ಭಾರತದ ಕಪ್ಪು ಹಣ ಹೊರ ದೇಶದ ಬ್ಯಾಂಕ್ ಗಳಲ್ಲಿ ಜಮೆಯಾಗುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ವರ್ಷದಿಂದ ವರ್ಷಕ್ಕೆ ಹಣ ಹೂಡಿಕೆ ಪ್ರಮಾಣ ಬೆಳೆಯುತ್ತಲೇ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸ್ವಿಜರ್ಲೆಂಡ್‌ನಲ್ಲಿರುವ ಸ್ವಿಸ್ ಬ್ಯಾಂಕ್‌ನಲ್ಲಿ #Swiss Banks ಭಾರತೀಯರ ಹೂಡಿಕೆ, ಡಿಪಾಸಿಟ್ ಪ್ರಮಾಣ ಇಳಿಕೆಯಾಗಿದೆ. 2021ಕ್ಕೆ ಹೋಲಿಸಿದರೆ 11% ರಷ್ಟು ಕುಸಿತ ಕಂಡಿದ್ದು, ಪ್ರಸ್ತುತ 3.42 ಶತಕೋಟಿ ಫ್ರಾಂಕ್ ಅಂದರೆ ಅಂದಾಜು 30 ಸಾವಿರ ಕೋಟಿ ರೂಪಾಯಿಗೆ ಇಳಿಕೆಯಾಗಿದೆ ಎಂದು ಸ್ವಿಸ್ ಕೇಂದ್ರೀಯ ಬ್ಯಾಂಕ್‌ನ ವಾರ್ಷಿಕ ದತ್ತಾಂಶ ವರದಿ ತಿಳಿಸಿದೆ.
2021ರಲ್ಲಿ ಭಾರತೀಯರು, ಭಾರತ ಮೂಲದ ಬ್ಯಾಂಚ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಒಟ್ಟು ಬಂಡವಾಳ 35 ಸಾವಿರ ಕೋಟಿ ರೂ.ಗೆ ಏರಿಕೆಯಾಗಿತ್ತು. ಇದು 14 ವರ್ಷಗಳಲ್ಲೇ ಗರಿಷ್ಠ ಬಂಡವಾಳ ಸಂಗ್ರಹ ಎನಿಸಿಕೊಂಡಿತ್ತು. ಬಂಡವಾಳ ಕಡಿಮೆಯಾದ ಹಿನ್ನೆಲೆಯಲ್ಲಿ ಕಳೆದ ವರ್ಷ 44ನೇ ಸ್ಥಾನದಲ್ಲಿ ಭಾರತ ಈ ಬಾರಿ 46ನೇ ಸ್ಥಾನ ಪಡೆದಿದೆ.
2006ರಲ್ಲಿ ಸಾರ್ವಕಾಲಿಕ ಗರಿಷ್ಟ 60 ಸಾವಿರ ಕೋಟಿ ರೂ. ಹೂಡಿಕೆಗೆ ಏರಿಕೆಯಾಗಿತ್ತು. 2011, 2013, 2017, 2020, 2021ರಲ್ಲಿ ಬಂಡವಾಳ ಏರಿಕೆಯಾಗಿತ್ತು. 2020ರಲ್ಲಿ ಸ್ವಿಸ್‍ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು 20,700 ಕೋಟಿ ರೂ. ಗಳಷ್ಟಿತ್ತು. ಅಘೋಷಿತ ವಿದೇಶಿ ಆಸ್ತಿಗಳನ್ನು ಘೋಷಿಸಲು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿದೇಶದಲ್ಲಿ ಇಟ್ಟಿರುವ ಕಪ್ಪುಹಣದ #Black Money ವಿರುದ್ಧ ಸಮರ ಸಾರಿತ್ತು. ಸ್ವಿಸ್ ಬ್ಯಾಂಕ್‍ಗಳಲ್ಲಿ ಇಟ್ಟಿರುವ ಕಪ್ಪು ಹಣದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು.
ಸ್ವಯಂಚಾಲಿತ ಮಾಹಿತಿ ವಿನಿಮಯ ಚೌಕಟ್ಟಿನ ಅಡಿಯಲ್ಲಿ ಭಾರತವು ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳ ನಾಲ್ಕನೇ ಪಟ್ಟಿಯನ್ನು 2022ರ ಅಕ್ಟೋಬರ್‌ನಲ್ಲಿ ಪಡೆದಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಐದನೇ ಪಟ್ಟಿ ಕೇಂದ್ರ ಸರ್ಕಾರದ ಕೈ ಸೇರುವ ಸಾಧ್ಯತೆಯಿದೆ.
(Source : Online)
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…