ಮಣ್ಣಿನ ಫಲವತ್ತತೆಗೆ ಗೋಮೂತ್ರ ಮತ್ತು ಸಗಣಿ ಸಹಕಾರಿ: ನೀತಿ ಆಯೋಗ ಶಿಫಾರಸ್ಸು : ಸಾವಯವ ಕೃಷಿಯ ಪ್ರಾಮುಖ್ಯತೆ ಎತ್ತಿ ಹಿಡಿದ ನೀತಿ ಆಯೋಗ

March 11, 2023
3:17 PM

ಇತ್ತೀಚೆಗೆ ರಾಸಾಯನಿಕ ಕೃಷಿ ಪದ್ಧತಿಗಿಂತ ಸಾವಯವ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಹೆಚ್ಚಿನ ರೈತರಿಗೆ ಕೆಟ್ಟ ಮೇಲೆ ಬುದ್ಧಿ ಬಂದಂತಿದೆ. ಆದರೂ ನಮ್ಮ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಂಡಿದೆ. ಹೀಗೆ ಮುಂದುವರೆದರೆ ಮುಂದೊಂದು ದಿನ ಮಣ್ಣು ಮಣ್ಣಾಗಿ ಉಳಿದಿರಲ್ಲ. ಫಲವತ್ತತೆಯನ್ನು ಕಳೆದುಕೊಂಡು ನಿಸ್ತೇಜವಾಗಿ ಬಿಡುತ್ತದೆ. ಇದೀಗ ನೀತಿ ಆಯೋಗ ಈ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

 ನೀತಿ ಆಯೋಗವು ಸಾವಯವ ಹಾಗೂ ಜೈವಿಕ ರಸಗೊಬ್ಬರದ ಉತ್ಪಾದನೆ ಹಾಗೂ ಉತ್ತೇಜನದ ಜೊತೆಗೆ ಆರ್ಥಿಕ ಕಾರ್ಯಸಾಧ್ಯತೆಯ ಹೆಚ್ಚಳಕ್ಕೆ ಗೋಶಾಲೆಗಳ ಮೇಲೆ ಹೆಚ್ಚಿನ ಗಮನ’ ಎಂಬ ವರದಿಯನ್ನು ಬಿಡುಗಡೆ ಮಾಡಿದ್ದು “ಗೋಮೂತ್ರ ಹಾಗೂ ಸಗಣಿಯಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ” ಎಂದು ತಿಳಿಸಿದೆ. ಈ ಮೂಲಕ ಸಾವಯವ ಕೃಷಿಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದೆ.

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಸದಸ್ಯರನ್ನು ಒಳಗೊಂಡ 17 ಸದಸ್ಯರ ನೀತಿ ಆಯೋಗದ ಕಾರ್ಯಪಡೆಯು (NITI Aayog Task Force) ತನ್ನ ವರದಿಯಲ್ಲಿ ಭಾರತದ ಮಣ್ಣು ಸಾವಯವ ಅಂಶಗಳ ಕೊರತೆಯನ್ನು ಕಾಣುತ್ತಿದೆ. ಈ ಹಿನ್ನಲೆಯಲ್ಲಿ ನಮ್ಮ ನೆಲೆದ ಮಣ್ಣಿಗೆ ಸಾವಯವ ಅಂಶವನ್ನು ಹೆಚ್ಚಿಸುವ ಪ್ರಯತ್ನಗಳಾಗದಿದ್ದರೆ ದೇಶವು ಗಂಭೀರವಾದ ಸುಸ್ಥಿರತೆಯ ಸಮಸ್ಯೆಯನ್ನು ಕಾಣುತ್ತದೆ ಎಂದು ತಿಳಿಸಿದೆ.

ಈ ಸಮಸ್ಯೆಗೆ ಪರಿಹಾರವಾಗಿ ಹಸುವಿನ ಸಗಣಿ ಗೊಬ್ಬರದ ಬಳಕೆಯನ್ನು ಉತ್ತೇಜಿಸಬೇಕು. ಇದರಿಂದಾಗಿ ದೀರ್ಘಕಾಲ ಮಣ್ಣಿನ ಫಲವತ್ತತೆಯ ಜೊತೆಗೆ ಗೋಶಾಲೆಗಳ ಆರ್ಥಿಕತೆಯ ಸುಧಾರಣೆ, ನೈಸರ್ಗಿಕ ಕೃಷಿಗೆ ಬೆಂಬಲ ಮತ್ತು ಕೃಷಿಯ ಸುಸ್ಥಿರತೆಯನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ಹಸುವಿನ ಸಗಣಿ ಮತ್ತು ಗೋಮೂತ್ರವನ್ನು ಕೃಷಿಯಲ್ಲಿ ಸಸ್ಯ ಪೋಷಕಾಂಶಗಳ ಪೂರಕವಾಗಿ ಬಳಸಲು ಪ್ರೋತ್ಸಾಹಿಸಬೇಕು. ಅಲ್ಲದೆ, ಕೆಲವು ಅನುಪಾತದಲ್ಲಿ ಅಜೈವಿಕ ಮತ್ತು ಸಾವಯವ ಗೊಬ್ಬರವನ್ನು ಮಾರಾಟ ಮಾಡಲು ರಸಗೊಬ್ಬರ ಮಾರಾಟ ಮತ್ತು ಉತ್ಪಾದನಾ ಏಜೆನ್ಸಿಗಳನ್ನು ಕಡ್ಡಾಯಗೊಳಿಸಲು ನವೀನ ಕಾರ್ಯವಿಧಾನವನ್ನು ಜಾರಿಗೆ ತರಬೇಕಾಗಿದೆ ಎಂದು ವರದಿ ತಿಳಿಸಿದೆ.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೊಕ್ಕೋ ಬಳಿಕ ಈಗ ಕಾಳುಮೆಣಸು ಧಾರಣೆ ಏರಿಕೆ ನಿರೀಕ್ಷೆ | ಅಂತರಾಷ್ಟ್ರೀಯ ಧಾರಣೆಯೂ ಏರಿಕೆಯ ಹಾದಿಯಲ್ಲಿ | 615 ರೂಪಾಯಿ ತಲಪಿದ ಧಾರಣೆ | ಏರಿಕೆಗೆ ಕಾರಣವೇನು..?
May 21, 2024
3:04 PM
by: ದ ರೂರಲ್ ಮಿರರ್.ಕಾಂ
ರಬ್ಬರ್‌, ಟಯರ್‌ ಆಮದಿಗೆ ಅನುಮತಿ ನೀಡಬಾರದು | ರಬ್ಬರ್‌ ಉದ್ಯಮ, ರಬ್ಬರ್ ಬೆಳೆಗಾರರನ್ನು ಬೆಂಬಲಿಸಬಹುದಾದ ಕ್ರಮಗಳು |
May 21, 2024
1:40 PM
by: ದ ರೂರಲ್ ಮಿರರ್.ಕಾಂ
Karnataka Weather | 21-05-2024 | ರಾಜ್ಯದ ಹಲವು ಕಡೆ ಮುಂದುವರಿದ ಮಳೆ | ಮೇ.23 ನಂತರ ಮಳೆ ಕಡಿಮೆ |
May 21, 2024
1:04 PM
by: ಸಾಯಿಶೇಖರ್ ಕರಿಕಳ
ಬೆವರುವುದು ಕಿರಿಕಿರಿ ಎನಿಸಿದರೂ ಬೆವರಿನಿಂದಾಗುವ ಪ್ರಯೋಜನಗಳನ್ನು ತಿಳಿದರೆ ಅಚ್ಚರಿಪಡುತ್ತೀರಿ..!
May 20, 2024
9:20 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror