ರೈತ ಬೆಳೆದ ಬೆಳೆಯ ಫಸಲು ಕೈಗೆ ಬರುವವರೆಗೆ ಅದೆಷ್ಟೋ ನಷ್ಟಗಳನ್ನು ಅನುಭವಿಸುತ್ತಾನೆ. ಮಳೆ ಜಾಸ್ತಿಯಾದರೆ ಕೊಚ್ಚಿ ಕೊಂಡು ಹೋಗುತ್ತೆ, ಮಳೆ ಬಂದಿಲ್ಲಾಂದ್ರೆ ಬೆಳೆ ಒಣಗಿ ಹೋಗುತ್ತೆ. ಇದಲ್ಲದೆ ಕಾಡಂಚಿನ ಕೃಷಿ ಭೂಮಿಗೆ ಪ್ರಾಣಿಗಳ ಕಾಟ.. ಅದರಲ್ಲೂ ಆನೆ, ಕಾಡುಕೋಣ, ಹಂದಿ, ನವಿಲು, ಜಿಂಕೆ ಹೀಗೆ ಒಂದಾ ಎರಡಾ..? ತಮಗೆ ಬೇಕಾದ್ದನ್ನು ತಿಂದು ಬೆಳೆ ಹಾನಿ ಮಾಡಿ ಹೋಗುತ್ತವೆ. ಇದರ ಮುಂದೆ ರೈತ, ಏನು ಮಾಡಲಾಗದೆ ಕೈಕಟ್ಟಿ ಕೂರುವ ಪರಿಸ್ಥಿತಿ.
ಕೆಲವೊಂದು ಸಮಸ್ಯೆಗಳಿಗೆ ಸರ್ಕಾರ ಬೆಳೆವಿಮೆ ನೀಡುತಿತ್ತು. ಆದರೆ ಅದು ಅರೆ ಕಾಸಿನ ಮಜ್ಜಿಗೆ. ಇದೀಗ ರೈತರಿಗೆ ನಷ್ಟ ಆಗದ ರೀತಿಯಲ್ಲಿ ಬೆಳೆಗಳಿಗೆ ಬೆಳೆವಿಮೆ ನೀಡಲು ನಿರ್ಧರರಿಸಿದೆ. ಕಾಡು ಪ್ರಾಣಿಗಳ ಕಾಟದಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೂ ಪರಿಹಾರ ನೀಡಲು ಸರ್ಕಾರ ಮುಂದೆ ಬಂದಿದೆ.
ಕಾಡು ಪ್ರಾಣಿಗಳು ಬೆಳೆ ನಾಶ ಮಾಡಿದರೆ ಸರ್ಕಾರ ನೀಡುತ್ತೆ ಪರಿಹಾರ :
ಕಾಡು ಪ್ರಾಣಿಗಳಿಂದ ಉಂಟಾದ ಬೆಳೆ ಹಾನಿಗೆ ನೀಡುವ ಪರಿಹಾರದ ಗರಿಷ್ಠ ಮೊತ್ತವನ್ನು 50 ಸಾವಿರ ರೂಗಳಿಂದ 1 ಲಕ್ಷಕ್ಕೆ ಏರಿಸಿ ಸರ್ಕಾರ ಆದೇಶಿಸಿದೆ. ಈ ಮೂಲಕ ರೈತರ ಬಹುಕಾಲದ ಬೇಡಿಕೆಗೆ ಮನ್ನಣೆ ಸಿಕ್ಕಾಂತಾಗಿದೆ. ವನ್ಯ ಜೀವಿಗಳಿಂದ ಉಂಟಾಗೋ ಜಾನುವಾರುಗಳ ಪ್ರಾಣ ಹಾನಿ ಮತ್ತು ಬೆಳೆ ಹಾನಿಗೆ ಪರಿಹಾರ ಹೆಚ್ಚಿಸುವ ಮೂಲಕ ಸರ್ಕಾರ ಮತ್ತು ಅರಣ್ಯ ಇಲಾಖೆ ಗ್ರಾಮೀಣ ಜನರಿಗೆ ನೆರವಾಗಿದೆ.
ಅಡಿಕೆ ತೆಂಗು, ಮಾವು, ಭತ್ತ, ರಾಗಿ, ನೆಲಗಡಲೆ, ಟೊಮ್ಯಾಟೋ, ಹಿಪ್ಪು ನೇರಳೆ ಬೆಳೆಗಳ ಪರಿಹಾರ ಮೊತ್ತವನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಅದೇ ರೀತಿ ಅಧಿಕಾರಿಗಳ ಸರ್ವೆ ಮುಖಾಂತರ ಸರ್ಕಾರದ ಗಮನಕ್ಕೆ ತಂದು ರೈತರಿಗೆ ನಷ್ಟದ ಪರಿಹಾರ ನೀಡಲು ಮುಂದಾಗಿದೆ. ವನ್ಯ ಜೀವಿಗಳ ಕಾಟದಿಂದ ಬೇಸತ್ತಿದ್ದ ರೈತರಿಗೆ ಸರ್ಕಾರದ ಈ ಯೋಜನೆ ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ.
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…
ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…