AM
by: ಮಿರರ್‌ ಡೆಸ್ಕ್
ರಾಜ್ಯದ ಹಲವೆಡೆ ಮಳೆ; ಕುಕನೂರಿನಲ್ಲಿ 7 ಸೆಂ.ಮೀ ಮಳೆ
May 8, 2026
7:31 AM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 07-05-2026 | ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು : ಕರಾವಳಿ-ಮಲೆನಾಡಿನಲ್ಲಿ ಮುಂದಿನ 10 ದಿನ ಮಳೆ ಸಾಧ್ಯತೆ,
May 7, 2026
1:59 PM
by: ಸಾಯಿಶೇಖರ್ ಕರಿಕಳ
ಕೆಲವು ರಾಜ್ಯಗಳಲ್ಲಿ ಸುಡುವ ಬಿಸಿಲು, ಇನ್ನೂ ಕೆಲವು ಕಡೆ ಮಳೆ – ದೇಶಾದ್ಯಂತ ಹವಾಮಾನ ವೈಪರೀತ್ಯ
May 7, 2026
7:50 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror