ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರು ನೀಡಿದ ಸಂದೇಶವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿ ಅನುಸರಿಸುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಲು ಸಾಧ್ಯ ಎಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಕರ್ನಾಟಕ ಉತ್ತರದ ರಾಜ್ಯಾಧ್ಯಕ್ಷರಾದ ಎಂ ಪದ್ಮನಾಭ ಪೈ ಅವರು ಹೇಳಿದರು.
ಅವರು ದೈಗೋಳಿಯ ಸಾಯಿನಿಕೇತನ ಸೇವಾಶ್ರಮದ ನೂತನ ಪುನರ್ವಸತಿ ಕೇಂದ್ರ ದ ಕಟ್ಟಡದ ಶಿಲಾನ್ಯಾಸದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಶ್ರೀ ಸಾಯಿ ಸೇವಾ ಪ್ರತಿಷ್ಠಾನ ಈ ಆಶ್ರಮದ ಮೂಲಕ ನಡೆಸುತ್ತಿರುವ ನಿಸ್ವಾರ್ಥ ಸೇವೆ ಅತ್ಯಂತ ಶ್ಲಾಘನೀಯ. 250 ಕ್ಕೂ ಮೀರಿದ ನಿರ್ಗತಿಕ ಮಹಿಳೆಯರಿಗೆ ಆಶ್ರಯ ನೀಡುವ ಈ ನೂತನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸುವುದರ ಮೂಲಕ ಭಗವಂತನ ಕೃಪಾಶೀರ್ವಾದ ಗಳಿಸೋಣ ಎಂದು ವಿವರಿಸಿದರು.
ವೈದಿಕ ವಿದ್ವಾಂಸರಾದ ವೇದಮೂರ್ತಿ ಬೋಳಂತಕೋಡಿ ರಾಮಭಟ್ಟರು ಶಿಲಾನ್ಯಾಸವನ್ನು ವೇದೋಕ್ತವಾಗಿ ನಡೆಸಿಕೊಟ್ಟು, ಎಲ್ಲರ ಸಹಕಾರದಿಂದ ಅತಿ ಶೀಘ್ರದಲ್ಲಿ ಈ ಕಟ್ಟಡ ನಿರ್ಮಾಣವಾಗಿ ಲೋಕಾರ್ಪಣೆ ಆಗಲಿ ಎಂದು ಆಶೀರ್ವದಿಸಿದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಇನ್ಫೋಸಿಸ್ ನ ಮಂಗಳೂರು ವಿಭಾಗದ ಅಧ್ಯಕ್ಷ ವಾಸುದೇವ ಕಾಮತ್, ಸೇವಾಶ್ರಮದ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿ ,ಸಮಾಜದಲ್ಲಿ ಮಾನಸಿಕ ರೋಗಗಳಿಂದ ಬೀದಿಗೆ ಬೀಳಲ್ಪಟ್ಟ ರೋಗಿಗಳನ್ನು ತಂದು ಸಲಹಿ ಗುಣಮುಖರನ್ನಾಗಿಸಿ ಪುನಃ ಮನೆಗೆ ಕಳಿಸುವ ವ್ಯವಸ್ಥೆ ಹೊಂದಿದ ಇಂತಹ ಸಂಸ್ಥೆ ಅತಿ ವಿರಳ. ಈ ಕಾರ್ಯಕ್ಕೆ ನಾವೆಲ್ಲರೂ ಭಾಗಿಗಳಾಗೋಣ ಎಂದರು.ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲು ಪೊಲೀಸ್…
ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…
ರೈತರಿಗೆ ನ್ಯಾಯ ಕೊಡಲು MSPಗೆ ವೈಜ್ಞಾನಿಕ ಆಧಾರ ಅಗತ್ಯ ಎಂದು ಕೋಡಿಹಳ್ಳಿ ಚಂದ್ರಶೇಖರ್…
ವಿಟ್ಲದಲ್ಲಿ ₹12 ಕೋಟಿ ವೆಚ್ಚದ ಕ್ಯಾಂಪ್ಕೊ ನೂತನ ಕಟ್ಟಡಕ್ಕೆ ಮಾರ್ಚ್ 27ರಂದು ಶಂಕುಸ್ಥಾಪನೆ…
ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…
26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…