Advertisement
MIRROR FOCUS

ಜೂ.30 ಬೆಳೆ ವಿಮೆ ಮಾಡಿಸಲು ಕೊನೆಯ ದಿನ | ಸಹಕಾರಿ ಸಂಘಗಳಲ್ಲಿ ಹೆಚ್ಚಿದ ಒತ್ತಡ | ಸಹಕಾರಿ ಸಂಘಗಳಿಗೆ 15 ದಿನಗಳ ಕಾಲಾವಕಾಶ |

Share

ಈಗ ಬೆಳೆವಿಮೆಯ ತುರ್ತಿನಲ್ಲಿ ಸಹಕಾರಿ ಸಂಘಗಳು ಕೆಲಸ ಮಾಡುತ್ತಿವೆ. ತಡರಾತ್ರಿಯವರೆಗೂ ಇದೇ ಕೆಲಸದಲ್ಲಿ  ಸಿಬಂದಿಗಳು ನಿರತರಾಗಿದ್ದಾರೆ. ಬೆಳೆಗಾರರ, ಕೃಷಿಕರ ಹಿತಕ್ಕಾಗಿ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಲ್ಲಿ  ಸಿಬಂದಿಗಳು ಕೆಲಸ ಮಾಡುತ್ತಿದ್ದಾರೆ. ಜೂ.30  ಬೆಳೆ ವಿಮೆ ಮಾಡಿಸಲು ಕೊನೆಯ ದಿನವಾದರೆ ಸಹಕಾರಿ ಸಂಘಗಳು ಮುಂದಿನ  15 ದಿನಗಳ ಒಳಗಾಗಿ ವೆಬ್‌ ಸೈಟ್‌ ಗೆ ಅಪ್ ಲೋಡ್‌ ಮಾಡಲು ಕಾಲಾವಕಾಶ ಇದೆ.

ಇಂತಹದ್ದೊಂದು ಮಾಹಿತಿ ಕ್ಲಬ್‌ ಹೌಸ್‌ ಸಂವಾದಲ್ಲಿ  ಶುಕ್ರವಾರ ಲಭ್ಯವಾಗಿದೆ.

Agriculuturist  ಬಳಗದ ವತಿಯಿಂದ ಕಳೆದ ಕೆಲವು ದಿನಗಳಿಂದ ಕ್ಲಬ್‌ ಹೌಸ್‌ ನಲ್ಲಿ ಕೃಷಿ ವಿಚಾರವಾಗಿ ವಿಚಾರವಿನಿಮಯ ನಡೆಯುತ್ತಿದೆ. ಇದಕ್ಕೆ ಆಯಾ ಕ್ಷೇತ್ರದ ಪ್ರಮುಖರು ಮಾಹಿತಿ ನೀಡುತ್ತಿದ್ದಾರೆ. ಶುಕ್ರವಾರ ಬೆಳೆವಿಮಯ ಅಗತ್ಯತೆ, ಸಮಸ್ಯೆಗಳು ಹಾಗೂ ಪರಿಹಾರಗಳ ಬಗ್ಗೆ ಸಂವಾದ ನಡೆಯಿತು.ವಿವಿಧ ಸಹಕಾರಿ ಸಂಘಗಳ ಸಿಇಒ ಹಾಗೂ ಅಧ್ಯಕ್ಷರುಗಳು , ನಿರ್ದೇಶಕರು , ಸಿ ಎಸ್‌ ಸಿ ಕೇಂದ್ರದ ಪ್ರಮುಖರು, ಕೃಷಿಕರು ಹಾಗೂ ತೋಟಗಾರಿಕಾ ಇಲಾಖೆಯ ಜಿಲ್ಲಾ ಅಧಿಕಾರಿ ಭಾಗವಹಿಸಿದ್ದರು.

ಬೆಳೆ ವಿಮೆಯ ಅಗತ್ಯತೆಯ ಬಗ್ಗೆ ತೋಟಗಾರಿಕಾ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರವೀಣ್ ಅವರು  ಮಾಹಿತಿ ನೀಡಿದರು. ಈ ಸಂದರ್ಭ ಸಹಕಾರಿ ಸಂಘಗಳಲ್ಲಿನ ಸಮಸ್ಯೆಯ ಬಗ್ಗೆಯೂ ಮಾತುಕತೆ ನಡೆಸಲಾಯಿತು.

ಸರಕಾರ ಇದೇ ಜೂನ್ 30 ರ ಒಳಗಾಗಿ ಬೆಳೆ ವಿಮೆ ಮಾಡಿಸಬೇಕೆಂದು ಗಡುವು ನೀಡಿರುತ್ತದೆ .ಇದರ ಜೊತೆ ಎಲ್ಲಾ ಬೆಳೆ ವಿಮೆ ಪಾವತಿ ಯನ್ನು ಕೂಡ ಸಂಬಂಧಪಟ್ಟ ವಿಮಾ ಕಂಪೆನಿಗೆ  ನಮ್ಮ ಸಂಘದಿಂದ ಜೂನ್ 30 ರ ಒಳಗೆ ಅಪ್ ಲೋಡ್ ಮಾಡಬೇಕೆಂದು ಕೂಡಾ ಗಡುವು ನೀಡಿದೆ, ಆದರೆ ಈ ಬಾರಿಯ ನಿಯಮದಂತೆ ಪ್ರತೀ ಸರ್ವೆ ನಂಬರ್‌ ದಾಖಲು ಮಾಡಬೇಕಾದ್ದರಿಂದ ತಡವಾಗುತ್ತಿದೆ, ನೆಟ್ವರ್ಕ್‌ ಸಮಸ್ಯೆ ಕೂಡಾ ಇರುವುರಿಂದ  ಅಪ್‌ ಲೋಡ್‌ ಆಗದೇ ಇರುವುದು ಗೊಂದಲಕ್ಕೆ ಕಾರಣವಾಗಿತ್ತು.

ಇಂತಹ ಯಾವುದೇ ಗೊಂದಲಗಳು ಅಗತ್ಯವಿಲ್ಲ, ಸಹಕಾರಿ ಸಂಘಗಳು  ಜೂನ್ 30 ರ ಒಳಗೆ ಬೆಳೆ ವಿಮೆ ಅರ್ಜಿ ಪಡೆದು ಮುಂದಿನ  15  ದಿನಗಳ ಒಳಗಾಗಿ ಅಪ್‌ ಲೋಡ್‌ ಮಾಡಬಹುದಾಗಿದೆ ಎಂದು ತೋಟಗಾರಿಕಾ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಾಶ್‌ ಅವರು ಮಾಹಿತಿ ನೀಡಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ – ಆಲಿಕಲ್ಲು ಮಳೆಯಿಂದ ರೈತರ ಬೆಳೆ ನಷ್ಟ

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…

1 hour ago

ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!

ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…

19 hours ago

ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಮತ್ತು ನಾಗರಿಕ ಸಂಸ್ಕೃತಿ – ಸಮಾಜದ ನಿಜವಾದ ಅಳತೆ

ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಸಮಾಜದ ನಿಜವಾದ ಸಂಸ್ಕೃತಿಯನ್ನು ತೋರಿಸುತ್ತದೆ. ಸಣ್ಣ ಸಣ್ಣ ಸರಿಯಾದ…

23 hours ago

ಗುಜ್ಜೆ-ಕಡಲೆ ಗಸಿ – ಸರಳ ಪದಾರ್ಥಗಳಿಂದ ಸೊಗಸಾದ ಸಾಂಪ್ರದಾಯಿಕ ಸವಿರುಚಿ!

ಗುಜ್ಜೆ ಮತ್ತು ಕಡಲೆ ಬಳಸಿ ತಯಾರಿಸುವ ಸಾಂಪ್ರದಾಯಿಕ ಗಸಿ ರುಚಿಕರ ಆಹಾರ. ಚಪಾತಿ…

2 days ago

ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ

ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…

2 days ago