ವಿಜ್ಞಾನಿಗಳ ಕೃಷಿ ಸಲಹೆಗಳ ಜೊತೆಗೆ ಕೃಷಿಯಲ್ಲಿ ಕೃಷಿಕರ ಅನುಭವಗಳು ಕೂಡಾ ಮಹತ್ವ ಪಡೆಯುತ್ತವೆ. ಹೀಗಾಗಿ ಕೃಷಿಕರು ಮತ್ತು ವಿಜ್ಞಾನಿಗಳ ಸಂವಾದಗಳು ನಡೆಯಬೇಕು. ಆಗ ಇನ್ನಷ್ಟು ಕೆಲಸ ನಡೆಯಲು ಸಾಧ್ಯ ಎಂದು ಕೃಷಿ ವಿಜ್ಞಾನಿ ಡಾ.ರವಿ ಭಟ್ ಹೇಳಿದರು.
ಅವರು ಶನಿವಾರ ವಿಟ್ಲದ ಸಿಪಿಸಿಆರ್ ಐ ಹಾಗೂ ಬಂಟ್ವಾಳ ತೋಟಗಾರಿಕಾ ಇಲಾಖೆಯ ವತಿಯಿಂದ ಸಿಪಿಸಿಆರ್ ಐ ವಠಾರದಲ್ಲಿ ನಡೆದ ಅಡಿಕೆಯಲ್ಲಿ ಸಸ್ಯ ಆರೋಗ್ಯ ನಿರ್ವಹಣೆಯ ಕಾರ್ಯಾಗಾರದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಅಡಿಕೆ ಬೆಳೆಯಲ್ಲಿ ಸಸಿಗಳ ಆರೋಗ್ಯ ನಿರ್ವಹಣೆ ಅಗತ್ಯವಾಗಿದೆ. ಅಡಿಕೆ ಹಳದಿ ಎಲೆರೋಗ ಸೇರಿದಂತೆ ಇತರ ರೋಗಗಳ ಅಧ್ಯಯನ ಹಾಗೂ ಪರಿಹಾರಕ್ಕೆ ಸಂಬಂಧಿಸಿದಂತೆ ಅಧ್ಯಯನ, ಪರಿಹಾರದ ಬಗ್ಗೆ ಪ್ರಯತ್ನ ನಡೆಯುತ್ತಿದೆ. ಮುಂದೆ ಕೃಷಿಕರು ಹಾಗೂ ವಿಜ್ಞಾನಿಗಳ ನಡುವೆ ಸಂವಾದಕ್ಕೆ ಪ್ರತೀ ತಿಂಗಳ ಸಭೆ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ, ಅಡಿಕೆ ಕೃಷಿಯಲ್ಲಿ ಇಂದು ತಂತ್ರಜ್ಞಾನಗಳ ಬಳಕೆ ಅನಿವಾರ್ಯವಾಗಿದೆ. ತಾಂತ್ರಿಕ ಸಲಹೆ ಮೂಲಕವೇ ಯುವ ಕೃಷಿಕರು ಅಡಿಕೆ ಬೆಳೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಳೆಗಾರರು ಹಳದಿ ಎಲೆರೋಗ ಹಾಗೂ ಕೊಳೆರೋಗಕ್ಕೆ ಸಂಬಂಧಿಸಿದಂತೆ ಹೆಚ್ಚು ಅಧ್ಯಯನ ಹಾಗೂ ಪರಿಹಾರದ ನಿರೀಕ್ಷೆಯನ್ನು ಬೆಳೆಗಾರರು ಹೊಂದಿದ್ದಾರೆ ಎಂದರು.
ಅತಿಥಿಗಳಾಗಿ ಮಾತನಾಡಿದ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ, ವಿಜ್ಞಾನಿ ಹಾಗೂ ಕೃಷಿಕ ವಿಜ್ಞಾನಿಗಳ ಸಂವಹನ ನಿರಂತರವಾಗಿ ನಡೆಯಬೇಕು ಎಂದರು.
ಅತಿಥಿಯಾಗಿದ್ದ ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮಾತನಾಡಿ, ಅಡಿಕೆ ಹಳದಿ ಎಲೆರೋಗದ ಗಂಭೀರತೆಯನ್ನು ಹಾಗೂ ಕೃಷಿಕರ ಸಮಸ್ಯೆಯ ಬಗ್ಗೆ ವಿವರಿಸಿದರು.
ಬಂಟ್ವಾಳ ತೋಟಗಾರಿಕಾ ಇಲಾಖಾ ಹಿರಿಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ, ಸಿಪಿಸಿಆರ್ ಐ ವಿಜ್ಞಾನಿ ಗಳಾದ ಡಾ.ವಿನಾಯಕ , ಡಾ.ತುಂಬನ್ ಉಪಸ್ಥಿತರಿದ್ದರು.
ಇದೇ ವೇಳೆ ವಿಜ್ಞಾನಿ ಡಾ.ಥವಾಪ್ರಕಾಶ್ ಪಾಂಡ್ಯನ್ ಅಭಿವೃದ್ಧಿಪಡಿಸಿದ ಟ್ರೈಕೋಡರ್ಮಾ ಬಿಡುಗಡೆಗೊಳಿಸಲಾಯಿತು.
ವಿಟ್ಲ ಸಿಪಿಸಿಆರ್ ಐ ನಿರ್ದೇಶಕ ಡಾ.ಸಿ ಟಿ ಜೋಸ್ ಪ್ರಸ್ತಾವನೆಗೈದರು. ವಿಜ್ಞಾನಿ ಡಾ.ನಾಗರಾಜ್ ಸ್ವಾಗತಿಸಿದರು. ವಿಜ್ಞಾನಿ ಡಾ.ಭವಿಷ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…