ಇದಪ್ಪ ವರಸೇ ಅಂದ್ರೆ. ಕುಡಿಯೊದೇನೋ ಕುಡಿತಿರಿ.. ಹಾಗೆ ನಿಮ್ಮ ಹೆಂಡತಿ ಮಕ್ಕಳಿಗೆ ಒಂದರ್ಧ ಲೀಟರ್ ಹಾಲು ಆದ್ರೂ ತಗೊಂಡೋಗ್ರೋ ಅಂದ್ರೆ ಈ ಕುಡುಕರು ನಾವು ಕುಡಿದ್ರೆ ಸಾಕು, ಹೆಂಡತಿ ಮಕ್ಳು ಹಾಳಾಗೊಗ್ಲಿ ಅಂತಿದ್ರು. ಆದ್ರೆ ಇವಾಗ ಹಿಮಾಚಲದ ಪ್ರದೇಶದ ಸರ್ಕಾರ ಅಂಥವರಿಗೆ ಸರಿಯಾಗೆ ಬುದ್ಧಿ ಕಲಿಸಿದೆ.
ಮದ್ಯಪಾನ ಪ್ರಿಯರಿಗೆ ಶಾಕ್ ನೀಡಿರುವ ಹಿಮಾಚಲ ಪ್ರದೇಶ ಸರ್ಕಾರ ಪ್ರತಿ ಬಾಟಲ್ ಮದ್ಯದ ಮೇಲೆ 10 ರೂ. ‘ಗೋ ತೆರಿಗೆ’ ವಿಧಿಸುವ ಬಗ್ಗೆ ಬಜೆಟ್ನಲ್ಲಿ ಘೋಷಣೆ ಮಾಡಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸುರೇಶ್ ಕುಮಾರ್ ಸುಖು ಮಾರ್ಚ್ 15ರಂದು ರಾಜ್ಯ ಬಜೆಟ್ ಮಂಡನೆ ಮಾಡಿದ್ದರು. ಇದರಲ್ಲಿ ‘ಗೋ ತೆರಿಗೆ’ ವಿಧಿಸುವ ನಿರ್ಧಾರ ಪ್ರಕಟಿಸಿದ್ದಾರೆ.
ರಾಜ್ಯದ ಆರ್ಥಿಕ ಚಟುವಟಿಕೆಯಲ್ಲಿ ಜಾನುವಾರುಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಹಸು ಸಾಕಾಣಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಇದರಿಂದ ವಾರ್ಷಿಕ ನೂರು ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಗುರಿಯನ್ನು ಹಿಮಾಚಲ ಪ್ರದೇಶ ಸರ್ಕಾರ ಹೊಂದಿದೆ ಎನ್ನಲಾಗಿದೆ.
ಬಜೆಟ್ ಭಾಷಣ ಮಾಡಿದ ಸುಖು, ಈ ಮೊದಲು ಹಲವು ರಾಜ್ಯಗಳಲ್ಲಿ ಗೋ ಸಂಬಂಧಿ ತೆರಿಗೆ ಸಂಗ್ರಹಿಸಲಾಗುತ್ತದೆ. ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಚಂಡೀಗಢಗಳಲ್ಲಿ ಗೋ ತೆರಿಗೆ ಸಂಗ್ರಹಿಸಲಾಗುತ್ತಿದೆ. ಈ ರಾಜ್ಯಗಳಲ್ಲಿ ಮದ್ಯದ ಹೊರತಾಗಿ ಬೇರೆ ವಸ್ತುಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಈ ತೆರಿಗೆಯನ್ನು ಮದ್ಯದ ಮೇಲೆ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
ಇದೇ ರೀತಿ ನಮ್ಮ ರಾಜ್ಯದಲ್ಲೂ ಮಾಡಿದ್ರೆ ಒಳ್ಳೆಯದಿತ್ತು. ಹೇಗೂ ರಾಜ್ಯದ ಬೊಕ್ಕಸಕ್ಕೆ ತಮ್ಮಿಂದಾದ ಸಹಾಯ ಮಾಡ್ತಿದ್ದಾರೆ. ಹಾಗೆ ಗೋ ರಕ್ಷಣೆಗೂ ಮದ್ಯ ಪ್ರಿಯರು ಸಹಕರಿಸಿದರೆ ಗೋ ಸಂತತಿ ಉಳಿಯಬಹುದು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಧಾರಣದಿಂದ ಹೆಚ್ಚು ಮಳೆಯಾಗುತ್ತಿದೆ. ಹೆಚ್ಚು ಮಳೆಯಿಂದಾಗಿ ಜಿಲ್ಲೆಯ ಮುಳ್ಳಯ್ಯನಗಿರಿ ರಸ್ತೆಯೆ…
ದಾವಣಗೆರೆ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಜೂನ್.16 ರಿಂದ 18 ವರೆಗೆ…
ರಾಜ್ಯದಲ್ಲಿ ಮಾರಣಾಂತಿಕ ಕ್ಯಾನ್ಸರ್‌ರೋಗದಿಂದ ಬಳಲುತ್ತಿರುವ ಹಾಗೂ ಒಂದರಿಂದ ಹತ್ತನೆ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ…
ಇಂದು ವಿಶ್ವ ರಕ್ತದಾನಿಗಳ ದಿನ. ಪ್ರತಿವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ…
‘ಪನಸೋಪಾಖ್ಯಾನ’ ಪ್ರಸಂಗವು ತಾಳಮದ್ದಳೆ ರೂಪದಲ್ಲಿ ಪ್ರಸ್ತುತವಾಯಿತು. ಇದು ಕಾಲ್ಪನಿಕ ಕಥಾಭಾಗವನ್ನು ಹೊಂದಿರುವ ಪ್ರಸಂಗ.…
ಜೂನ್ 18 ರಿಂದ ಮುಂಗಾರು ಮತ್ತೆ ದುರ್ಬಲಗೊಂಡು ಮಳೆ ಕಡಿಮೆಯಾಗುವ ಸೂಚನೆಗಳಿವೆ.