ದೀಪಾವಳಿ | ಮಂಗಳೂರಿನಲ್ಲಿ ಸೌಹಾರ್ದ ದೀಪಾವಳಿಯ ಸಂಭ್ರಮ |

October 26, 2022
8:50 PM

ದೇಶಾದ್ಯಂತ ಆಚರಿಸಲ್ಪಡುವ ಬೆಳಕಿನ ಹಬ್ಬ ದೀಪಾವಳಿಯನ್ನು(Deepavali) ಸೌಹಾರ್ದ ದೀಪಾವಳಿಯನ್ನಾಗಿ ಆಚರಿಸಬೇಕೆಂಬ ಉದ್ದೇಶದಿಂದ  ಸಮಾನ ಮನಸ್ಕರು ಮಂಗಳೂರು (Mangalore) ಇದರ ಆಶ್ರಯದಲ್ಲಿ ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಬಳಿಯಲ್ಲಿರುವ ಹ್ಯಾಮಿಲ್ಟನ್ ವೃತ್ತದಲ್ಲಿ ಸೌಹಾರ್ದ ದೀಪಾವಳಿಯನ್ನು ಆಚರಿಸಲಾಯಿತು.

ಸರ್ವ ಜನತೆಯ ಮನೆ ಮನ ಬೆಳಗಿಸುವ ಹಬ್ಬವಾದ ದೀಪಾವಳಿಯು ಅಜ್ಞಾನ, ಅಂಧಶ್ರದ್ದೆ, ದ್ವೇಷ ತುಂಬಿದ ಕತ್ತಲೆಯನ್ನು ಹೋಗಲಾಡಿಸಿ, ವಿಜ್ಞಾನ, ವೈಜ್ಞಾನಿಕ ಮನೋಭಾವ, ಪ್ರೀತಿ ತುಂಬಿದ ಬೆಳಕನ್ನು ಮೂಡಿಸಬೇಕಾಗಿದೆ. ಆ ಮೂಲಕ ಸೌಹಾರ್ದತೆ ಮಾನವೀಯತೆ ಬೆಳಗಿಸಬೇಕೆಂಬ ಆಶಯದೊಂದಿಗೆ ಜರುಗಿದ ದೀಪಾವಳಿ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಡಿವೈಎಫ್‌ಐ ನಾಯಕರಾದ ಮುನೀರ್ ಕಾಟಿಪಳ್ಳ, ಮಾಜಿ ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್, ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್, ಕಾರ್ಮಿಕ ನಾಯಕರಾದ ಸುನಿಲ್ ಕುಮಾರ್ ಬಜಾಲ್, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಸಮರ್ಥ್ ಭಟ್, ಯುವಜನ ನಾಯಕರಾದ ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಮನೋಜ್ ವಾಮಂಜೂರು, ತಯ್ಯೂಬ್ ಬೆಂಗರೆ, ಸಾಮಾಜಿಕ ಚಿಂತಕರಾದ ಅಸುಂತ ಡಿಸೋಜ, ಕ್ವೀನಿ ಪರ್ಸಿ ಆನಂದ್ ಮುಂತಾದವರು ಹಾಜರಿದ್ದರು.

ಖ್ಯಾತ ಹಾಡುಗಾರ್ತಿ ಮೇಘನಾ ಕುಂದಾಪುರ ಅವರಿಂದ ಸೌಹಾರ್ದ ಹಾಡುಗಳು ಪ್ರಸ್ತುತಗೊಂಡವು. ಬಳಿಕ ಪಟಾಕಿ ಸಿಡಿಸಿ ಸಿಹಿತಿಂಡಿ ಹಂಚಲಾಯಿತು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ
September 15, 2026
11:12 PM
by: ದ ರೂರಲ್ ಮಿರರ್.ಕಾಂ
ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ
September 15, 2026
10:09 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ
September 15, 2026
12:30 PM
by: ಸಾಯಿಶೇಖರ್ ಕರಿಕಳ
ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್‌ಗೆ ಮಂಗಳೂರಿನಲ್ಲಿ ಅಭಿನಂದನೆ – ಪುಟ್ಟ ಕಲಾವಿದನ ಸಾಧನೆಯ ಹಿಂದಿನ ಪಯಣಕ್ಕೆ ಮೆಚ್ಚುಗೆ
September 14, 2026
2:55 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror