#BlackMoney | ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ 11 %ಕುಸಿತ | ಸೆಪ್ಟೆಂಬರ್‌ನಲ್ಲಿ ಐದನೇ ಕಪ್ಪುಹಣದಾರರ ಪಟ್ಟಿ ಕೇಂದ್ರ ಸರ್ಕಾರದ ಕೈ ಸೇರುವ ಸಾಧ್ಯತೆ |

June 23, 2023
2:01 PM

ಭಾರತದ ಕಪ್ಪು ಹಣ ಹೊರ ದೇಶದ ಬ್ಯಾಂಕ್ ಗಳಲ್ಲಿ ಜಮೆಯಾಗುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ವರ್ಷದಿಂದ ವರ್ಷಕ್ಕೆ ಹಣ ಹೂಡಿಕೆ ಪ್ರಮಾಣ ಬೆಳೆಯುತ್ತಲೇ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸ್ವಿಜರ್ಲೆಂಡ್‌ನಲ್ಲಿರುವ ಸ್ವಿಸ್‌ ಬ್ಯಾಂಕ್‌ನಲ್ಲಿ #Swiss Banks ಭಾರತೀಯರ ಹೂಡಿಕೆ, ಡಿಪಾಸಿಟ್ ಪ್ರಮಾಣ ಇಳಿಕೆಯಾಗಿದೆ. 2021ಕ್ಕೆ ಹೋಲಿಸಿದರೆ 11% ರಷ್ಟು ಕುಸಿತ ಕಂಡಿದ್ದು, ಪ್ರಸ್ತುತ 3.42 ಶತಕೋಟಿ ಫ್ರಾಂಕ್‌ ಅಂದರೆ ಅಂದಾಜು 30 ಸಾವಿರ ಕೋಟಿ ರೂಪಾಯಿಗೆ ಇಳಿಕೆಯಾಗಿದೆ ಎಂದು ಸ್ವಿಸ್‌ ಕೇಂದ್ರೀಯ ಬ್ಯಾಂಕ್‌ನ ವಾರ್ಷಿಕ ದತ್ತಾಂಶ ವರದಿ ತಿಳಿಸಿದೆ.

2021ರಲ್ಲಿ ಭಾರತೀಯರು, ಭಾರತ ಮೂಲದ ಬ್ಯಾಂಚ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಒಟ್ಟು ಬಂಡವಾಳ 35 ಸಾವಿರ ಕೋಟಿ ರೂ.ಗೆ ಏರಿಕೆಯಾಗಿತ್ತು. ಇದು 14 ವರ್ಷಗಳಲ್ಲೇ ಗರಿಷ್ಠ ಬಂಡವಾಳ ಸಂಗ್ರಹ ಎನಿಸಿಕೊಂಡಿತ್ತು. ಬಂಡವಾಳ ಕಡಿಮೆಯಾದ ಹಿನ್ನೆಲೆಯಲ್ಲಿ ಕಳೆದ ವರ್ಷ 44ನೇ ಸ್ಥಾನದಲ್ಲಿ ಭಾರತ ಈ ಬಾರಿ 46ನೇ ಸ್ಥಾನ ಪಡೆದಿದೆ.

 

2006ರಲ್ಲಿ ಸಾರ್ವಕಾಲಿಕ ಗರಿಷ್ಟ 60 ಸಾವಿರ ಕೋಟಿ ರೂ. ಹೂಡಿಕೆಗೆ ಏರಿಕೆಯಾಗಿತ್ತು. 2011, 2013, 2017, 2020, 2021ರಲ್ಲಿ ಬಂಡವಾಳ ಏರಿಕೆಯಾಗಿತ್ತು. 2020ರಲ್ಲಿ ಸ್ವಿಸ್‍ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು 20,700 ಕೋಟಿ ರೂ. ಗಳಷ್ಟಿತ್ತು. ಅಘೋಷಿತ ವಿದೇಶಿ ಆಸ್ತಿಗಳನ್ನು ಘೋಷಿಸಲು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ  ವಿದೇಶದಲ್ಲಿ ಇಟ್ಟಿರುವ ಕಪ್ಪುಹಣದ #Black Money ವಿರುದ್ಧ ಸಮರ ಸಾರಿತ್ತು. ಸ್ವಿಸ್ ಬ್ಯಾಂಕ್‍ಗಳಲ್ಲಿ ಇಟ್ಟಿರುವ ಕಪ್ಪು ಹಣದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು.

ಹಲವು ಸುತ್ತಿನ ಮಾತುಕತೆಯ ಬಳಿಕ ಸ್ವಿಸ್‌ ಬ್ಯಾಂಕ್‍ನಲ್ಲಿ ಭಾರತೀಯರು ಹೊಂದಿರುವ ಖಾತೆಗಳ ವಿವರಗಳ ಮೊದಲ ಪಟ್ಟಿ 2018ರಲ್ಲಿ ಭಾರತದ ಕೈಸೇರಿತ್ತು. ಭಾರತ ಸರ್ಕಾರ ಹಾಗೂ ಸ್ವಿಜರ್ಲೆಂಡ್ ನಡುವೆ ನಡೆದ ಒಪ್ಪಂದದ ಅನ್ವಯ ಮಾಹಿತಿಯನ್ನು ಹಂಚಿಕೆ ಮಾಡಲಾಗಿತ್ತು. ಈ ಬೆಳವಣಿಗೆಯನ್ನು ಭಾರತದಲ್ಲಿ ತೆರಿಗೆ ವಂಚಿಸಿ ವಿದೇಶಿಗಳಲ್ಲಿ ಕಪ್ಪು ಹಣವಾಗಿಟ್ಟಿದ್ದ ಪತ್ತೆಯ ಕಾರ್ಯದಲ್ಲಿ ಹೊಸ ಮೈಲಿಗಲ್ಲು ಎಂದು ವಿಶ್ಲೇಷಿಸಲಾಗಿತ್ತು.

ಸ್ವಯಂಚಾಲಿತ ಮಾಹಿತಿ ವಿನಿಮಯ ಚೌಕಟ್ಟಿನ ಅಡಿಯಲ್ಲಿ ಭಾರತವು ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳ ನಾಲ್ಕನೇ ಪಟ್ಟಿಯನ್ನು 2022ರ ಅಕ್ಟೋಬರ್‌ನಲ್ಲಿ ಪಡೆದಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಐದನೇ ಪಟ್ಟಿ ಕೇಂದ್ರ ಸರ್ಕಾರದ ಕೈ ಸೇರುವ ಸಾಧ್ಯತೆಯಿದೆ.

(Source : Online)

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?
September 16, 2026
7:17 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ
September 15, 2026
11:12 PM
by: ದ ರೂರಲ್ ಮಿರರ್.ಕಾಂ
ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ
September 15, 2026
10:09 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ
September 15, 2026
12:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror