Advertisement
ವೆದರ್ ಮಿರರ್

ಹವಾಮಾನ ವರದಿ | 16-11-2026 | ಅಕ್ವಾನ್ ಚಂಡಮಾರುತ ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ

Share

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ನವೆಂಬರ್ 17ರಂದು ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಕಾಸರಗೋಡು ಸೇರಿದಂತೆ ಕರಾವಳಿ ಭಾಗದಲ್ಲಿಯೂ ಮಳೆಯ ಲಕ್ಷಣಗಳು ಕಡಿಮೆ ಇದ್ದು, ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಪ್ರಬಲ ವಾಯುಭಾರ ಕುಸಿತದ ಪ್ರಭಾವದಿಂದ ರಾಜ್ಯದ ಕೆಲವು ಭಾಗಗಳಲ್ಲಿ ಚಳಿಯ ಪ್ರಮಾಣ ಸ್ವಲ್ಪ ಕಡಿಮೆಯಾಗಬಹುದು.

ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಪ್ರಬಲ ವಾಯುಭಾರ ಕುಸಿತವು ಮುಂದಿನ ಎರಡು ದಿನಗಳಲ್ಲಿ ಅಕ್ವಾನ್ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ. ಪ್ರಸ್ತುತ ಮುನ್ಸೂಚನೆಯ ಪ್ರಕಾರ, ಈ ವ್ಯವಸ್ಥೆಯು ನವೆಂಬರ್ 19ರ ಸುಮಾರಿಗೆ ಆಂಧ್ರಪ್ರದೇಶದ ವಿಶಾಖಪಟ್ಟಣ ಮತ್ತು ಕಾಕಿನಾಡ ನಡುವಿನ ಕರಾವಳಿ ಭಾಗದಲ್ಲಿ ಭೂ ಪ್ರವೇಶಿಸುವ ಸಾಧ್ಯತೆಗಳಿವೆ. ಬಳಿಕ ಉತ್ತರಾಭಿಮುಖವಾಗಿ ಚಲಿಸುವ ಸಾಧ್ಯತೆ ಇರುವುದರಿಂದ ಕರ್ನಾಟಕದ ಮೇಲೆ ಇದರ ನೇರ ಮಳೆಯ ಪ್ರಭಾವ ಕಡಿಮೆ ಇರಬಹುದು.

ಚಂಡಮಾರುತದ ಚಲನೆಯ ಹಾದಿ ಮತ್ತು ತೀವ್ರತೆಯನ್ನು ಅವಲಂಬಿಸಿ ಹವಾಮಾನದಲ್ಲಿ ಬದಲಾವಣೆಗಳಾಗಬಹುದು. ಹೀಗಾಗಿ ಮುಂದಿನ ದಿನಗಳ ಮುನ್ಸೂಚನೆಯನ್ನು ಗಮನಿಸುವುದು ಅಗತ್ಯ.

ನವೆಂಬರ್ 22ರ ಬಳಿಕ ಚಳಿಯಲ್ಲಿ ಬದಲಾವಣೆ :  ಅಕ್ವಾನ್ ಚಂಡಮಾರುತ ಶಿಥಿಲಗೊಂಡ ಬಳಿಕ ನವೆಂಬರ್ 22ರ ನಂತರ ಉತ್ತರ ಭಾರತದ ಕಡೆಯಿಂದ ಬೀಸುವ ಗಾಳಿಯ ಪ್ರಭಾವ ಕಡಿಮೆಯಾಗಿ, ಬಂಗಾಳಕೊಲ್ಲಿಯ ಕಡೆಯಿಂದ ಬೀಸುವ ಗಾಳಿಯ ಪ್ರಭಾವ ಹೆಚ್ಚಾಗುವ ಲಕ್ಷಣಗಳಿವೆ.

ಇದರಿಂದ ದಕ್ಷಿಣ ಒಳನಾಡು, ಕರಾವಳಿಯ ಉತ್ತರ ಕನ್ನಡ ಹೊರತುಪಡಿಸಿದ ಜಿಲ್ಲೆಗಳು ಹಾಗೂ ಮಲೆನಾಡು ಭಾಗಗಳಲ್ಲಿ ಚಳಿಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡದಲ್ಲಿ ಇದೇ ರೀತಿಯ ಬದಲಾವಣೆ ಕಂಡುಬರುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ.

ರೈತರು ಗಮನಿಸಬೇಕಾದ ಅಂಶ :  ಸದ್ಯದ ಮುನ್ಸೂಚನೆಯಂತೆ ಕರ್ನಾಟಕದಲ್ಲಿ ವ್ಯಾಪಕ ಮಳೆಯ ನಿರೀಕ್ಷೆ ಕಡಿಮೆ ಇದೆ. ಹೀಗಾಗಿ ಮಳೆಯ ನಿರೀಕ್ಷೆಯಲ್ಲಿರುವ ರೈತರು ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕೃಷಿ ಚಟುವಟಿಕೆಗಳನ್ನು ಯೋಜಿಸಬೇಕು. ಚಂಡಮಾರುತದ ಪಥದಲ್ಲಿ ಬದಲಾವಣೆ ಉಂಟಾದರೆ ರಾಜ್ಯದ ಹವಾಮಾನದಲ್ಲಿಯೂ ವ್ಯತ್ಯಾಸವಾಗಬಹುದು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

Published by
ಸಾಯಿಶೇಖರ್ ಕರಿಕಳ

Recent Posts

ಹೆಚ್ಚಿನ ಇಳುವರಿಗಷ್ಟೇ ಆದ್ಯತೆ ಬೇಡ, ಪೋಷಕಾಂಶ ಸಮರ್ಥ ಬೆಳೆಗಳತ್ತ ಗಮನ ಹರಿಸಿ

ಕೃಷಿಯಲ್ಲಿ ಹೆಚ್ಚಿನ ಇಳುವರಿಗಷ್ಟೇ ಆದ್ಯತೆ ನೀಡುವ ಬದಲು ಕಡಿಮೆ ಪೋಷಕಾಂಶ ಬಳಕೆಯಲ್ಲಿ ಉತ್ತಮ…

4 hours ago

ರಬ್ಬರ್ ಬೆಲೆಯಲ್ಲಿ ಮತ್ತೆ ಇಳಿಕೆ : 15 ದಿನಗಳಲ್ಲಿ ಕೆ.ಜಿಗೆ ₹17 ಕುಸಿತ

ನವೆಂಬರ್ ಮೊದಲ ವಾರದಲ್ಲಿ ಕೆ.ಜಿಗೆ ₹300 ದಾಟಿದ್ದ ರಬ್ಬರ್ ಧಾರಣೆ ನವೆಂಬರ್ 16ರಂದು…

5 hours ago

ನವೆಂಬರ್ 20 ರಿಂದ 22 ರವರೆಗೆ ಉತ್ತರ ಕರ್ನಾಟಕದ ಕೆಲವೆಡೆ ಮಳೆ ಮುನ್ಸೂಚನೆ

ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನ ಒಣಹವೆ ಮುಂದುವರಿಯಲಿದ್ದು, ಬಿಸಿಲು, ಮೋಡ ಕವಿದ ವಾತಾವರಣ…

5 hours ago

ಹವಾಮಾನ ವರದಿ | 15-11-2026 | ಅಕ್ವಾನ್ ಚಂಡಮಾರುತದ ಪಥ ಇನ್ನೂ ನಿಗೂಢ

ಕರ್ನಾಟಕದಾದ್ಯಂತ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯಲಿದ್ದು, ಚಳಿಯ ಪ್ರಮಾಣ ಕಡಿಮೆಯಾಗುವ…

23 hours ago

ಮುಂದಿನ ಬೇಸಿಗೆಗೆ ಈಗಿನಿಂದಲೇ ಸಿದ್ಧರಾಗಿ – ನೀರು ಉಳಿಸದಿದ್ದರೆ ತೋಟ ಉಳಿಸುವುದು ಕಷ್ಟವಾಗಬಹುದು

2026ರ ಎಲ್‌ನಿನೋ ಪರಿಣಾಮದಿಂದ ಮುಂಗಾರು ಮತ್ತು ಹಿಂಗಾರು ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ಮೇ 2027ರವರೆಗೆ…

2 days ago

ಅಸ್ಸಾಂನಲ್ಲಿ ಅಡಿಕೆ ಸಾಗಣೆಗೆ ಸಮಸ್ಯೆ…? ಅಕ್ರಮ ಅಡಿಕೆ ಸಾಗಾಟವೇ ಈಗ ಸಂಕಷ್ಟವೇ…?

ಅಸ್ಸಾಂನ ಬರಾಕ್ ಕಣಿವೆಯ ಕಟಿಗೋರಾ ಭಾಗದಲ್ಲಿ ಸ್ಥಳೀಯ ಅಡಿಕೆ ಸಾಗಣೆಗೆ ಸಿಂಡಿಕೇಟ್ ಅಡ್ಡಿಪಡಿಸುತ್ತಿದೆ…

2 days ago